ಹೊನ್ನಾಳಿ -ಪೆ;-3 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಅಹಿಂದ ಅಧ್ಯಕ್ಷರಾದ ಡಾ. ಈಶ್ವರ ನಾಯಕ್ ಮಾತನಾಡಿ, ಡಾ// ಬಿ ಆರ್ ಅಂಬೇಡ್ಕರ್ ರವರಿಗೆ ಗಣರಾಜ್ಯೋತ್ಸವ ದಿನದಂದು ರಾಯಚೂರಿನ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಎಂಬ ನ್ಯಾಯಾಧೀಶರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರವನ್ನು ತೆಗೆಸಿ ಅಪಮಾನ ಎಸಗಿದ್ದಾರೆ ಇದು ಅಕ್ಷಮ್ಯ ಅಪರಾಧ, ಸಂವಿಧಾನದ ಅಡಿಯಲ್ಲಿ ನ್ಯಾಯಾಧೀಶರಾಗಿರುವ ಇವರೇ ಈ ರೀತಿ ವರ್ತನೆ ಮಾಡಿದರೆ ಇಡೀ ದೇಶದ ಜನತೆಗೆ ಅವಮಾನ ಎಸಗಿದಂತೆ ದೇಶದ್ರೋಹ ಮಾಡಿದಂತೆ ಈ ಕೂಡಲೇ ಸರ್ಕಾರ ಇವರನ್ನು ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಹೇಳಿದರು .
ನಂತರ ಕಾಂಗ್ರೆಸ್ ಮುಖಂಡ ತಾಲೂಕ್ ಅಹಿಂದ ವರ್ಗದ ನಾಯಕರಾದ ಬಿ ಸಿದ್ದಪ್ಪ ಮಾತನಾಡಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ರವರಿಂದ ದೀನ ದಲಿತರು ,ಹಿಂದುಳಿದ ವರ್ಗದವರು ಎಂದಿಗೂ ನ್ಯಾಯ ಪಡೆಯಲಾರರು ಇಂತಹ ತಾರತಮ್ಯದ ನ್ಯಾಯಾಧೀಶರಿಂದ ಎಂದಿಗೂ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಇವರನ್ನು ಈ ಕೂಡಲೇ ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಡಿಎಸ್ಎಸ್ ನ ದಿಡಗೂರ್ ರುದ್ರೇಶ್ ಮಾತನಾಡಿ. ಮುಂದಿನ ದಿನಗಳಲ್ಲಿ ಅಹಿಂದಾ ವರ್ಗದ ನಾಯಕರ ಜೊತೆಯಲ್ಲಿ ಹಾಗೂ ಹೊನ್ನಾಳಿ ತಾಲೂಕಿನ ದಲಿತ ಸಂಘಟನೆ ಯವರು ಸೇರಿ ಹೋರಾಟವನ್ನು ಮುಂದುವರಿಸುತ್ತೇವೆ.ಎಂದು ಹೇಳುತ್ತಾ, ಅಂಬೇಡ್ಕರ್ ಅವರನ್ನು ಅವಮಾನಿಸುವ ಹಾಗೂ ಅಹಿಂದ ಜನರನ್ನು ಕಡೆಗಣಿಸುವ ಇಂತಹ ನೀಚ ಸರ್ಕಾರವನ್ನು ಕಿತ್ತೆಸೆಯುತ್ತೇವೆ ,ಘಟನೆ ನಡೆದು ಇಷ್ಟು ದಿನಗಳಾದರೂ ಇನ್ನೂ ಕೂಡ ಮಲ್ಲಿಕಾರ್ಜುನ್ ಗೌಡರನ್ನು ವಜಾಗೊಳಿಸಿಲ್ಲ, ಕೂಡಲೇ ಅವರನ್ನು ಆ ಹುದ್ದೆಯಿಂದ ವಜಾ ಮಾಡಬೇಕು. ವಜಾಗೊಳಿಸದೆ ಉದಾಸೀನ ತೋರಿದಲ್ಲಿ ಉಗ್ರವಾದ ಹೋರಾಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯುರುದ್ದ ನಡೆಸಲಾಗುವುದು ಎಂದು ತಿಳಿಸಿದರು. ಡಿಎಸ್ಎಸ್ ಮುಖಂಡ ತಮ್ಮಣ್ಣ ದಿಡಗುರು ಮಾತನಾಡಿ, ಅಂಬೇಡ್ಕರ್ ಒಬ್ಬರಿಗೆ ಅವಮಾನ ಮಾಡಿಲ್ಲ,ಇಡಿ ದೇಶಕ್ಕೆ ಅವಮಾನ ಮಾಡಿದ ಹಾಗೆ ಹಾಗಾಗಿ ಈ ಮಲ್ಲಿಕಾರ್ಜುನಗೌಡ ಒಬ್ಬ ನ್ಯಾಯಾಧೀಶರಾಗಿ ಅನಾಗರಿಕರಂತೆ ವರ್ತಿಸಿದ್ದಾರೆ, ಒಂದು ಅಂಬೇಡ್ಕರ್ ಭಾವಚಿತ್ರ ತೆಗೆಸಿದರೆ ಏನಂತೆ, ಇಡೀ ದೇಶದ ಉದ್ದಗಲಕ್ಕೂ ಅಂಬೇಡ್ಕರ್ ಪ್ರತಿಮೆಗಳು ರಾರಾಜಿಸುತ್ತಿವೆ. ಅವರ ಶಕ್ತಿ ಇಡೀ ಪ್ರಪಂಚಕ್ಕೆ ಗೊತ್ತು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್ ಬಿ ಶಿವಯೋಗಿ. ಅರಕೆರೆ ನಾಗಪ್ಪ. ಪ್ರಭಾಕರ್ ಕೆಂಗಲ ಹಳ್ಳಿ. ಹಾಲೇಶಪ್ಪ ಕೆಂಗಲಹಳ್ಳಿ. ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಜರ್ ವುಲ್ ಸಾಬ್. ಭಾಷಾ ಸಾಬ್. ಹಸನ್ ಸಾಬ್. ಕರವೇ ಶ್ರೀನಿವಾಸ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಪಕ್ಷದ ಕಾರ್ಯಕರ್ತರುಗಳು ಸಹ ಉಪಸ್ಥಿತರಿದ್ದರು.