ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ. ಬಸವರಾಜ ಅವರು ಮೇ 13 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಸಚಿವರು ಅಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ಪ್ರವಾಸಿ
ಮಂದಿರ (ಸಕ್ರ್ಯೂಟ್ ಹೌಸ್) ಗೆ ಆಗಮಿಸುವರು. ಬಳಿಕ 10.30 ಕ್ಕೆ
ಕೋವಿಡ್ -19 ನಿಯಂತ್ರಣದ ಕುರಿತು ಕೈಗೊಳ್ಳಲಾಗಿರುವ ಹಾಗೂ
ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ,
ಜಿಲ್ಲೆಯ ಸಂಸದರು, ಶಾಸಕರು ಹಾಗೂ ಹಿರಿಯ
ಅಧಿಕಾರಿಗಳೊಂದಿಗೆ ಜಿಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ
ನಡೆಸಲಿದ್ದಾರೆ.
ಮಧ್ಯಾಹ್ನ 2.30 ಕ್ಕೆ ದಾವಣಗೆರೆ ಜಿಲ್ಲೆಯ ವಿವಿಧ
ತಾಲ್ಲೂಕುಗಳಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ ಚರ್ಚೆ ನಡೆಸುವರು.
ಸಚಿವರು ಅಂದು ಸಂಜೆ 5.30 ಕ್ಕೆ ದಾವಣಗೆರೆಯಿಂದ
ನಿರ್ಗಮಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಸಿ. ನಾಗರಾಜು
ತಿಳಿಸಿದ್ದಾರೆ.