ಪರಿಷ್ಕರಣೆ

ಕೋವಿಡ್ 19 ಸೋಂಕು ರಾಜ್ಯದಲ್ಲಿ ಮತ್ತೊಮ್ಮೆ ಏರು ಮುಖ
ಕಾಣಿಸುತ್ತಿದ್ದು ಸೋಂಕಿತರಿಗೆ ಸಾರ್ವಜನಿಕ ಆರೋಗ್ಯ
ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ನೀಡಲಾಗುತ್ತಿದೆ. ಸರ್ಕಾರದಿಂದ ಸೂಚಿತ ಮಾಡಿದ ಕೋವಿಡ್
ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆ
ನೀಡುತ್ತಿರುವ ಪ್ಯಾಕೇಜ್ ದರಗಳನ್ನು ಸರ್ಕಾರ ಪರಿಷ್ಕರಿಸಿ
ಆದೇಶಿಸಿದೆ.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪಿಪಿಇ ಹಾಗೂ
ಪರಿಕರಗಳನ್ನು ಒಳಗೊಂಡಂತೆ ಸೂಚಿಸಿರುವ ದರಗಳು
ಇವಾಗಿದ್ದು ಸಾರ್ವಜನಿಕ ಆರೋಗ್ಯ ಪ್ರಾಧಿಕಾರದಿಂದ
ಶಿಫಾರಸಾಗಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ
ದಿನವೊಂದಕ್ಕೆ ಈ ಕೆಳಕಂಡ ಪ್ಯಾಕೇಜ್ ದರಗಳು
ಅಧಿಸೂಚನೆಯ ದಿನಾಂಕ 06-05-2021 ರಿಂದ ಜಾರಿಗೊಳ್ಳುತ್ತವೆ.
ಪರಿಷ್ಕøತ ದರ : ಜನರಲ್ ವಾರ್ಡ್ ರೂ.5200, ಹೆಚ್‍ಡಿಯು ರೂ.8000,
ಐಸೊಲೇಷನ್ ಐಸಿಯು ವೆಂಟಿಲೇಟರ್‍ರಹಿತ ರೂ.9750 ಮತ್ತು
ಐಸೊಲೇಷನ್ ಐಸಿಯು ವೆಂಟಿಲೇಟರ್‍ಸಹಿತ ರೂ.11500
ಆಗಿರುತ್ತದೆ.
ಈ ಆದೇಶವನ್ನು ಖಾಸಗಿ ಆಸ್ಪತ್ರೆಗಳು ಪಾಲಿಸದಿದ್ದಲ್ಲಿ
ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ (51 ರಿಂದ 60)
ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ
ವಿಭಾಗಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ. ಇದಲ್ಲದೇ
ಸಂಬಂಧಪಟ್ಟ ಭಾರತೀಯ ದಂಡನಾ ಕಾಯ್ದೆಯ ಸೂಕ್ತ
ಸೆಕ್ಷನ್‍ಗಳಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ ಮತ್ತು ಇತರೆ
ಕಾನೂನುಗಳು ಅನ್ವಯಿಸುತ್ತವೆ. ಖಾಸಗಿ ಈ ದರಕ್ಕಿಂತ
ಹೆಚ್ಚು ವಸೂಲಿ ಮಾಡಿದಲ್ಲಿ ಡಿಹೆಚ್‍ಓ ರವರಿಗೆ ದೂರು ನೀಡಿದಲ್ಲಿ
ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾದಿಕಾರಿ
ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಆಕ್ಸಿಜನ್ ಉಸ್ತುವಾರಿ ತಂಡ : ಕೋವಿಡ್ 19 ಎರಡನೇ ಅಲೆಯ
ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಪೂರೈಕೆ, ಬೇಡಿಕೆ
ಮತ್ತು ಲಭ್ಯತೆ ಕುರಿತು ದಿನದ 24 ಗಂಟೆ ಪರಿವೀಕ್ಷಣೆ
ಮಾಡಲು ಮೂರು ಆಕ್ಸಿಜನ್ ಉಸ್ತುವಾರಿ ತಂಡಗಳನ್ನು
ನಿಯೋಜಿಸಲಾಗುವುದು. ಇಬ್ಬರು ಅಧಿಕಾರಿಗಳು ಮತ್ತು
ಇಬ್ಬರು ಸಹಾಯಕರನ್ನೊಳಗೊಂಡ 8 ಅವಧಿಯ ಮೂರು
ಶಿಫ್ಟ್‍ಗಳಲ್ಲಿ ಕೆಲಸ ಮಾಡುವ ತಂಡಗಳನ್ನು
ನಿಯೋಜಿಸಲಾಗುವುದು.

ಇಂದಿನ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸರ್ಕಾರದ ಮುಖ್ಯ
ಕಾರ್ಯದರ್ಶಿಗಳು ಆಕ್ಸಿಜನ್‍ನ್ನು ಎಲ್ಲೂ ವ್ಯರ್ಥ ಮಾಡದಂತೆ,
ನ್ಯಾಯಯುತವಾಗಿ ಬಳಕೆ ಮಾಡುವ ಬಗ್ಗೆ ಹಾಗೂ ಉಸ್ತುವಾರಿ
ಮಾಡುವ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ ಎಂದು
ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *