ದಾವಣಗೆರೆ ಜೂ 6
ಜಿಲ್ಲಾ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಚನ್ನಗಿರಿ
ತಾಲ್ಲೂಕಿನ ಕೋಗಲೂರು ಕ್ಷೇತ್ರದ ಸಾಕಮ್ಮ ಗಂಗಾಧರ
ನಾಯ್ಕ್ ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಸಭಾಂಗಣದಲ್ಲಿ ಶನಿವಾರ ಜಿ.ಪಂ
ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಗೆ ಬೆಳಿಗ್ಗೆ 9.30 ರಿಂದ
10.30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ
ಅವಧಿಯಲ್ಲಿ ಸಾಕಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ
ಜಿ.ಪಂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬೆಂಗಳೂರು ಚುನಾವಣಾ ಪ್ರಾದೇಶಿಕ ಆಯುಕ್ತರಾದ
ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಒಟ್ಟು 29 ಸದಸ್ಯರಲ್ಲಿ 20 ಮಂದಿ ಭಾಗವಹಿಸಿದ್ದರು. ಆಯುಕ್ತರು
ಸಾಕಮ್ಮ ಗಂಗಾಧರ ನಾಯ್ಕ್ ಅವರನ್ನು ಅವಿರೋಧವಾಗಿ
ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ
ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್, ಜಿಲ್ಲೆಯ ಅಭಿವೃದ್ಧಿ
ಕಾರ್ಯಗಳಿಗೆ ಶ್ರಮಿಸುವೆ. ಶಾಸಕರು, ಸಚಿವರೊಂದಿಗೆ
ಸೇರಿಕೊಂಡು ಒಗ್ಗೂಡಿ ಕೆಲಸ ಮಾಡುವೆ. ಮುಖ್ಯವಾಗಿ ಕುಡಿಯುವ
ನೀರು ಹಾಗೂ ಎನ್‍ಆರ್‍ಇಜಿ ಕೆಲಸÀಗಳಿಗೆ ಆದ್ಯತೆ ನೀಡಲಾಗುವುದು
ಎಂದರು.
ಕೊರೊನಾ ಸಂದರ್ಭ ಇದಾಗಿದ್ದು, ಜನರಲ್ಲಿ ಆರೋಗ್ಯದ
ಕುರಿತು ಹಾಗೂ ವೈರಾಣು ನಿಯಂತ್ರಣದ ಕುರಿತು ಜಾಗೃತಿ
ಮೂಡಿಸುವ ಕೆಲಸ ಮಾಡುವೆ ಎಂದ ಅವರು, ಉಪಾಧ್ಯಕ್ಷೆಯಾಗಿ
ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ
ಸಲ್ಲಿಸುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡಲು
ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಈ ಸಂದÀರ್ಭದಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ,
ಜಿ.ಪಂ ಪ್ರಭಾರ ಅಧ್ಯಕ್ಷರಾದ ಲೋಕೇಶ್ವರ್, ಮಾಜಿ ಅಧ್ಯಕ್ಷೆ
ಯಶೋಧಮ್ಮ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ, ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಇದ್ದರು.