ನಿರ್ಧಾರ
ಮೇ 12ರಿಂದ ಪದವಿ ತರಗತಿಗಳಿಗೆ ಆನ್‍ಲೈನ್ಪಾಠ: ಪ್ರೊ. ಹಲಸೆ
ಕೋವಿಡ್-19ರ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ
ಪ್ರಗತಿಗೆ ಹಿನ್ನಡೆ ಆಗದಂತೆ ತಡೆಯುವ ಉದ್ದೇಶದಿಂದ
ದಾವಣಗೆರೆ ವಿಶ್ವವಿದ್ಯಾನಿಲಯªÅ ತನ್ನ ವ್ಯಾಪ್ತಿಯ ಚಿತ್ರದುರ್ಗ
ಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿ
ತರಗತಿಗಳಿಗೆ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲು
ನಿರ್ಧರಿಸಿದೆ. ಎಂದು
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರ ಅಧ್ಯಕ್ಷತೆಯಲ್ಲಿ
ಗುರುವಾರ ನಡೆದ ಪದವಿ ಕಾಲೇಜು ಪ್ರಾಚಾರ್ಯರ
ಜೊತೆಗಿನ ಆನ್‍ಲೈನ್ ಸಭೆಯ ನಂತರ ಈ ನಿರ್ಧಾರ
ಮಾಡಲಾಯಿತು.
ಈಗಾಗಲೇ ಪರೀಕ್ಷೆ ಮುಗಿದು 15 ದಿನಗಳಾಗಿದ್ದು, ವಿಶ್ರಾಂತಿ
ನೀಡಿದಂತಾಗಿದೆ. ಇನ್ನೂ ಒಂದು ವಾರ ಮಾಹಿತಿ ನೀಡಿ ಮೇ 12ರಿಂದ
ಆನ್‍ಲೈನ್ ತರಗತಿ ಆರಂಭಿಸಲಾಗುತ್ತದೆ. ಅದಕ್ಕೆ ಮುನ್ನ
ಪ್ರಾಧ್ಯಾಪಕರೂ ಸಿದ್ಧತೆ ಮಾಡಿಕೊಳ್ಳಲು ಅವಕಾಶ
ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಪದವಿ ಪರೀಕ್ಷೆ ಮುಗಿದಿದ್ದರಿಂದ
ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳುವುದು
ಮುಖ್ಯವಾಗಿದೆ. ಅವರಿಗೆ ಆನ್‍ಲೈನ್ ಮೂಲಕ ಮುಂದಿನ ಸೆಮಿಸ್ಟರ್
ಅಂದರೆ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ ಪಠ್ಯ
ಪಾಠಗಳನ್ನು ಆರಂಭಿಸುವುದು ಮುಖ್ಯವಾಗಿದೆ. ಇದರಿಂದ
ಅವರ ಶೈಕ್ಷಣಿಕ ಭವಿಷ್ಯಕ್ಕೂ ತೊಂದರೆ ಆಗುವುದಿಲ್ಲ.
ವಿದ್ಯಾರ್ಥಿಗಳನ್ನು ಶೈಕ್ಷಣಿಕ ವಾತಾವರಣದಲ್ಲಿ
ತೊಡಗಿಸಿಕೊಂಡರೆ ಅನಗತ್ಯವಾಗಿ ಆತಂಕಕ್ಕೆ ಅವಕಾಶ
ಇರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳ ನಿರಂತರ
ಮೇಲ್ವಿಚಾರಣೆಗೂ ಸಹಕಾರ ಆಗಲಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಪಾಠ
ಕೇಳುವುದಕ್ಕೆ ತೊಂದರೆಯಾದರೆ ಪಠ್ಯಪೂರಕ
ಮಾಹಿತಿಯನ್ನು ಲಭ್ಯವಿರುವ ಮಾಧ್ಯಮಗಳ ಮೂಲಕ
ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಅದಕ್ಕಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ
ಅನುಕೂಲವಾಗುವ ರೀತಿಯಲ್ಲಿ ವಾಟ್ಸ್‍ಆಪ್, ಇನ್‍ಸ್ಟಾಗ್ರಾಂ,
ಗೂಗಲ್ ಕ್ಲಾಸ್ ರೂಂ ಅಥವಾ ಇನ್ನಿತರ ಮಾಧ್ಯಮಗಳಲ್ಲಿ
ಗುಂಪು ರಚಿಸಿ ಪೂರಕ ಮಾಹಿತಿ ಒದಗಿಸಬೇಕು. ಯಾವುದೇ
ವಿದ್ಯಾರ್ಥಿಯೂ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸದಂತೆ
ಗಮನ ನೀಡಬೇಕು. ಎಂದು ಸೂಚಿಸಿದ ಅವರು ಕಳೆದ
ವರ್ಷದ ಅನುಭವ ಮತ್ತು ಸಮಸ್ಯೆಗಳನ್ನು ಗಮನಿಸಿ
ಪರಿಹಾರ ಮಾರ್ಗ ಕಂಡುಕೊಳ್ಳಲು ಗಮನ ನೀಡಬೇಕು.
ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ
ಚಲನವಲನ, ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಯ
ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಪ್ರತಿ ವಾರಕ್ಕೊಮ್ಮೆ ಸಲ್ಲಿಸಲು ಎಲ್ಲ
ಪ್ರಾಚಾರ್ಯರರಿಗೂ ಸೂಚಿಸಲಾಗಿದೆ ಎಂದು ವಿವರಿಸಿದರು.
ಈಗಾಗಲೇ ವಿಶ್ವವಿದ್ಯಾನಿಲಯದ ಎಲ್ಲ ಪದವಿ ತರಗತಿಗಳ
ಪರೀಕ್ಷೆಗಳು ಪೂರ್ಣಗೊಂಡಿವೆ. ಇದರಲ್ಲಿ ಶೇ. 90ರಷ್ಟು
ವಿಷಯಗಳ ಮೌಲ್ಯಮಾಪನವೂ ನಡೆದಿದೆ. ಸ್ನಾತಕೋತ್ತರ
ಪದವಿ ಮತ್ತು ಬಿ.ಎಡ್ ಪದವಿ ಪರೀಕ್ಷೆಗಳು ಬಾಕಿ ಇವೆ.
ಅವುಗಳನ್ನು ನಡೆಸುವ ಸಂದರ್ಭದಲ್ಲಿ ಕೋವಿಡ್-19 ಹೆಚ್ಚಾಗಿ
ಪರೀಕ್ಷೆ ಮುಂದೂಡಲಾಗಿದೆ ಎಂದು ಕುಲಪತಿ ಪ್ರೊ. ಹಲಸೆ
ತಿಳಿಸಿದ್ದಾರೆ.
ಸಭೆಯಲ್ಲಿ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್, ಸಿಂಡಿಕೇಟ್
ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ
ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರೆಂದು
ಪ್ರಕಟಣೆ ತಿಳಿಸಿದೆ.