ಹೊನ್ನಾಳಿ : ಅವಳಿ ತಾಲೂಕಿನಲ್ಲಿ ಲಸಿಕೆಗೆ ಯಾವುದೇ
ರೀತಿಯ ವ್ಯತೇಯವಾಗದಂತೆ ಕ್ರಮ
ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಕಾಲಕ್ಕೆ
ಬಂದು ನೂಕು ನುಗ್ಗಲಿಲ್ಲದಂತೆ ಲಸಿಕೆ
ಹಾಕಿಸಿಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ
ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ
ಮಾಡಿದ್ದಾರೆ. ಚೀಲೂರು ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಮಾಹಿತಿ ಪಡೆದು
ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್
ಲಸಿಕೆಯನ್ನು ಆರಂಭದಲ್ಲಿ ಜನರು ಪಡೆಯಲು
ಹಿಂದೇಟು ಹಾಕುತ್ತಿದ್ದರು, ಆದರೇ ಇದೀಗ ಲಸಿಕೆಗಾಗೀ
ಮುಗಿ ಬೀಳುತ್ತಿದ್ದಾರೆ, ಇದರಿಂದ ಲಸಿಕೆಯ ಆಭಾವ
ಉಂಟಾಗುತ್ತಿದ್ದು ಸರ್ಕಾರ ಲಸಿಕೆ ಪೂರೈಕೆಗೆ
ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ ಎಂದರು.
18 ವರ್ಷ ಮೇಲ್ಪಟ್ಟ ಎಲ್ಲರೂ ಈಗಾಗಲೇ ಆನ್‍ಲೈನ್
ಮೂಲಕ ಲಸಿಕೆ ಹಾಕಿಸಿಕೊಳ್ಳಲು ನೊಂದಣಿ
ಮಾಡಿಸಿಕೊಳ್ಳುತ್ತಿದ್ದಾರೆ ಎಂದ ಅವರು, ಹೊನ್ನಾಳಿ
ತಾಲೂಕಿನಲ್ಲಿ 1500 ಜನರು ಈಗಾಗಲೇ ನೊಂದಣಿ
ಮಾಡಿಸಿದ್ದು ಅವರಿಗೂ ಸಹ ಸಕಾಲದಲ್ಲಿ ಲಸಿಕೆ
ನೀಡಲಾಗುವುದು ಎಂದರು. ವೈದ್ಯರು
ದಾದಿಯರು ತಮ್ಮ ಪ್ರಾಣದ ಹಂಗನ್ನು ತೊರೆದು
ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದು
ಅಂತಹ ಕರೋನಾ ವಾರಿಯರ್ಸಗೆ ಗೌರವಿಸ ಬೇಕು,
ಆದರೇ ಕೆಲವು ಕಡೆ ಅಂತಹವರ ಮೇಲೆ
ದೌರ್ಜನ್ಯಗಳು ನಡೆಯುತ್ತಿರುವುದು
ವಿಷಾಧನೀಯ ಎಂದರು. ಇಂತಹ ಅವಘಡಗಳು
ಸಂಭವಿಸಿದರೇ ಅಂತಹವರ ವಿರುದ್ದ ಕಠಿಣ ಕ್ರಮ
ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ
ಎಂದರು.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು
ಕೋವಿಡ್ ತಪಾಸಣೆ ಕೇಂದ್ರವನ್ನು ಆಸ್ಪತ್ರೆಯ
ಆವರಣದಲ್ಲಿ ಪ್ರತೇಕ ಮಾಡುವಂತೆ ಸೂಚಿಸಿದ್ದರಿಂದ
ಆಸ್ಪತ್ರೆಯ ಎಡ ಭಾಗಕ್ಕೆ ಕೋವಿಡ್ ತಪಾಸಣೆಗೆ
ವ್ಯವಸ್ಥೆ ಮಾಡಲಾಯಿತಲ್ಲದೇ ಹೊರ ರೋಗಿಗಳ
ವಿಭಾಗ ಮತ್ತು ವ್ಯಾಕ್ಸಿನ್ ನೋಂದಣಿಯನ್ನು
ಆಸ್ಪತ್ರೆಯ ಮುಂಭಾಗದಲ್ಲಿ ವ್ಯವಸ್ಥೆ
ಮಾಡಲಾಯ್ತು.
ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿ ಹಣ ವಸೂಲಿ
ಮಾಡುತ್ತಿದ್ದವು ಎಂಬ ದೂರಿನ ಹಿನ್ನೆಲೆಯಲ್ಲಿ ಸಿಟಿ
ಸ್ಕ್ಯಾನ್ ದರವನ್ನು ರಾಜ್ಯ ಸರ್ಕಾರ ಕಡಿಮೆ ಮಾಡಿ ಎಲ್ಲಾ
ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‍ಗಳಿಗೆ ಆದೇಶ
ಹೊರಡಿಸಿದೆ ಬಿಪಿಎಲ್ ಕಾರ್ಡುದಾರರಿಗೆ 1500 ರೂಗಳು,
ಇತರರಿಗೆ 2500ರೂಗಳನ್ನು ನಿಗದಿಪಡಿಸಿದೆ ಎಂದರು.
ಅವಳಿ ತಾಲೂಕಿನಾದ್ಯಾಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಿಗಿ
ಬಂದೋಬಸ್ತ್ ಕೈಗೊಂಡಿದ್ದರೂ ಕೆಲವರು
ಅನಾವಶ್ಯಕವಾಗಿ ಓಡಾಡುವ ಮೂಲಕ ಲಾಕ್‍ಡೌನ್
ಬ್ರೇಕ್‍ಮಾಡುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಪೊಲೀಸ್ ಇಲಾಖೆಗೆ ಕಠಿಣ ಕ್ರಮ
ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ನನಗೆ
ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕಿ ಕಡಿಮೆಯಾಗಿ
ಅವಳಿ ತಾಲೂಕಿನ ಜನರು ಆರೋಗ್ಯದಿಂದ ಇರ
ಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.
ಚಿತ್ರಸುದ್ದಿ : ಚೀಲೂರಿನ ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಸಿಎಂ ರಾಜಕೀಯ ಕಾಂiÀರ್iದರ್ಶಿ
ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಸಿಬ್ಬಂಧಿಗಳಿಂದ
ಮಾಹಿತಿ ಪಡೆದರು.