ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ
ಎಂ.ಪಿ.ರೇಣುಕಾಚಾರ್ಯ ಅವರು ಮೇ 05 ರಿಂದ 09 ರವರೆಗೆ ದಾವಣಗೆರೆ
ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಾದ್ಯಂತ ಪ್ರವಾಸ
ಕೈಗೊಳ್ಳಲಿದ್ದಾರೆ.
ಎಂ.ಪಿ. ರೇಣುಕಾಚಾರ್ಯ ಅವರು ಮೇ 05 ರಿಂದ ಮೇ 09 ರ ವರೆಗೆ
ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು, ಸಂಜೆ 06
ಗಂಟೆಯವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ
ತಾಲ್ಲೂಕುಗಳ ವ್ಯಾಪ್ತಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು
ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ,
ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ತೆಗೆದುಕೊಂಡಿರುವ
ಕ್ರಮಗಳ ಬಗ್ಗೆ ವೀಕ್ಷಣೆ ನಡೆಸುವರು. ಅಲ್ಲದೆ ಆಗಿಂದಾಗ್ಗೆ
ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್-19
ಸೋಂಕನ್ನು ತಡೆಗಟ್ಟುವಲ್ಲಿ ತೆಗೆದುಕೊಂಡ ಹಾಗೂ
ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ
ಪರಿಶೀಲಿಸುವರು ಎಂದು ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಯವರ ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ
ತಿಳಿಸಿದ್ದಾರೆ.