ಕೋವಿಡ್-19 ರ ಎರಡನೇ ಅಲೆ ದೇಶದಲ್ಲಿ ವ್ಯಾಪವಾಗಿದೆ.
ಅದರಲ್ಲೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ
ವೇಗವಾಗಿ ಹೆಚ್ಚುತ್ತಿದೆ. ಈ ಕಾರಣದಿಂದ ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ವತಿಯಿಂದ ಜನಜಾಗೃತಿಯನ್ನು ಮೂಡಿಸುವ
ನಿಟ್ಟಿನಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿ
ಹಮ್ಮಿಕೊಳ್ಳಲಾಗಿದೆ.
  ಕೋವಿಡ್-19ನ್ನು ಸಮಪರ್ಕವಾಗಿ ಎದುರಿಸುವ ನಿಟ್ಟಿನಲ್ಲಿ
ಎಲ್ಲರೂ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ಸಾಮಾಜಿಕ
ಅಂತರವನ್ನು ಕಾಯ್ದುಕೊಳ್ಳಬೇಕು. ಎಲ್ಲರೂ
ಲಸಿಕೆಯನ್ನು ತಪ್ಪದೇ ಹಾಕಸಿಕೊಳ್ಳಬೇಕು.
ಮುಂದುವರೆದು ಜನರು ಅನಾವಶ್ಯಕವಾಗಿ ಸಭೆ
ಸೇರುವುದು, ಮದುವೆ ಕಾರ್ಯಕ್ರಮಗಳಲ್ಲಿ
ಭಾಗವಹಿಸುವುದು ಗ್ರಾಮಗಳಿಂದ ನಗರಕ್ಕೆ ಅವಶ್ಯವಿಲ್ಲದೆ
ಬರುವುದು ಇತ್ಯಾದಿಗಳನ್ನು ತಕ್ಷಣಕ್ಕೆ ನಿಲ್ಲಿಸಬೇಕು.
ಸೋಂಕಿಗೆ ಒಳಪಟ್ಟವರು ತಮ್ಮ ತಮ್ಮ ಮನೆಗಳಲ್ಲಿ
ಇದ್ದು ಇತರರಿಗೆ ಸೋಂಕು ಹರಡದಂತೆ ಎಚ್ಚರಿಕೆಯ
ಕ್ರಮ ವಹಿಸಬೇಕು.
ಈಗ ದಾವಣಗೆರೆ ಜಿಲ್ಲೆಯಲ್ಲಿ ಮದುವೆ ಮತ್ತು
ನಾಡಹಬ್ಬಗಳ ಸಮಯವಾಗಿದ್ದು ಅಂತಹ ಸಂದರ್ಭದಲ್ಲಿ
ಜನರು ಸರ್ಕಾರದ ಕೋವಿಡ್ 19 ನಿಯಮಾವಳಿಗಳನ್ನು
ಅಚ್ಚುಕಟ್ಟಾಗಿ ಪಾಲಿಸಿ ಸೋಂಕು ನಿಯಂತ್ರಣಕ್ಕೆ
ಸಹಕರಿಸಬೇಕು. ಸಾರ್ವಜನಿಕರು ತಮ್ಮ ಮನೆಗಳಲ್ಲಿ ಅಥವಾ
ಬೇರೆ ಯಾವುದೇ ಸ್ಥಳದಲ್ಲಿ ಕಾಲ ಕಾಲಕ್ಕೆ ಸಾಬೂನಿನಿಂದ
ಕೈಗಳನ್ನು ಸ್ವಚ್ಚ ಮಾಡಿಕೊಳ್ಳಬೇಕು.
ಸ್ಯಾನಿಟೈಸರ್‍ಗಳನ್ನು ಬಳಸಬೇಕು. ಹಾಗೂ ಸೋಂಕಿನ
ಲಕ್ಷಣಗಳು ಕಂಡು ಬಂದಲ್ಲಿ ಕಾಲ ವಿಳಂಬ ಮಾಡದೇ ಹತ್ತಿರದ
ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟು ಆ ಬಗ್ಗೆ
ಖಾತ್ರಿಪಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು.
ಅಗತ್ಯವಿಲ್ಲದ ಪ್ರಕರಣಗಳಲ್ಲಿ ಕಕ್ಷಿದಾರರು
ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ ಎಂದು
ಮಾನ್ಯ ಉಚ್ಚ ನ್ಯಾಯಾಲಯವು ನಿರ್ದೇಶನ ನೀಡಿರುತ್ತದೆ. ಆ
ನಿಟ್ಟಿನಲ್ಲಿ ತೀರ ಅತ್ಯಗತ್ಯವಿದ್ದ ಪ್ರಕರಣಗಳಲ್ಲಿ ಮಾತ್ರ
ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು. ಕೋವಿಡ್ 19ನ
ಯಾವುದೇ ನಿಯಮವನ್ನು ಉಲ್ಲಂಘಿಸಿದ ಪಕ್ಷದಲ್ಲಿ
ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶ

ಇರುತ್ತದೆ. ಆ ಕಾರಣದಿಂದ ಸಾರ್ವಜನಿಕರು ನಿಯಮಗಳನ್ನು
ಪಾಲಿಸಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕೆಂದು ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ ಗೀತಾ
ಹಾಗೂ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಪ್ರವೀಣ್
ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *