ಭೇಟಿ

ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ.ಬಸವರಾಜ ಇವರು ಮೇ 7 ರಂದು ವೈದ್ಯಕೀಯ
ಆಮ್ಲಜನಕ ಪೂರೈಸುವ ಹರಿಹರ ತಾಲ್ಲೂಕಿನ ಸದರನ್ ಗ್ಯಾಸ್
ಕಾರ್ಖಾನೆಗೆ ಭೇಟಿ, ಜಿಲ್ಲೆಯ ಆಸ್ಪತ್ರೆಗಳಿಗೆ ಸರಿಯಾದ
ಸಮಯಕ್ಕೆ ವೈದ್ಯಕೀಯ ಆಮ್ಲಜನಕವನ್ನು ಸರಬರಾಜು
ಮಾಡಬೇಕೆಂದು ಸೂಚನೆ ನೀಡಿದರು.
ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೊರೊನಾ
ಸೋಂಕಿತರಿಗೆ ಯಾವುದೇ ರೀತಿಯಲ್ಲಿ ವ್ಯತ್ಯಯ
ಉಂಟಾಗಬಾರದು. ಹಾಗೇನಾದರೂ ಆದರೆ ಕಾನೂನು ಪ್ರಕಾರ
ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಈ ವೇಳೆ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಹನುಮಂತರಾಯ, ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ
ದಾನಮ್ಮನವರ್ ಸೇರಿದಂತೆ ಇತರೆ ಅಧಿಕಾರಿಗಳು
ಉಪಸ್ಥಿತರಿದ್ದರು.
(ಫೋಟೊ ಇದೆ)
ಹರಿಹರದ ಕೋವಿಡ್ ಕೇರ್ ಸೆಂಟರ್‍ಗೆ ಉಸ್ತುವಾರಿ ಸಚಿವರ

ಭೇಟಿ: ಪರಿಶೀಲನೆ
ದಾವಣಗೆರೆ ಮೇ 7 (ಕರ್ನಾಟಕ ವಾರ್ತೆ)-
ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ.ಬಸವರಾಜ ಇವರು ಮೇ 7 ರಂದು ಹರಿಹರದ ಡಿ.ದೇವರಾಜ
ಅರಸ್ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ
ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ,
ಸೌಲಭ್ಯಗಳನ್ನು ವೀಕ್ಷಿಸಿ ಕೋವಿಡ್ ಸೋಂಕಿತರ ಆರೋಗ್ಯ
ವಿಚಾರಿಸಿದರು.
ನಂತರ ಹರಿಹರ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ,
ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ
ಸಿಗುತ್ತಿದೆಯೇ, ಔಷಧೋಪಚಾರ ಸಮರ್ಪಕವಾಗಿ
ಆಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಹನುಮಂತರಾಯ, ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ
ದಾನಮ್ಮನವರ್, ಡಿಹೆಚ್‍ಓ ಡಾ.ನಾಗರಾಜ್ ಸೇರಿದಂತೆ ಇತರೆ
ಅಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *