ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಪುರಸಭೆ ಮುಖ್ಯ ಅಧಿಕಾರಿಗಳಾದ ಸಿ ಅಶೋಕ್ ರವರ ನೇತೃತ್ವದಲ್ಲಿ ಅವರು ಸಿಬ್ಬಂದಿ ವರ್ಗದವರ ಜೊತೆಗೂಡಿ ಪ್ರತಿಯೊಂದುಭ ಅಂಗಡಿಗಳಿಗೆ ತೆರಳಿ ಮಾಸ್ಕ ಮತ್ತು ಸ್ಯಾನಿಟೈಸರ ಬಳಸಬೇಕು ಅದರ ಜೊತೆಗೆ ಅಂತರ ಕಾಯ್ದುಕೊಂಡು ವ್ಯವಹಾರ ಮಾಡಬೇಕೆಂದು ಕಿರಾಣಿ ಅಂಗಡಿಯವರಿಗೆ ಮೆಡಿಕಲ್ ಶಾಪ್ ನವರಿಗೆ ಕಡಕ್ ಆಗಿ ಎಚ್ಚರಿಕೆ ಕೊಟ್ಟರು.

ನಂತರ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಯಾದ ಸಿ ಅಶೋಕ್ ರವರು ಪ್ರತಿಯೊಂದು ಅಂಗಡಿಗಳಲ್ಲಿ ಮಾಸ್ಕಮತ್ತು ಅಂತರವನ್ನು ಕಾಯ್ದುಕೊಳ್ಳದೇ ಇರುವ ಅಂಗಡಿಗಳಿಗೆ ತೆರಳಿ ಸುಮಾರು 9 ಅಂಗಡಿಯವರಿಗೆ ಒಂದು ಅಂಗಡಿಗೆ 100ರೂಗಳಂತೆ ದಂಡವನ್ನು

ಹಾಕುವುದರ ಜೊತೆಗೆ ಅವರ ವಿರುದ್ದ
ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ .ಇಂದು ರಜೆ ಇದ್ದ ಕಾರಣ ಸೋಮುವಾರ ತಹಸೀಲ್ದಾರ್ ರಾದ ಬಸವನಗೌಡ ಕೊಟೊರೂರವರಿಗೆ ಗಮನಕ್ಕೆ ತಂದು ಅವರ ಆದೇಶದ ಮೇರಗೆ ಹೊನ್ನಾಳಿ ಪೋಲಿಸ್ ಠಾಣೆಯಗೆ ತೆರಳಿ ದೂರು ದಾಖಲಿಸಲಾಗುವುದು ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ :-ಪುರಸಭೆ ಮುಖ್ಯಾಧಿಕಾರಿ ಗಳಾದ ಸಿ ಅಶೋಕ್ ರವರು, ಮತ್ತು ಪಟ್ಟಣ ಪಂಚಾಯತಿಯ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *