ಅಧಿಕಾರಿಗಳು ಮುಕ್ತವಾಗಿ ಕೋವಿಡ್
ನಿಯಂತ್ರಣದ ದೃಷ್ಟಿಯಿಂದ ಯಾವುದೇ ಕ್ರಮ
ಕೈಗೊಂಡರೂ ಅದಕ್ಕೆ ನಾನು ಬದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ
ಹೊನ್ನಾಳಿ : ಪೊಲೀಸರು ಲಾಠಿ ಚಾರ್ಜ ಮಾಡ್ತೀರೋ
ಇಲ್ಲವೋ ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳುತ್ತೀರೋ ಅದು ನನಗೆ ಗೊತ್ತಿಲ್ಲಾ,
ನಾಳೆ ಬೆಳ್ಳಗ್ಗೆ 11 ಘಂಟೆಯ ನಂತರ
ಯಾರೋಬ್ಬರೂ ಓಡಾಡ ಬಾರದು ಸಂಪೂರ್ಣವಾಗಿ
ಹೊನ್ನಾಳಿ ತಾಲೂಕು ಸ್ಥಬ್ದವಾಗ ಬೇಕೆಂದು ಸಿಎಂ
ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ
ವರ್ತಕರು ಹಾಗೂ ತರಕಾರಿ ಮಾರಾಟಗಾರರ
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಶಾಸಕರು
ಜನರಿಗೆ ಒಳ್ಳೆಯ ಮಾತಿನಲ್ಲಿ ಸಾಮಾಜಿಕ ಅಂತರ,
ಮಾಸ್ಕ್ ಹಾಕಿಕೊಳ್ಳಿ ಎಂದು ಪೊಲೀಸರು ಹಾಗೂ
ಅಧಿಕಾರಿಗಳು ಎಷ್ಟೇ ಮನವಿ ಹಾಗೂ ದಡ್ಡ
ವಿಧಿಸಿದರೂ ಸಹ ಜನರು ಎಚ್ಚೆತ್ತುಕೊಳ್ಳುತ್ತಿಲ್ಲಾ,
ಅನಿವಾರ್ಯವಾಗಿ 11 ಘಂಟೆಗೆ ಹೊನ್ನಾಳಿ ತಾಲೂಕು
ಸ್ಥಬ್ದ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ
ಎಂದರು.
ಇತ್ತೀಚಿಗೆ ತಾಲೂಕಿನಲ್ಲಿ ಸೋಂಕು ಹಾಗೂ ಸಾವಿನ
ಸಂಖ್ಯೆ ಹೆಚ್ಚುತ್ತಿದ್ದರೂ ಜನರು
ಜಾಗೃತರಾಗುತಿಲ್ಲಾ ಎಂದು ಬೇಸರ ವ್ಯಕ್ತ ಪಡಿಸಿದ
ಶಾಸಕರು, ಕಟ್ಟು ನಿಟ್ಟಿನ ಕ್ರಮದಿಂದಲೂ
ತಾಲೂಕಿನಲ್ಲಿ ಕೋವಿಡ್ ಸೋಂಕು ಕಡಿಮೆಯಾಗಲಿ
ಎಂದು ಈ ನಿರ್ದಾರಕ್ಕೆ ಬಂದಿದ್ದೇವೆ ಎಂದರು. ಹೊನ್ನಾಳಿ-
ನ್ಯಾಮತಿ ಅವಳಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ
ಸಂಬಂಧಸಿದಂತೆ ಅಧಿಕಾರಿಗಳು ಯಾವುದೇ ಕಟ್ಟು
ನಿಟ್ಟಿನ ಕ್ರಮಕೈಗೊಂಡರೂ ನಾನು ಅದಕ್ಕೆ
ಬದ್ದನಿದ್ದೇನೆ, ಇದಕ್ಕೆ ನಾನು ಅಡ್ಡಿ ಪಡಿಸುವುದಿಲ್ಲಾ
ಎಂದ ಶಾಸಕರು ಅವಳಿ ತಾಲೂಕಿನ ಕೋವಿಡ್
ನಿಯಂತ್ರಣಕ್ಕೆ ಬರ ಬೇಕೆಂದರು.
ನಾನೇ ಎಷ್ಟೋ ಬಾರೀ ಅಧಿಕಾರಿಗಳಿ ಕರೆ ಮಾಡಿ
ಸಾಕಷ್ಟು ಜನರನ್ನು ಬಿಡಿಸಿದ್ದು ನಾನು ತಪ್ಪು
ಮಾಡಿದೇ ಎನಿಸುತ್ತಿದೆ ಎಂದ ಶಾಸಕರು ಇನ್ನು
ಮುಂದೇ ನಾನು ಯಾರಿಗೂ ಅಡ್ಡಿ ಪಡಿಸುವುದಿಲ್ಲಾ,
ಜನರು ನನಗೆ ಶಾಪ ಹಾಕಿದರು ಪರವಾಗಿಲ್ಲಾ ಎಂದ
ಅವರು, ಅಧಿಕಾರಿಗಳು ಮುಕ್ತವಾಗಿ ಕೋವಿಡ್
ನಿಯಂತ್ರಣದ ದೃಷ್ಟಿಯಿಂದ ಯಾವುದೇ ಕ್ರಮ
ಕೈಗೊಂಡರೂ ನಾನು ಅದಕ್ಕೆ ನಾನು ಬದ್ದನಿದ್ದೇನೆ
ಎಂದರು.
ಇನ್ನು ಪ್ರತಿಯೊಬ್ಬ ವರ್ತಕರು ಅಂಗಡಿಯ
ಮುಂದೆ ಬಾಕ್ಸ್ ಹಾಕಿಕೊಂಡು ಸಾಮಾಜಿಕ ಅಂತರ
ಕಾಯ್ದುಕೊಂಡು ವ್ಯಾಪರ ವಹಿವಾಟು ನಡೆಸ
ಬೇಕು, ಅಷ್ಟೇ ಅಲ್ಲದೇ 11 ಘಂಟೆಯ ವಹಿವಾಟು
ಮುಗಿಸಿ ಅಂಗಡಿ ಮುಂಗಟ್ಟು ಮುಚ್ಚಬೇಕು ಇಲ್ಲದೇ
ಇದ್ದರೇ ಅಂತಹ ಅಂಗಡಿ ಮಾಲೀಕರ ವಿರುದ್ದ
ಕೋವಿಡ್ ನಿಮಯದ ಪ್ರಕರಣ ಕಠಿಣ ಕ್ರಮ
ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರು ಹಾಗೂ ವರ್ತಕರ ಹಿತದೃಷ್ಟಿಯಿಂದ
ಎಪಿಎಂಸಿಯಲ್ಲಿ ತರಕಾರಿ ವಹಿವಾಟಿಗೆ ಅನುಕೂಲ
ಮಾಡಿಕೊಟ್ಟಿದ್ದು 30 ಅಡಿ ಅಂತರದಲ್ಲಿ ಅಂಗಡಿ
ಹಾಕುವುದರ ಜೊತೆ ನಮ್ಮ ತಾಲೂಕಿನ ರೈತರ
ಬೆಳೆಗೆ ಪ್ರತಿನಿಧ್ಯ ನೀಡ ಬೇಕು, ಅಗತ್ಯ ಬಿದ್ದರೇ
ಮಾತ್ರ ಬೇರೆ ಜಿಲ್ಲೆಯಲ್ಲಿ ತರಕಾರಿ
ತರಿಸಿಕೊಳ್ಳುವಂತೆ ಸೂಚನೆ ನೀಡಿದ ಶಾಸಕರು
ಅಗತ್ಯ ಬೆಲೆಗಿಂತ ದುಪ್ಪಟ್ಟು ಬೆಲೆಗೆ ತರಕಾರಿ
ಮಾರಿದರೇ ಅಂತಹವರ ವಿರುದ್ದ ತಾಲೂಕು ಆಡಳಿತ
ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಮುಖ್ಯಮಂತ್ರಿಗಳು ಲಾಕ್‍ಡೌನ್ ಸಂಬಂದ
ಪಟ್ಟಂತೆ ಯಾವುದೇ ಕ್ರಮ ಕೈಗೊಂಡರೂ
ನಾನು ಅದಕ್ಕೆ ಬದ್ದನಾಗಿದ್ದೇನೆ ಎಂದ ಶಾಸಕರು,
ಕೋವಿಡ್ ಲಸಿಕೆ ಹಾಗೂ ರಸಗೊಬ್ಬರಕ್ಕೆ
ಸಂಬಂದಪಟ್ಟಂತೆ ಸದಾನಂದಗೌಡ ಬಳಿ ಮಾತನಾಡಿದ್ದು
ಶೀಘ್ರವೇ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ
ಗೊಬ್ಬರಕ್ಕೆ ಬೆಂಬಲ ಬೆಲೆ ಕೊಡಿಸುವುದರ ಜೊತೆಗೆ
ಲಸಿಕೆ ತರಿಸುವ ವ್ಯವಸ್ಥೆ ಮಾಡುವುದಾರಿ ಬರವಸೆ
ನೀಡಿದ್ದಾರೆ ಎಂದರು.
ಈ ಸಂದರ್ಭ ತಹಸೀಲ್ದಾರ್ ಬಸನಗೌಡ ಕೋಟೂರ, ಸಿಪಿಐ
ದೇವರಾಜ್, ಪಿಎಸ್‍ಐ ಬಸವನಗೌಡ ಬಿರಾದರ್, ಇಓ
ಗಂಗಾಧರಮೂರ್ತಿ,ಪುರಸಭೆ ಅಧ್ಯಕ್ಷ
ಕೆ.ವಿ.ಶ್ರೀಧರ್,ಪುರಸಭೆ ಮುಖ್ಯಾಧೀಕಾರಿ
ಅಶೋಕ್,ಗ್ರೇಡ್ 2 ತಹಸೀಲ್ದಾರ್
ಸುರೇಶ್,ಉಪತಹಶೀಲ್ದಾರ್ ಪರಮೇಶ್ ನಾಯ್ಕ
ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ
ವರ್ತಕರು ಉಪಸ್ಥಿತರಿದ್ದರು.