ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆಯನ್ನು ಕೈಬಿಟ್ಟು ಹಿಂದಿನ ಕಂದಾಯವನ್ನೆ ಪರಿಗಣಿಸಬೇಕೆಂದು ದಾವಣಗೆರೆ ಮಹಾನಗರ ಪಾಲಿಕೆ ವಿಪಕ್ಷ ಕಾಂಗ್ರೆಸ್ ಸದಸ್ಯರುಗಳು ಇಂದು ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೋವಿಡ್-19 ಸಂಕಷ್ಟದಿಂದ ಕಳೆದ 2 ತಿಂಗಳಕಾಲ ವಾಣಿಜ್ಯ ನಗರವಾದ ದಾವಣಗೆರೆ ಸ್ಥಬ್ದಗೊಂಡಿದೆ ಯಾವುದೇ ವ್ಯಾಪಾರ ವಹಿವಾಟು ನಡೆದಿರುವುದಿಲ್ಲ. 2 ತಿಂಗಳುಗಳ ಕಾಲ ಜನ ಲಾಕ್‍ಡೌನ್, ಜನತಾಕಪ್ರ್ಯೂ ಇವುಗಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ ಅಂದು ದುಡಿದು ಅಂದೇ ತಿನ್ನುವ ಜನರ ಬದುಕು ಬೀದಿಗೆ ಬಿದ್ದಿದೆ ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರವು ಅವರ ನೆರವಿಗೆ ಬರುವ ಅವಶ್ಯಕತೆ ಇದೆ, ಹಳೆಯ ಕಂದಾಯವನ್ನು ಮುಂದುವರಿಸುವಂತೆ ತಾವು ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಕೇಳಿಕೊಂಡರು.

ಕಾಂಗ್ರೆಸ್ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇದು ಸರ್ಕಾರದ ಮಟ್ಟದಲ್ಲಿ ಆಗ ಬೇಕಾಗಿರುವುದರಿಂದ ತಾವು ಸರ್ಕಾರದ ಗಮನಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ದಿನೇಶ್ .ಕೆ. ಶೆಟ್ಟಿ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ಚಮನ್ ಸಾಬ್, ಸೈಯದ್ ಚಾರ್ಲಿ ಹಾಗೂ ಹುಲ್ಮನಿ ಗಣೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *