ಜಿಲ್ಲಾ ಗೃಹರಕ್ಷಕದಳದ ಕೆ. ಸರಸ್ವತಿ ಸ್ಟಾಫ್ ಆಫೀಸರ್
(ಪ್ರಚಾರ), ದೈ.ಶಿ.ಶಿ., ಬಾ.ಸ.ಪ.ಪೂ. ಕಾಲೇಜ್(ಪ್ರೌಢಶಾಲೆ ವಿಭಾಗ)
ದಾವಣಗೆರೆ ಹಾಗೂ ಗೃಹರಕ್ಷಕದಳ ನ್ಯಾಮತಿ ಘಟಕದ ಪ್ಲಟೂನ್
ಕಮಾಂಡರ್ ಘಟಕಾಧಿಕಾರಿ ಎಂ. ರಾಘವೇಂದ್ರ ಇವರಿಗೆ
ಇಲಾಖೆಯಲ್ಲಿನ ಸಾಧನೆಗಳನ್ನು ಗುರುತಿಸಿ 2021ನೇ ಸಾಲಿನಲ್ಲಿ
ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ನಗದು ಬಹುಮಾನ
ಘೋಷಿಸಲಾಗಿದೆ.
ದಾವಣಗೆರೆ ಜಿಲ್ಲಾ ಗೃಹರಕ್ಷಕದಳದ ಪ್ರಭಾರ
ಸಮಾದೇಷ್ಟರಾದ ರಾಮಗೊಂಡ ಬಸರಗಿ ಮತ್ತು ಜಿಲ್ಲಾ
ಗೃಹರಕ್ಷಕದಳದ ಕಛೇರಿ ಸಿಬ್ಬಂದಿ ಹಾಗೂ ಜಿಲ್ಲೆಯ ಎಲ್ಲಾ
ಘಟಕಗಳ ಗೃಹರಕ್ಷಕ ಅಧಿಕಾರಿ ಮತ್ತು ಸದಸ್ಯರು
ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಹೋಂ ಗಾಡ್ರ್ಸ್ ಕಮಾಂಡೆಂಟ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.