ರಾಜ್ಯದಲ್ಲಿ ವಿಪರೀತವಾಗಿ ಕೊರೋನಾ ಮಹಾ ಮಾರಿ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದು ಆ ಕುಟುಂಬಗಳ ಪರಿಸ್ಥಿತಿ ಅಯೋಮಯವಾಗಿದೆ. ತಂದೆ ತಾಯಿಯನ್ನು ಕಳೆದುಕೊಂಡರು, ಹಾಗೂ ಆಣ್ಣ, ತಮ್ಮ, ಅಕ್ಕ,ತಂಗಿ, ಇವರಿಗೆ ವಯಸ್ಸಿದ್ದೂ ಮುಂದೆ ಬಾಳಿ ಬದುಕಬೇಕಾಗಿದ್ದ ಮಕ್ಕಳು ಸಹ ಮರಣ ಹೊಂದಿದ್ದು ಅಂತಹ ಕುಟುಂಬವನ್ನು ಕೇಳುವರಿಲ್ಲದ ಹಾಗೆ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಕೇವಲ ಸಣ್ಣಪುಟ್ಟ ಪರಿಹಾರವನ್ನು ನೀಡಿದೆ. ಕೇಂದ್ರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದ್ದ ಆದೇಶ ವಾಪಾಸು ಪಡೆಯಲಾಗಿದೆ. ಆದರೆ ಮುಂದಿನ ಜೀವನವನ್ನು ಹೇಗೆ ಸಾಗಿಸಬೇಕೆಂಬುದು ಈ ಮಕ್ಕಳ ಚಿಂತೆಯಾಗಿದೆ.
ಇಂಥಹ ಕುಟುಂಬಗಳ ರಕ್ಷಣೆ ಮಾಡಬೇಕಾಗಿರುವುದು ಆಡಳಿತ ಮಾಡುತ್ತಿರುವ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಕರ್ನಾಟಕ ಸರ್ಕಾರದಲ್ಲಿ ಹಲವಾರು ವರ್ಷಗಳಿಂದ ಲಕ್ಷಾಂತರ ಹುದ್ದೆಗಳು ಖಾಲಿ ಇರುವುದು ತಿಳಿದ ವಿಶಯವಾಗಿದ್ದು, ಕೊರೋನಾ ಸೋಂಕಿತ ಕುಟುಂಬದಲ್ಲಿ ಯಾರೇ ಮರಣ ಹೊಂದಿರುವ ಆ ಕುಟುಂಬಲ್ಲಿ ಒಬ್ಬರಿಗೆ ಸರ್ಕಾರ ಅವರ ವಿದ್ದೆಗೆ ಅನುಗುಣವಾಗಿ ಸರ್ಕಾರಿ ಕೆಲಸ ನೀಡಬೇಕೆಂದು ಒತ್ತಾಯಪೂರ್ವಕವಾಗಿ ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *