ದಿನ ಬಿಟ್ಟು ದಿನ ಲಾಕ್ ಡೌನ್
ಇರುವುದರಿಂದ ಜನರ ಮನಸ್ಸಿಗೆ
ಕಿರಿಕಿರಿಯಾಗುತ್ತಿದ್ದು, ಈ ಕರೋನ
ಮಾರಿ ಎಂದು ತಮ್ಮನ್ನು
ಬಿಡುಗಡೆಗೊಳಿಸುತ್ತದೆಯೋ ಎಂಬ
ಭಾವನೆಗಳನ್ನ ಹೊಂದುತ್ತಿದ್ದಾರೆ.
ಅವರ ಆತ್ಮ ಸ್ತೈರ್ಯ ಹೆಚ್ಚಿಸುವ
ಕೆಲಸಮಾಡಬೇಕಾಗಿದೆ. ಅವರನ್ನ
ಮನೆಯಲ್ಲೇ ನೆಮ್ಮದಿ ಮತ್ತು
ಶಾಂತಿಯಿಂದ ಇದ್ದು, ಕರೋನದ
ವಿರುದ್ಧ ಹೋರಾಡುವ
ಮಾರ್ಗೋಪಾಯಗಳನ್ನ
ಕಂಡುಹಿಡಿದು ಕೊಳ್ಳಬೇಕಾಗಿದೆ
ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.
ಅವರು ನಗರದ ತರಳಬಾಳು
ನಗರದ ಒಂದನೇ ಮುಖ್ಯರಸ್ತೆಯಲ್ಲಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮ ಸಂಘದ
ಸಹಯೋಗದೊಂದಿಗೆ ಆಯೋಜಿಸಿದ್ದ
“ಮನೆಯಲ್ಲೇ ಇರಿ, ಜಾಗ್ರತರಾಗಿರಿ”
ಎಂಬ ಕರೋನ ವಿರುದ್ದ ಜನಜಾಗೃತಿ
ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈಹಿಕ ಶ್ರಮದಿಂದ
ವಂಚಿತರಾದಂತಹ ಜನರ ಆರೋಗ್ಯ
ಹದಗೆಡವುದರಿಂದ, ಅವರು ಸಕ್ಕರೆ
ಕಾಯಿಲೆ, ರಕ್ತದೊತ್ತಡ, ಸಂಧಿ
ನೋವುಗಳು, ಮುಂತಾದ
ಕಾಯಿಲೆಗಳಿಂದ ಸಾಕಷ್ಟು
ತೊಂದರೆ ಅನುಭವಿಸುತ್ತಿದ್ದು,
ಯುವಕರಿಗೆ ಮಾಂಸ ಖಂಡಗಳ
ಸೆಳೆತ, ಮಾನಸಿಕ ಖಿನ್ನತೆ,
ಮುಂತಾದ ತೊಂದರೆಗಳು ಸಹ
ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ
ಸುತ್ತಮುತ್ತಲ ವಾತಾವರಣದಲ್ಲಿ,
ಜನರ ಮನಸ್ಸು
ಹಗುರವಾಗುವಂತಹ
ಕಾರ್ಯಕ್ರಮಗಳನ್ನ ಮನೆಯ
ಗೇಟಿನ ಬಳಿ, ಮನೆಯ ತಾರಸಿಯ
ಮೇಲೆ ಚಿತ್ರ ಪ್ರದರ್ಶನ,
ಹಾಡುಗಾರಿಕೆ, ಗಾಯನ, ನೃತ್ಯ,
ಮುಂತಾದ ಮಾಧ್ಯಮಗಳ
ಮುಖಾಂತರ ಜನರ ಮನಸ್ಸನ್ನ
ಬೇರೆಡೆಗೆ ಸೆಳೆಯುವ
ಪ್ರಯತ್ನಗಳಾಗಬೇಕು.
ರೋಗಕ್ಕೆ ಹೆದರಿ
ಕುಬ್ಜರಾಗುವುದಕ್ಕಿಂತ, ಅದನ್ನ
ಎದುರಿಸುವ ದಾರಿಗಳ
ಅನ್ವೇóಷಣೆಯಾಗಬೇಕು ಎಂದರು.
ಮನೆಯಲ್ಲಿರುವ ಮಕ್ಕಳಿಗೆ,
ವೃದ್ಧರಿಗೆ ಸಣ್ಣದಾದ
ಚಟುವಟಿಕೆಗಳನ್ನು
ಮನೆಯಲ್ಲಿಯೇ ಮಾಡಿಸಿ, ಅವರನ್ನ
ಸೃಜನಾತ್ಮಕ ಕಲೆಗಳಲ್ಲಿ
ಹಿಡಿದಿಟ್ಟುಕೊಳ್ಳುವುದು ಮುಖ್ಯ. ಅದು
ಅಷ್ಟೆ ಕಷ್ಟಕರವಾದ ಕೆಲಸವೂ
ಕೂಡ. ಅದರೇ ಪ್ರಯತ್ನ ಮುಖ್ಯ.
ಮನೆಯ ಒಳಾಂಗಣದಲ್ಲಿ ಎಲ್ಲರನ್ನ
ರಕ್ಷಿಸಿಕೊಳ್ಳಬೇಕು,
ವಯಸ್ಸಾದವರಿಗೆ ಟಿವಿ, ಪತ್ರಿಕೆ,
ಮಾಧ್ಯಮದ ಮುಖಾಂತರ
ಮನರಂಜನೆ ಒದಗಿಸಬಹುದು. ಆದರೆ
ಅದರ ಮುಂದೆ 24 ಗಂಟೆ
ಕೂರುವುದಕ್ಕಿಂತ, ಎದುರು
ಬದುರು ಮನೆಗಳನ್ನ, ಹಾಡುಗಾರಿಕೆ
ಮೂಲಕ ಹತ್ತಿರ ತರಬಹುದು.
ಮನೆಗಳ ಒಳಾಂಗಣದಲ್ಲಿ ನಿಂತು
ಜನರನ್ನ ರಂಜಿಸುವ ಮುಖಾಂತರ
ಸಹ ನಾವು ಜನಜಾಗೃತಿ ಮತ್ತು
ಮನರಂಜನೆ ಮೂಡಿಸಬಹುದು
ಎಂದರು.
ಕಾರ್ಯಕ್ರಮದಲ್ಲಿ ಕರೋನ
ಗೀತೆಗಳನ್ನ ಹಾಡಿ ಜನರನ್ನ ರಂಜಿಸಿದ
ಹೆಚ್. ಎಸ್. ಪ್ರೇರಣ, ಮನೆಯ
ಒಳಗಿರುವ ಮನಸ್ಸನ್ನ
ಹಗುರಗೊಳಿಸಿತು.
ರಸ್ತೆ ಬಳಿ, ಮನೆ ಮುಂದೆ ಇರುವ
ತಳುವ ಗಾಡಿಗೆ ಮನೆಯ
ಚಿತ್ರವನ್ನ ಬರೆದು, ಜನರನ್ನ
ಮನೆಯಲ್ಲೇ ಇರಿ ಎಂಬ ಸಂದೇಶವನ್ನ
ನೀಡಿದರು.
ಮನೆಯ ಬಳಿಯೇ ನಿಂತು
ಕಾರ್ಯಕ್ರಮದಲ್ಲಿ ವೀಕ್ಷಿಸಿದ
ಶ್ರೀಮತಿ ಉಮಾದೇವಿ, ನಾಗರಾಜ್,
ಮಲ್ಲನಕಟ್ಟೆ ಚಂದ್ರಪ್ಪ,
ಅಂಶುಲ್, ಸುಮಾ ಕೆಂಚರೆಡ್ಡಿ, ಲಕ್ಷ್ಮಿ,
ಮನ್ವಿತ್, ಗಗನ, ಜಿ. ಭಾರತಿ,
ಕಾರ್ಯಕ್ರಮವನ್ನ
ಯಶಸ್ವಿಗೊಳಿಸಿದರು.