ಮಾರ್ಗಸೂಚಿಗಳ
ಕಟ್ಟುನಿಟ್ಟಿನ ಜಾರಿಗೆ ಆದೇಶ
ಕೋವಿಡ್ 19 ಸೋಂಕು ಹರಡುವ ಸರಪಳಿಯನ್ನು
ತಡೆಗಟ್ಟಲು ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು
ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮೇ 10 ರಿಂದ 24 ರವರೆಗೆ
ಪರಿಷ್ಕøತ ಮಾರ್ಗಸೂಚಿಗಳ ಆದೇಶವನ್ನು ಹೊರಡಿಸಿದ್ದು,
ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಪ್ರದತ್ತವಾದ ಅಧಿಕಾರ
ಚಲಾಯಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ
ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಮೇ 10
ರ ಬೆಳಿಗ್ಗೆ 6 ರಿಂದ ಮೇ 24 ರ ಬೆಳಿಗ್ಗೆ 6 ಗಂಟೆವರೆಗೆ ಈ
ಪರಿಷ್ಕøತ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ
ಆದೇಶಿಸಿರುತ್ತಾರೆ.
ಕೋವಿಡ್ 19 ಪರಿಷ್ಕøತ ಮಾರ್ಗಸೂಚಿಗಳನ್ನು ಮತ್ತು
ಕ್ರಮಗಳನ್ನು ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದ
ಪ್ರಾಧಿಕಾರಗಳು ಹಾಗೂ
ಮಹಾನಗರಪಾಲಿಕೆ/ನಗರಸಭೆ/ಪುರಸಭೆ ಹಾಗೂ
ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲಾ ಇಲಾಖಾ
ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು
ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.