ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದ
ಲಸಿಕಾಕರಣ ವ್ಯವಸ್ಥೆಯನ್ನು ಇನ್ನು ಮುಂದೆ ಆ ಸ್ಥಳದ
ಬದಲು ಚಿಗಟೇರಿ ಆಸ್ಪತ್ರೆ ಒಳಗಡೆ ಇರುವ ಮಕ್ಕಳ
ಮತ್ತು ಹೆರಿಗೆ ಆಸ್ಪತ್ರೆ ಕೊಠಡಿ ಸಂಖ್ಯೆ 34ರಲ್ಲಿ
ಲಸಿಕಾಕರಣವನ್ನು ಮಾಡಲಾಗುವುದು.
ಇನ್ನು ಮುಂದೆ ಜಿಲ್ಲೆಯಾದ್ಯಂತ ಪ್ರತಿಯೊಂದು
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ
ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ
ಕೇಂದ್ರಗಳು, ಉಪಕೇಂದ್ರಗಳು ಹಾಗೂ ದಾವಣಗೆರೆ
ನಗರದಲ್ಲಿರುವ ಚಾಮರಾಜಪೇಟೆಯ ಮಹಿಳಾ ಮತ್ತು
ಮಕ್ಕಳ ಆಸ್ಪತ್ರೆಯಲ್ಲಿಯೂ ಕೋವಿಡ್-19 ಲಸಿಕಾಕರಣ
ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಸಿಕೆಯನ್ನು
ಪಡೆಯುವವರು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿ
ನೋಂದಾವಣೆ ಮಾಡಿ, ಅದರ ಪ್ರತಿಯನ್ನು ಲಸಿಕಾಕರಣ
ಕೇಂದ್ರಕ್ಕೆ ತರತಕ್ಕದ್ದು. ಪ್ರಸ್ತುತವಾಗಿ 45 ವರ್ಷ
ಮೇಲ್ಪಟ್ಟವರಿಗೆ ಮಾತ್ರ ಲಸಿಕೆಯನ್ನು ನೀಡಲಾಗುತ್ತಿದ್ದು, 18
ವರ್ಷದಿಂದ 45 ವರ್ಷದೊಳಗಿನವರಿಗೆ ಲಸಿಕಾಕರಣವನ್ನು
ಮಾಡುವ ದಿನಾಂಕವನ್ನು ಮುಂದೆ ತಿಳಿಸಲಾಗುವುದೆಂದು
ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *