ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮೇ 12 ಪ್ಲಾರೆನ್ಸ್ ನೈಟಿಂಗೆಲ್ ದಿನವನ್ನು ವಿಶ್ವ ದಾದಿಯರ ದಿನ / (ಇಂಟರ್ ನ್ಯಾಷನಲ್ ನರ್ಸ ಡೇ) ಎಂದು ಮೇ 12 ರಂದು ಅಂಗವಾಗಿ ಹೊನ್ನಾಳಿ ಯುವ ಮಿತ್ರರು ಸೇರಿ ದಾದಿಯರಿಗೆ ಪುಷ್ಪಾರ್ಚನೆ ಮಾಡುವುದರ
ಮುಖೇನ ಅವರುಗಳಿಗೆ ಶುಭಾಷಯಗಳನ್ನು ಕೋರಿದರು.
ನಂತರ ದಾದಿಯರಾದ (ನರ್ಸ) ಶ್ರೀಮತಿ ನಾಗರತ್ನಮ್ಮನವರು ಮಾತನಾಡಿ ನೀವುಗಳು ಪುಷ್ಪಾರ್ಚನೆ ಮಾಡುವುದರ ಮೂಖಾಂತರ ಶುಭಾಷಯಗಳನ್ನು ಕೋರಿರುವುದು ನಮಗೆ ಸಂತೋಷ ಮತ್ತು ಆನಂದಭಾಷ್ಪ ತಂದಿದೆ, ಕಾರಣ ಕೋರೋನಾ ಕೋವಿಡ್ 19 ಈ ಸಮಯದಲ್ಲಿ ಈ ರೀತಿ ಗೌರವ ಸಲ್ಲಿಸಿದ್ದಕ್ಕೆ ಆನೆ ಬಲ ಬಂದಂತಾಗಿದೆ, ಹಾಗೂ ರೋಗಿಗಳಿಗೆ ಹಗಲು, ಇರುಳು ಸೇವೆ ಮಾಡಲು ಸದಾ ಸಿದ್ದರಿದೇವೆ ಎಂದು ಹೇಳುತ್ತಾ ನಿಮ್ಮಗೆ ಧನ್ಯವಾದಗಳನ್ನು ಈ ಸಂದರ್ಭದಲ್ಲಿ
ತಿಳಿಸಲಿಕ್ಕೆ ಇಷ್ಟಪಡುತ್ತಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;- ಹೊಸ್ಕೆರಿ ಸುರೇಶ್, ಸತ್ತಿಗಿ ಲೋಕೆಶ್, ಕತ್ತಗಿ ನಾಗರಾಜ್, ಕರವೇ ಶ್ರೀನಿವಾಸ್, ಪಿಗ್ಮಿ
ಶ್ರೀನಿವಾಸ್, ಕಿರಿಯ ಆರೋಗ್ಯ ಸಹಾಯಕರಾದ ನಾಗರತ್ನಮ್ಮ, ಅಂಗನವಾಡಿಯ ಕಾರ್ಯಕರ್ತೆಯವರಾದ ವನಜಾಕ್ಷಮ್ಮ, ಆಶಾಕಾರ್ಯಕರ್ತೆಯರಾದ, ಸವಿತಾ, ಮಂಜುಳಾ, ಭಾರತಿ, ಶಿಲ್ಪಾ, ಮುಂತಾದವರು ಸಹ ಭಾಗಿಯಾಗಿದ್ದರು.