ಹೈಕೋರ್ಟ್ ಕರ್ನಾಟಕಕ್ಕೆ ಆಕ್ಸಿಜನ್ ನೀಡುವಂತೆ ಆದೇಶ ನೀಡಿದರೂ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕಕ್ಕೆ ಆಕ್ಸಿಜನ್ ನೀಡಬಾರದು ಎಂದು ಮೊರೆ ಹೋಗಿದ್ದ ಕೇಂದ್ರ ಸರ್ಕಾರಕ್ಕೆ ಸಾವು ಬದುಕಿನ ಹೋರಾಟದಲ್ಲಿರುವ ಕೊರೋನಾ ಸೋಂಕಿತರಿಗೆ ಇಂದು ಸುಪ್ರೀಂ ಕೋರ್ಟ್ ಆಕ್ಸಿಜನ್ ನೀಡುವಂತೆ ಆದೇಶ ಮಾಡಿ ರಾಜ್ಯದ ಸೋಂಕಿತರ ಪ್ರಾಣ ಕಾಪಾಡಲು ನೀಡಿದ ಆದೇಶದಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ಸರ್ಕಾರದ ಮುಖ್ಯಮಂತ್ರಿಗಳು ಸೇರಿದಂತೆ ಯಾವೊಬ್ಬ ಮಂತ್ರಿಗಳು ಹಾಗೂ 25 ಎಂ.ಪಿ.ಗಳು ಕರ್ನಾಟಕಕ್ಕೆ ಆಕ್ಸಿಜನ್ ನೀಡುವಂತೆ ಒತ್ತಾಯದಿಂದ ಮನವಿ ಮಾಡದಿರುವುದು ಜನತೆಯ ಆಕ್ರೋಶ ಮುಗಿಲು ಮುಟ್ಟಿ ಈಗ ಯೋಚಿಸುವ ಕಾಲ ಬಂದಿದೆ. ರಾಜ್ಯದ ಜನತೆಗೆ ಮೋದಿ ಸರ್ಕಾರ ಬಗೆದ ದ್ರೋಹಕ್ಕೆ ಸುಪ್ರೀಂ ಕೋರ್ಟ್ ಚಾಟಿ ಏಟು ನೀಡಿ ಕರ್ನಾಟಕಕ್ಕೆ ಆಕ್ಸಿಜನ್ ನೀಡಲು ಆದೇಶ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯು ಸರ್ವೋಚ್ಚ ನ್ಯಾಯಾಲಯಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಎಂ.ಡಿ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. 🙏

Leave a Reply

Your email address will not be published. Required fields are marked *