ನ್ಯಾಮತಿ-ಪೆ;-23;- ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಪ್ರಥಮ ಸಭೆಯನ್ನು ಪರಿಷತ್ತಿನ ಕಚೇರಿಯಲ್ಲಿ ನಡೆಸಲಾಯಿತು.
ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಿಜಲಿಂಗಪ್ಪ, ಬೆಳಗುತ್ತಿ ಜಿ ಕುಬೇರಪ್ಪ ,ಲೋಕೇಶ್ವರಯ್ಯ, ನಿವೃತ್ತ ಉಪನ್ಯಾಸಕರಾದ ಬಸವರಾಜಪ್ಪ , ತಾಲೂಕು ನೂತನ ಅಧ್ಯಕ್ಷರಾದ ಶ್ರೀ ಡಿ .ಎಂ ಹಾಲಾರಾಧ್ಯರವರನ್ನು ಕನ್ನಡದ ಶಾಲು ಮತ್ತು ಹೂವಿನ ಹಾರ ಹಾಕುವ ಮೂಲಕ ಬರಮಾಡಿಕೊಂಡರು.
ನೂತನ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರೆಲ್ಲರೂ ಶ್ರೀಯುತ ಡಿ ಎಂ ಹಾಲಾರಾಧ್ಯ ಇವರ ಅಧ್ಯಕ್ಷತೆಯಲ್ಲಿ ಮೊದಲ ಸಭೆಯನ್ನು ನಡೆಸಿ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು.
ಪ್ರತಿ ತಿಂಗಳು ಸಭೆ ನಡೆಯುವ ದಿನಾಂಕ ,ಕನ್ನಡ ಭವನ ಕಟ್ಟಡ ನಿರ್ಮಾಣಕ್ಕಾಗಿ ಕಟ್ಟಡ ಸಮಿತಿ ರಚನೆ, ಪರಿಷತ್ತಿಗೆ ಮಾರ್ಗದರ್ಶನ ನೀಡುವ ಸಲುವಾಗಿ ತಾಲೂಕಿನ ಹಿರಿಯರ ಚಿಂತಕರನ್ನು ಒಳಗೊಂಡ ಗೌರವ ಸಲಹಾ ಸಮಿತಿ ರಚನೆ ಇದರ ಬಗ್ಗೆ ಚರ್ಚಿಸಲಾಯಿತು.
ನ್ಯಾಮತಿ ತಾಲೂಕು ಘಟಕ ದಾವಣಗೆರೆ ಜಿಲ್ಲೆ
ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಘಟಕ ಬೆಂಗಳೂರು ಇವರಿಂದ ಅನುಮೋದನೆಗೊಂಡಿರುವ ನ್ಯಾಮತಿ ತಾಲೂಕಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಈ ರೀತಿಯಾಗಿದೆ.
ಅಧ್ಯಕ್ಷರು :
ಡಿ ಎಮ್ ಹಾಲಾರಾಧ್ಯರು
ಗೌರವ ಕಾರ್ಯದರ್ಶಿಗಳು:
೧.ಎಸ್. ಜಿ. ಬಸವರಾಜಪ್ಪ
೨.ಚೈತ್ರ ಬಿ ಜಿ.
ಕೋಶಾಧ್ಯಕ್ಷರು
ಬಸವರಾಜಪ್ಪ ಕೆ ಎಂ
ಮಹಿಳಾ ಸಾಹಿತಿಗಳು:
೧.ಬಿ ಆರ್ ಭಾಗ್ಯಲಕ್ಷ್ಮಿ
೨.ಯು ಮಂಜುಳ.
ಪರಿಶಿಷ್ಟ ಜಾತಿ ಪ್ರತಿನಿಧಿ :
೧.ವೆಂಕಟೇಶ್ ನಾಯ್ಕ
೨.ಎ. ಕೆ ಕರಿಬಸಪ್ಪ
ಪರಿಶಿಷ್ಟ ಪಂಗಡ ಪ್ರತಿನಿಧಿ :
ಬಂಡಿ ಈಶ್ವರಪ್ಪ
ಸಂಘ ಸಂಸ್ಥೆಗಳ ಪ್ರತಿನಿಧಿ
ವಿಜಯೇಂದ್ರ ಮಹೇಂದ್ರಕರ್.
ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು
ರಾಜೀವ್ ಜಿ ಇ.
ನಿಕಟಪೂರ್ವ ಅಧ್ಯಕ್ಷರು
ಜಿ ನಿಜಲಿಂಗಪ್ಪ
ಇತರೆ ಸದಸ್ಯರು :
ಲೋಕೇಶ್ವರಯ್ಯ.ಎಂ
ಮುರುಡಪ್ಪ ಜಿ
ಚಂದ್ರೇಗೌಡ .ಪಿ
ಚಂದನ್. ಜಿ ಪಿ
ಕುಬೇರಪ್ಪ. ಜಿ
ತೀರ್ಥಲಿಂಗಪ್ಪ. ಜಿ ಇವರೆಲ್ಲರನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಆದೇಶ ಇರುವ ಹಿನ್ನೆಲೆಯಲ್ಲಿ ಇವರುಗಳು ಕನ್ನಡ ನಾಡು. ನೆಲ .ಜಲ .ಗಡಿಗೆ ವಿಚಾರಕ್ಕೆ ಬೇರೆ ರಾಜ್ಯದಿಂದ ನಮ್ಮ ರಾಜ್ಯ ಕ್ಕೆ ಅನ್ಯಾಯವಾದರೆ ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತು ಸುಮ್ಮನೆ ಕೂರುವುದಿಲ್ಲ ಎಂದು ನೂತನ ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಎಂ ಹಾಲಾರಾಧ್ಯರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .