ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಸ್ನಾತಕೋತ್ತರ
ಅಧ್ಯಯನ ವಿಭಾಗಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ
ಲಭ್ಯವಿರುವ ಪಿಹೆಚ್‍ಡಿ, ಪಿಡಿಎಫ್, ಡಿ.ಎಸ್‍ಇಸಿ, ಡಿ.ಲಿಟ್ ಸಂಶೋಧನಾ ಸ್ಥಾನಗಳಿಗೆ
ಅರ್ಜಿ ಆಹ್ವಾನಿಸಿದ್ದು, ಸರ್ಕಾರ ಪ್ರಸ್ತುತ ಲಾಕ್‍ಡೌನ್
ಘೋಷಿಸಿರುವುದರಿಂದ ಅರ್ಜಿ ಸಲ್ಲಿಕೆ ಅವದಿಯನ್ನು ಮೇ. 31
ರವರೆಗೆ ವಿಸ್ತರಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವು ಮೇ 10 ರಿಂದ 24 ರವರೆಗೆ
ಲಾಕ್‍ಡೌನ್ ಗೆ ಆದೇಶ ನೀಡುವುದರಿಂದ, ಕುಲಪತಿಗಳ
ಅನುಮೋದನೆ ಮೇರೆಗೆ ಪಿಹೆಚ್‍ಡಿ, ಪಿಡಿಎಫ್, ಡಿ.ಎಸ್‍ಇಸಿ, ಡಿ.ಲಿಟ್ ಸಂಶೋಧನಾ
ಸ್ಥಾನಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 31 ರವರೆಗೆ
ಅವಧಿಯನ್ನು ವಿಸ್ತರಿಸಲಾಗಿದೆ.

ಅರ್ಜಿದಾರರು ಭರ್ತಿ ಮಾಡಿದ ಅರ್ಜಿಗಳನ್ನು ಮೇ. 31 ರಂದು
ಸಂಜೆ 5 ಗಂಟೆಗಳೊಳಗೆ ಸಂಬಂಧಪಟ್ಟ ವಿಭಾಗದಲ್ಲಿ
ಸಲ್ಲಿಸಬಹುದು.
ಪಿಹೆಚ್‍ಡಿ, ಪಿಡಿಎಫ್, ಡಿ.ಎಸ್‍ಇಸಿ, ಡಿ.ಲಿಟ್ ಸಂಶೋಧನಾ ಸ್ಥಾನಗಳಿಗೆ
ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ವಿಶ್ವವಿದ್ಯಾನಿಲಯದ
ವೆಬ್‍ಸೈಟ್ ತಿತಿತಿ.ಜಚಿvಚಿಟಿಚಿgeಡಿeuಟಿiveಡಿsiಣಥಿ.ಚಿಛಿ.iಟಿ ಸಂಪರ್ಕಿಸಬಹುದು ಎಂದು
ದಾವಣಗೆರೆ ವಿವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *