ಹೊನ್ನಹಳಿ ದಿನಾಂಕ 7-5- 2021 ರಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ತಾಲೂಕು ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ತಾಲೂಕು ದಂಡಾಧಿಕಾರಿಗಳು ಹಾಗೂ. ಹೊನ್ನಾಳಿ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹೋಲ್ ಸೇಲ್ ತರಕಾರಿ ಮಾರಲಿಕ್ಕೆ ಜಾಗವನ್ನು 30 ಅಡಿಗೆ ಒಂದರಂತೆ ಅಂಗಡಿಯನ್ನು ಗುರುತಿಸಿ ಹಾಕಿಕೊಂಡು ಮಾಸ್ಕ್ ಧರಿಸಿ ಅಂತರವನ್ನು ಕಾಯ್ದುಕೊಂಡು ಜನರಿಗೆ ಮಾರ್ಕೆಟ್ ದರಕ್ಕಿಂತ ಹೆಚ್ಚಿಗೆ ಬೆಲೆಗೆ ಮಾರುವಹಾಗಿಲ್ಲ ಮಾರಿದರೆ ಕ್ರಿಮಿನಲ್ ಕೇಸ್ ದಾಖಲಾಗುವುದು ಮತ್ತು ಬೆಳಗ್ಗೆ 6 ಗಂಟೆಯಿಂದ 10:55 ನಿಮಿಷಕ್ಕೆ ಒಳಗಾಗಿ ಪ್ರತಿಯೊಬ್ಬರು ಈ ಜಾಗದಿಂದ ಖಾಲಿ ಮಾಡಬೇಕೆಂದು ಹೇಳಿದರು.

ನಂತರ ತಾಲೂಕು ತಹಶೀಲ್ದಾರ್ ಬಸನಗೌಡ ಕೋಟೂರು ರವರು ಮಾತನಾಡಿ ಹೊನ್ನಾಳಿ ಟೌನ್ ನಲ್ಲಿರುವ ಕಿರಾಣಿ ಅಂಗಡಿಗಳು ಮತ್ತು ಟ್ರೇಡರ್ ದಾರರು ಪ್ರತಿಯೊಬ್ಬರು ಅಂಗಡಿಯ ಮುಂದಗಡೆ ಜನರು ನಿಲ್ಲಲಿಕ್ಕೆ ಬಾಕ್ಸನ್ನು ಪೇಂಟಿನಲ್ಲಿ ಬರೆಸಿ 3ರಿಂದ 4 ಅಡಿಗೆ ಬಾಕ್ಸನ್ನ ಮಾರ್ಕ ಮಾಡಬೇಕು ಆ ಜಾಗದಲ್ಲಿ ಗ್ರಾಹಕರು ನಿಲ್ಲಬೇಕು ಮತ್ತು. ಕಿರಾಣಿ ಅಂಗಡಿಯವರು ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ಹಣವನ್ನು ಕೊರೋನಾ ಹೆಸರಿನಲ್ಲಿ ಸಾಮಾನುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಗೊತ್ತಾದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಕಿರಾಣಿ ಅಂಗಡಿ ಮಾಲೀಕರಿಗೆ ಖಡಕ್ ಆಗಿ ಸೂಚನೆಯನ್ನು ಕೊಟ್ಟರು.
ಹೊನ್ನಾಳಿ ತಾಲೂಕಿನ ಜನರು ಬೇಡ್ , ಆಕ್ಸಿಜನ್ ಗೆ ತೊಂದರೆಯಾದರೆ, ಕಿರಾಣಿ ಸಾಮಾನುಗಳು ಹೆಚ್ಚಿಗೆ ದರ,ತರಕಾರಿ ಹೆಚ್ಚಿಗೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಗೊತ್ತಾದರೆ ಪ್ರತಿಯೊಬ್ಬ ಜನರು ನಮ್ಮ ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಾಲೂಕು ಆಫೀಸಿನ ಸಹಾಯವಾಣಿ ಇವರಿಗೆ ಕರೆ ಮಾಡಬಹುದು ಎಂದು ಹೇಳಿದರು ಸಹಾಯ ವಾಣಿ ನಂಬರ್:- 0818 825 1025
EEO ಫೋನ್ ನಂಬರ್ 9480863120
ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ರವರ 9900750181
ಪುರಸಭೆ ಸಭೆಯ ಅಧ್ಯಕ್ಷರು ಕೆವಿ ಶ್ರೀಧರ್ 944840 3804
p.s.i. ಬಸನಗೌಡ ಬೀರ್ ದಾರ್ 9480803263.ಈ ಸಹಾಯವಾಣಿಗೆ ಕರೆ ಮಾಡಬೇಕೆಂದು ತಾಲೂಕು ತಹಶೀಲ್ದಾರ್ ರಾದ ಬಸನಗೌಡ ಕೋಟೂರ್ ಅವರು ಮನವಿ ಮಾಡಿಕೊಂಡರು.

ಇವರು ಉಪಸ್ಥಿತಿಯಲ್ಲಿ :- ಶಾಸಕರಾದ ಎಂಪಿ ರೇಣುಕಾಚಾರ್ಯ ,ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೋಟೂರ್, ಸಿಪಿಐ ಟಿವಿ ದೇವರಾಜ್, ಪಿಎಸ್ಐ ಬಸನಗೌಡ ಬೀರದಾರ್, ಪುರಸಭೆಯ ಅಧ್ಯಕ್ಷರು ಕೆ ವಿ ಶ್ರೀಧರ್, ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *