ಕರ್ನಾಟಕದಲ್ಲಿ ಪ್ರತಿದಿನ ಎಂಟು ನೂರು ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿಯಿದ್ದು ಈ ಉತ್ಪಾದನೆಯಲ್ಲಿ ದಿನಕ್ಕೆ ಕೇವಲ ಸುಮಾರು ಮುನ್ನೂರು ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಸರ್ಕಾರಿ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಖಾಸಾಗಿ ಆಸ್ಪತ್ರೆಗಳು ಸೇರಿದಂತೆ ಬಳಸಲಾಗುತ್ತಿದೆ. ಇತ್ತೀಚೆಗೆ ಕೊರೋನಾ ಕರ್ನಾಟಕದಲ್ಲಿ ಜಾಸ್ತಿ ಆಗುತ್ತದೆ ಎಂದು ಅನೇಕ ಪರಿಣಿತರು ಹಾಗೂ ವಿರೋಧ ಪಕ್ಷದ ಎಲ್ಲಾ ಮುಖಂಡರು ಅನೇಕ ಭಾರಿ ಹೇಳುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರಿ ಇವತ್ತು ಅನೇಕ ಜಿಲ್ಲೆಗಳಲ್ಲಿ ಸಾವುಗಳು ಜಾಸ್ತಿ ಆಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ತಯಾರಾಗುವ ಆಮ್ಲಜನಕದ ಉತ್ಪಾದನೆ ಮತ್ತು ವಿತರಣೆಯನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಅಗಿನಿಂದ ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ಬೇರೆ ರಾಜ್ಯಗಳಿಗೆ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಕೋವಿಡ್ ಕಳೆದ ತಿಂಗಳಿಂದ ಭಾರೀ ಏರಿಕೆಯಾಗಿದ್ದು ಆಮ್ಲಜನಕದ ಬೇಡಿಕೆ ತೀವ್ರ ಹೆಚ್ಚಳಗೊಂಡಿದೆ. ಈಗ ಕರ್ನಾಟಕ ಕೇಂದ್ರ ಸರ್ಕಾರದ ಬಳಿ ಮಂಡಿ ಊರಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಏಕೆಂದರೆ ಆಮ್ಲಜನಕ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಾರತಮ್ಯ ಮಾಡುತ್ತಿದೆ. ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಾರ್ಖಾನೆಯಲ್ಲಿ ಪ್ರತಿ ದಿನ ಸುಮಾರು 1ಸಾವಿರ ಮೆಟ್ರಿಕ್ ಟನ್ ಆಮ್ಲಜನಕದ ಉತ್ಪಾದನೆ ಮಾಡಲು ಸಾಮರ್ಥ್ಯ ವಿದ್ದರೂ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಂಡಿರುವುದಿಲ್ಲ. ಈ ರೀತಿ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಾವು ನೋವುಗಳು ಆದರೂ ಮುಖ್ಯಮಂತ್ರಿಗಳು ಹಾಗೂ ಮಂತ್ರಿ ಮಂಡಲ ಗರಬಡಿದವರಂತೆ ಸುಮ್ಮನೆ ಕೂರದೇ ಕೇಂದ್ರ ಸರ್ಕಾರ ಆಕ್ಸಿಜನ್ ಬೇರೆ ರಾಜ್ಯಕ್ಕೆ ನೀಡದೆ ನಮ್ಮ ರಾಜ್ಯದ ಕೋರೋನಾ ಸೋಂಕಿತರ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಮುಖ್ಯಮಂತ್ರಿಗಳಿಗೆ ತುರವೇಕೆರೆ ಮಾಜಿ ಶಾಸಕರಾದ ಎಂ ಡಿ ಲಕ್ಷ್ಮಿನಾರಾಯಣ್ ರವರು ಒತ್ತಾಯಿಸಿ ದರು .