ಪದವೀಧರರ ಸಹಕಾರ ಸಂಘದ ವತಿಯಿಂದ ಈ ದಿನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಆಕ್ಸಿಜನ್ ಕೊರತೆಯನ್ನು ನೀಗಿಸುವ ಸಲುವಾಗಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ಒಂದು ಟ್ಯಾಂಕರ್ ಎಂದರೆ 11 ಟನ್ ತೂಕದ ಆಕ್ಸಿಜನ್ ಗೆ ತಗಲುವ ವೆಚ್ಚ 2,10,000 ರೂಗಳ ಚೆಕ್ ಅನ್ನು ಪದವೀಧರರ ಸಹಕಾರ ಸಂಘದ ವತಿಯಿಂದ ಇಂದು ಸಿಮ್ಸ್ ನಿರ್ದೇಶಕರಿಗೆ ದೇಣಿಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಪದವೀಧರರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಯುತ ಎಸ್ ಪಿ ದಿನೇಶ್ ರವರು ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮಮತ ಎಸ್ ರವರು ಹಾಗೂ ನಿರ್ದೇಶಕರುಗಳಾದ ಜಗದೀಶ ಟಿ, ಪ್ರಸನ್ನ ಎಸ್ ಹೆಚ್, ಕೃಷ್ಣಮೂರ್ತಿ ಎಸ್ ಕೆ ಹಾಗೂ ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಗೋಪಾಲಕೃಷ್ಣರವರು, ಶ್ರೀಮತಿ ಕವಿತಾ ಬಿ ಎಸ್ ರವರು ಹಾಗೂ ಸಿಮ್ಸ್ ನ ನಿರ್ದೇಶಕರಾದ ಸಿದ್ದಪ್ಪ, ಡಾ. ಶ್ರೀಧರ, ದಿವಾಕರ್ ಶೆಟ್ಟಿ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.