ಹೊನ್ನಾಳಿ : ನಾನು ಇಚ್ಚಾಶಕ್ತಿಯಿಂದ,ಬದ್ದತೆಯಿಂದ ನನ್ನ ಕರ್ತವ್ಯವನ್ನು ಮಾಡುತ್ತಿದ್ದು ಜನರೂ ಕೂಡ ನಮ್ಮೊಂದಿಗೆ ಕೈಜೋಡಿಸುವ ಮೂಲಕ ಅವಳಿ ತಾಲೂಕುಗಳಲ್ಲಿ ಕೊರೊನಾವನ್ನು ನಿರ್ಮೂಲನೆ ಮಾಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಾಲೂಕು ಆಸ್ಪತ್ರೆಗಿಂದು ಹೊಸದಾಗಿ 25 ಆಮ್ಲಜನಕ ಸಾಂಧ್ರಕಗಳು ಬಂದಿದ್ದು ಅವುಗಳನ್ನು ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿನ್ನೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕಾವೇರಿಯಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೋವಿಡ್ ನಿರ್ವಹಣೆಗಾಗೀ 10 ವೆಂಟಿಲೇಟರ್ ಹಾಗೂ 25 ಆಮ್ಲಜನಕ ಸಾಂಧ್ರಕಗಳನ್ನು ನೀಡುವಂತೆ ಮನವಿ ಮಾಡಿದ್ದೇ. ನನ್ನ ಮನವಿಗೆ ಸ್ಪಂಧಿಸಿದ ಸಿಎಂ 25 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು ಅವುಗಳನ್ನು ಖುದ್ದು ನಾನೇ ಬಾಡಿಗೆ ವಾಹನ ಮಾಡಿಕೊಂಡು ಹೊನ್ನಾಳಿಗೆ ತಂದು ಅವುಗಳನ್ನು ಆಸ್ಪತ್ರೆಗೆ ನೀಡಿದ್ದೇನೆ ಎಂದರು.
ಹತ್ತು ವೆಂಟಿಲೇಟರ್‍ಗಳು, ಇನ್ನೂ 25 ಆಮ್ಲಜನಕ ಸಾಂದ್ರಕಗಳನ್ನು ನೀಡುವುದಾಗಿ ಸಿಎಂ ಬರವಸೆ ನೀಡಿದ್ದು ಅವುಗಳು ಸದ್ಯದಲ್ಲೇ ಬರಲಿವೆ ಎಂದ ಶಾಸಕರು, ಆಮ್ಲಜನಕ ಸಾಂದ್ರಕ ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
ನನಗೆ ಅಧಿಕಾರ ಮುಖ್ಯವಲ್ಲ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನರ ಆರೋಗ್ಯವೇ ಮುಖ್ಯ ಈ ನಿಟ್ಟಿನಲ್ಲಿ ನಾನು ಮತ್ತು ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದ್ದೇವೆ ಎಂದ ಶಾಸಕರು, ಜನರ ನಿರ್ಲಕ್ಷದಿಂದ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಪ್ರತಿನಿತ್ಯ ಆಕ್ಸಿಜನ್‍ಬೆಡ್ ಬೇಕು, ವೆಟಿಲೇಟರ್ ಬೆಡ್ ಬೇಕೆಂದು ಸಾಕಷ್ಟು ಜನರು ಕರೆ ಮಾಡುತ್ತಿದ್ದು, ನಾನು ಶಕ್ತಿ ಮೀರಿ ಬೆಡ್ ಕೊಡಿಸುವ ಕೆಲಸ ಮಾಡುತ್ತಿದ್ದು, ನನ್ನ ಜೊತೆ ಹತ್ತು ಜನರ ತಂಡ ಕೆಲಸ ಮಾಡುತ್ತಿದ್ದು ತಕ್ಷಣ ಸ್ಪಂಧಿಸಿ ಬೆಡ್ ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಶಾಸಕರು ಕೆಲವರು ಭಯದಿಂದ ಸಾವನ್ನಪ್ಪುತ್ತಿದ್ದು, ಕೊರೊನಾ ಲಕ್ಷಣ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಂಡರೇ ಇಷ್ಟೇಲ್ಲಾ ಸಮಸ್ಯೆಗಳು ಆಗುವುದಿಲ್ಲಾ ಎಂದು ಕಿವಿ ಮಾತು ಹೇಳಿದರು.
ಇನ್ನು ನನ್ನ ಕೆಲಸವನ್ನು ಕಂಡು ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತ ಪಡಿಸಿ ಕರೆ ಮಾಡುತ್ತಿದ್ದಾರೆ, ಇದು ನನಗೆ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೇ ಎಂದ ಶಾಸಕರು, ಅವಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಸಮುದಾಯಕ್ಕೂ ಕೊರೊನಾ ಹಬ್ಬಿದ ಹಿನ್ನೆಲೆಯಲ್ಲಿ ಮೂರು ದಿನ ಲಾಕ್‍ಡೌನ್ ಯಶಸ್ವಿಯಾಗಿದ್ದು ನಾಳೆ ಬೆಳಗ್ಗೆ 6 ಘಂಟೆಯವರೆಗೂ ಈ ಲಾಕ್ ಡೌನ್ ಮುಂದುವರೆಯಲಿದ್ದು, ಲಾಕ್‍ಡೌನ್‍ಗೆ ಸಹಕಾರ ನೀಡಿದ ವರ್ತಕರು, ಸಾರ್ವಜನಿಕರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.
ಕೋವಿಡ್ ಕೇರ್ ಸೆಂಟರ್‍ಗಳಿಗೆ ನೂರು ಕಾಟು ಹಾಗೂ ನೂರು ಬೆಡ್‍ಗಳನ್ನು ಉಚಿತವಾಗಿ ಕೊಡುವುದಾಗಿ ಹೇಳಿದ್ದೇ ಆದರೇ ಬೆಡ್ ಹಾಗೂ ಕಾಟ್‍ಗಳು ಸಿಗ್ತಾ ಇಲ್ಲಾ, ಅವು ಸಿಕ್ಕ ತಕ್ಷಣ ಅವನ್ನ ಕೋವಿಡ್ ಕೇರ್ ಸೆಂಟರ್‍ಗಳಿಗೆ ನೀಡುತ್ತೇನೆ ಎಂದ ಶಾಸಕರು ಹೋಮ್ ಹೈಸೋಲೇಷನ್ ಅನ್ನು ರದ್ದು ಮಾಡಿದ್ದು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದು ಚಿಕಿತ್ಸೆ ಪಡೆಯುವಂತೆ ಶಾಸಕರು ಮನವಿ ಮಾಡಿದರು.
ಹೊಸದಾಗಿ ಕೋವಿಡ್ ಕೇರ್ ಸೆಂಟರ್ ಆರಂಭ : ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ 50 ಇದ್ದ ಆಕ್ಸಿಜನ್ ಬೆಡ್ 60 ಮಾಡಿದ್ದೇವೆ. ಅಷ್ಟೇ ಅಲ್ಲದೇ ಮಾದನಬಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 125 ಬೆಡ್‍ಗಳು, ಕಡದಕಟ್ಟೆಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 106 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಕೆಲಸ ನಿರ್ವಹಿಸುತ್ತಿದ್ದು ಇದರ ಜೊತೆಗೆ ಸಾಸ್ವೇಹಳ್ಳಿಯ ಸಮಾಜಕಲ್ಯಾಣ ಇಲಾಖೆ ಹಾಸ್ಟೇಲ್ ನಲ್ಲಿ 60 ಬೆಡ್ ಹಾಗೂ ಜೀವನಹಳ್ಳಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೇಲ್‍ನಲ್ಲಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗಳನ್ನು ಹೊಸದಾಗಿ ಆರಂಭಿಸಲಾಗಿದೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ : ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಸಚಿವ ಸ್ಥಾನ ಬೇಕಾಗಿಲ್ಲಾ, ನಾವು ಅಧಿಕಾರಕ್ಕಾಗಿ ಕೆಲಸ ಮಾಡುತಿಲ್ಲಾ, ನನ್ನ ಕ್ಷೇತ್ರದ ಜನರಿಗಾಗೀ ನಾನು ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಪ್ರತಿನಿತ್ಯದಂತೆ ಇಂದೂ ಉಪಹಾರ : ತಾಲೂಕು ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರು, ಸಿಬ್ಬಂದಿಗಳು, ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರು,ಪೊಲೀಸರಿಗೆ ಪ್ರತಿನಿತ್ಯ ಉಪಹಾರ ನೀಡುತ್ತಿದ್ದು ಇಂದೂ ಕೂಡ ಉಪಹಾರ(ಟಮ್ಯಾಟೋ ಬಾತ್) ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದರು.
ಆಮ್ಲಜನಕ ಸಾಂಧ್ರಕಗಳು : ತಾಲೂಕು ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ 18 ಆಮ್ಲಜನಕ ಸಾಂದ್ರಕಗಳು ಬಂದಿದ್ದು ಇಂದು 25 ಆಮ್ಲಜನಕ ಸಾಂದ್ರಕಗಳು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದು ಸದ್ಯ 43 ಆಮ್ಲಜನಕ ಸಾಂಧ್ರಕಳು ಆಸ್ಪತ್ರೆಯಲ್ಲಿ ಇನ್ನೆರಡು ದಿನಗಳಲ್ಲಿ ಮತ್ತೆ 25 ಆಮ್ಲಜನಕ ಸಾಂದ್ರಕಗಳು ಹೊನ್ನಾಳಿ ಬರಲಿವೆ.
ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಕೆಂಚಪ್ಪ, ತಹಶೀಲ್ದಾರ್ ಬಸನಗೌಡ ಕೋಟೂರ, ಸಿಪಿಐ ದೇವರಾಜ್, ಎಸೈ ಬಸವನಗೌಡ ಬಿರಾದರ್,ಡಾ.ಸಂತೋಷ್ ,ಬಗರ್ ಹುಕ್ಕುಂ ಕಮಿಟಿ ಅಧ್ಯಕ್ಷರಾದ ನಾಗರಾಜ್ ಸೇರಿದಂತೆ ಮತ್ತೀತತರರಿದ್ದರು.

Leave a Reply

Your email address will not be published. Required fields are marked *