ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ
ಸರ್ಕಾರ ಮೇ 10 ರಿಂದ ಅನ್ವಯವಾಗುವಂತೆ ಹೊರಡಿಸಿರುವ
ಹೊಸ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿ ಹಿನ್ನೆಲೆಯಲ್ಲಿ ಮೇ
10 ರ ಬೆಳಿಗ್ಗೆ 6 ರಿಂದ ಮೇ 24 ರ ಬೆಳಿಗ್ಗೆ 6 ಗಂಟೆವರೆಗೆ ಸಿಆರ್‍ಪಿಸಿ
ಸೆಕ್ಷನ್ 144 ರನ್ವಯ ಜಿಲ್ಲೆಯಾದ್ಯಂತ ನಾಲ್ಕಕ್ಕಿಂತ ಹೆಚ್ಚು
ಜನರು ಗುಂಪು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು
ಆದೇಶಿಸಿದ್ದಾರೆ.
ರೈಲ್ವೇ ನಿಲ್ದಾಣ ಮತ್ತು ಕೋವಿಡ್ ಶಿಷ್ಟಾಚಾರ ಪಾಲನೆ
ಹೊರತುಪಡಿಸಿ ಉಳೆದೆಲ್ಲೆಡೆ ಈ ನಿಷೇಧಾಜ್ಞೆ
ಜಾರಿಯಲ್ಲಿರುತ್ತದೆ. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದಲ್ಲಿ
ವಿಪತ್ತು ನಿರ್ವಹಣಾ ಕಾಯ್ದೆ 2005 ರ 51 ರಿಂದ 60 ಹಾಗೂ ಐಪಿಸಿ
ಸೆಕ್ಷನ್ 188 ಮತ್ತು ಕರ್ನಾಟಕ ಎಂಪೆಡಿಮಿಕ್ ಡಿಸೀಸಸ್ ಆಕ್ಟ್ 2020 ರ
ಸೆಕ್ಷನ್ 4, 5 ಮತ್ತು 10 ರಡಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *