ರೈಲು

ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ವತಿಯಿಂದ ಮೇ. 08 ರಂದು
ಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲನ್ನು (ಒಂದು ಟ್ರಿಪ್ )
ಓಡಿಸಲು ಕ್ರಮ ಕೈಗೊಂಡಿದ್ದು ರೈಲು ಸಂಖ್ಯೆ 06216
ಮೈಸೂರಿನಿಂದ ಬೆಳಿಗ್ಗೆ 11 ಗಂಟೆಗೆ ಬಿಟ್ಟು, ಬೆಂಗಳೂರು ಕೆಎಸ್‍ಆರ್
ನಿಲ್ದಾಣದಿಂದ 13-25 ಗಂಟೆಗೆ ಆಗಮಿಸಲಿದೆ. ನಂತರ
ಯಶವಂತಪುರ-14.00, ತುಮಕೂರು-14.52, ಅರಸೀಕೆರೆ-16.40,
ಬೀರೂರು-17.35, ಚಿಕ್ಕಜಾಜೂರು-19.00, ದಾವಣಗೆರೆ-20.00,
ಕೊಟ್ಟೂರು-21.50, ಹೊಸಪೇಟೆ-00.55, ತೋರಣಗಲ್ಲು-01.30, ಬಳ್ಳಾರಿ-
02.20, ಗುಂತಕಲ್-03.20, ಮಾರ್ಗವಾಗಿ ದ್ರೋಣಾಚಲಂ, ನಂದ್ಯಾಲ,
ನರಸರಾವ್‍ಪೇಟ್, ಗುಂಟೂರು, ವಿಜಯವಾಡ, ರಾಜಮಂಡ್ರಿ,
ವಿಶಾಖಪಟ್ಟಣಂ, ಖುದ್ರಾ ರೋಡ್, ಭದ್ರಕ್, ಆದ್ರ, ಅಸನಸೋಲ್,
ಮಧುಪುರ್ ಮಾರ್ಗವಾಗಿ ಬಿಹಾರ ರಾಜ್ಯದ ದಾನಪುರ್ ಕ್ಕೆ
ಮರುದಿನ 20.45 ಕ್ಕೆ ತಲುಪಲಿದೆ.
ಈ ರೈಲು 20 ಬೋಗಿಗಳನ್ನು ಹೊಂದಿದ್ದು, 14- ದ್ವಿತೀಯದರ್ಜೆ
ಸ್ಲೀಪರ್, 04- ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 02 ಲಗೇಜ್
ಬೋಗಿಗಳನ್ನು ಹೊಂದಿರುತ್ತದೆ. ಈ ರೈಲಿನ ಎಲ್ಲ ಸೀಟುಗಳನ್ನು
ಕಾಯ್ದಿರಿಸಿದ ಸೇವೆಗೆ ಮಾತ್ರ ಒದಗಿಸಲಾಗುವುದು. ಸಾರ್ವಜನಿಕರು
ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಅಗತ್ಯ
ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು
ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ
ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರ ಕೊರತೆ : ವಿವಿಧ ರೈಲುಗಳು ರದ್ದು
ದಾವಣಗೆರೆ ಮೇ. 04 (ಕರ್ನಾಟಕ ವಾರ್ತೆ) :
ಪ್ರಯಾಣಿಕರ ಕೊರತೆಯ ಕಾರಣಕ್ಕಾಗಿ ನೈರುತ್ಯ ರೈಲ್ವೆ
ವಿಭಾಗವು ವಿವಿಧ ವಿಶೇಷ ರೈಲುಗಳ ಸಂಚಾರವನ್ನು ಮುಂದಿನ
ಆದೇಶದವರೆಗೆ ರದ್ದುಪಡಿಸಿದೆ. ಯಶವಂತಪುರ-ಬೀದರ್
(02671) ಮೇ. 04 ರಿಂದ, ಬೀದರ್-ಯಶವಂತಪುರ (02672) ರೈಲು
ಮೇ. 05 ರಿಂದ ರದ್ದುಪಡಿಸಲಾಗಿದೆ.
ಅದೇ ರೀತಿ ಯಶವಂತಪುರ- ಲಾತೂರ್ (06583) ಮೇ. 05 ರಿಂದ,
ಲಾತೂರ್-ಯಶವಂತಪುರ (06584) ಮೇ. 06 ರಿಂದ.

ಬೆಂಗಳೂರು-ನಾಗರಕೊಯಿಲ್(07235) ಮೇ. 05 ರಿಂದ,
ನಾಗರಕೊಯಿಲ್-ಬೆಂಗಳೂರು (07236) ಮೇ. 06 ರಿಂದ.
ಬೆಂಗಳೂರು- ಶಿವಮೊಗ್ಗ (02089), ಶಿವಮೊಗ್ಗ-ಬೆಂಗಳೂರು
(02090) ಮೇ. 04 ರಂದ. ಯಶವಂತಪುರ- ಕಣ್ಣೂರ್ (06537) ಮೇ.
04 ರಿಂದ, ಕಣ್ಣೂರ್-ಯಶವಂತಪುರ್ (06538) ಮೇ. 05 ರಿಂದ.
ಬೆಂಗಳೂರು-ಧಾರವಾಡ (07225) ಮೇ. 04 ರಿಂದ, ಧಾರವಾಡ-
ಬೆಂಗಳೂರು (07226) ಮೇ. 05 ರಿಂದ ಮುಂದಿನ ಆದೇಶದವರೆಗೆ
ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *