ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ
ಎಂ.ಪಿ.ರೇಣುಕಾಚಾರ್ಯರವರು ಮೇ 8 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಮೇ 8 ರ ಬೆಳಿಗ್ಗೆ 9.30 ರಿಂದ ಹೊನ್ನಾಳಿ ತಾಲ್ಲೂಕು ಸಾರ್ವಜನಿಕರ
ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ, 11.30 ರಿಂದ
ಸಂಜೆ 5.30 ರವರೆಗೆ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ.ಬಸವರಾಜ ಅವರೊಂದಿಗೆ ಹೊನ್ನಾಳಿ ಹಾಗೂ ನ್ಯಾಮತಿ
ಅವಳಿ ತಾಲ್ಲೂಕುಗಳ ವ್ಯಾಪ್ತಿಯ ತಾಲ್ಲೂಕು ಸಾರ್ವಜನಿಕ
ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ
ಭೇಟಿ ನೀಡಿ, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ
ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆ ನಡೆಸುವರು
ಹಾಗೂ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ, ಕೋವಿಡ್-
19 ಸೋಂಕನ್ನು ತಡೆಗಟ್ಟುವಲ್ಲಿ ತೆಗೆದುಕೊಂಡ ಅಥವಾ
ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ
ಪರಿಶೀಲನೆ ನಡೆಸುವರು. ನಂತರ ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ
ಮಾಡುವರು.
ಮೇ 9 ರಂದು ಕಾರ್ಯಕ್ರಮಗಳು ಯಥಾವತ್ತಾಗಿ
ಮುಂದುವರೆಯಲಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ
ತಿಳಿಸಿದ್ದಾರೆ.