ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ/ಸಸಿಗಳನ್ನು
ಸಸ್ಯಾಭಿವೃದ್ದಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ
ಮಾಡಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆ
ಕ್ಷೇತ್ರಗಳಲ್ಲಿ ಲಭ್ಯವಿರುವ ಕಸಿ/ಸಸಿಗಳ ಸದುಪಯೋಗ
ಪಡೆದುಕೊಳ್ಳಬಹುದು.
   ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ ಹೊನ್ನಾಳಿ
ಮೊ.ಸಂ:9972496486 ಇಲ್ಲಿ ಅಡಿಕೆ-1200, ನಿಂಬೆ-200 ಸಸಿಗಳು
ಲಭ್ಯವಿದೆ. ಆವರಗೊಳ್ಳ ತೋಟಗಾರಿಕೆ ಕ್ಷೇತ್ರ ದಾವಣಗೆರೆ
ಮೊ.ಸಂ:9844966636 ಇಲ್ಲಿ ತೆಂಗು(ಜವಾರಿ)-4310, ಅಲಂಕಾರಿಕ
ಸಸಿಗಳು-1402 ಲಭ್ಯವಿದೆ. ಬುಳ್ಳಾಪುರ ತೋಟಗಾರಿಕೆ ಕ್ಷೇತ್ರ
ಹರಿಹರ ಮೊ.ಸಂ: 9008900370 ಇಲ್ಲಿ ತೆಂಗು(ಜವಾರಿ)-3955 ಲಭ್ಯವಿದೆ.
ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ ಜಗಳೂರು
ಮೊ.ಸಂ: 9663670572 ಇಲ್ಲಿ ತೆಂಗು(ಜವಾರಿ)-3872 ಲಭ್ಯವಿದೆ. ನರ್ಸರಿ
ಕಚೇರಿ ದಾವಣಗೆರೆ ಮೊ.ಸಂ: 9964065115 ಇಲ್ಲಿ ಅಡಿಕೆ-5000,
ಕರಿಬೇವು-1000, ಅಲಂಕರಿಕಾ ಸಸಿಗಳು-15000 ಲಭ್ಯವಿರುತ್ತದೆ.
ಇವುಗಳ ಮಾರಾಟ ದರ ತೆಂಗು(ಜವಾರಿ) ರೂ.70, ಅಡಿಕೆ-ರೂ.20,
ನಿಂಬೆ-ರೂ.11, ಕರಿಬೇವು-ರೂ.10 ಮತ್ತು ಅಲಂಕಾರಿಕ ಸಸಿಗಳು-
ರೂ.15 ರಿಂದ 60 ಇರುತ್ತದೆ ಎಂದು ತೋಟಗಾರಿಕೆ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *