,ಕೌರಿಕರಿಗೆ ದುಡಿಯಲು
ಅವಕಾಶ ಕೊಡಿ: ತಾಲೂಕು ಸವಿತಾ ಸಮಾಜ ಅಧ್ಯಕ್ಷರಾದ ಎನ್ ಆರ್ ಕೃಷ್ಣಮೂರ್ತಿ
ಲಾಕ್‌ಡೌನ್‌ನಿಂದ ಕ್ಷೌರಿಕ ಸಮಾಜ
ತೀರಾ ಸಂಕಷ್ಟಕ್ಕೆ ಸಿಲುಕಿದೆ. ಹೊತ್ತಿನ
ಊಟಕ್ಕೆ ಸಮಸ್ಯೆಯಾಗಿದೆ ಎಂದು ಸವಿತಾ
ಸಮಾಜದ ತಾಲ್ಲೂಕು ಅಧ್ಯಕ್ಷರಾದ ಎನ್ ಆರ್ ಕೃಷ್ಣಮೂರ್ತಿ.
ಹೇಳಿದರು.
ಅಗತ್ಯ ವಸ್ತುಗಳಂತೆ ಬೆಳಗ್ಗೆ 6 ರಿಂದ
10 ಗಂಟೆ ವರೆಗೆ ಕ್ಷೌರದ ಅಂಗಡಿಗಳಿಗೂ ಅವಕಾಶ ನೀಡಿದೆ ಆದರೆ ಹಳ್ಳಿಗಳಿಂದ ಯಾರು ಬರುತ್ತಾ ಇಲ್ಲ ಜೀವನ ನಡೆಸುವುದು ಕಷ್ಟವಾಗಿದೆ ಹೊಟ್ಟೆ ತುಂಬುವುದಿಲ್ಲ ತಾಲೂಕ್ ನಲ್ಲಿ ಭಾಗಶಃ ಬಾಡಿಗೆ ಮನೆಗಳು ಬಾಡಿಗೆ ಅಂಗಡಿಗಳು ಕಸುಬನ್ನೇ ಆಧಾರಿತ ಕುಟುಂಬಗಳು ಬಹಳಷ್ಟಿವೆ. ದುಡಿಯಲು ಅವಕಾಶ ಇದ್ದರು ಇಲ್ಲದಂತಾಗಿದೆ ಇಲ್ಲದಿದ್ದರೆ ಸರ್ಕಾರದಿಂದ ಪ್ರತಿ ಕುಟುಂಬದವರಿಗೆ ತಿಂಗಳಿಗೆ 10
ಸಾವಿರ ರೂ. ಪರಿಹಾರ ನೀಡಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ
ಆಗ್ರಹಿಸಿದ್ದಾರೆ.ತಾಲೂಕುನಲ್ಲಿ 15 ದಿನಗಳಿಂದ ಸಲೂನ್‌ಗಳು ಮುಚ್ಚಿವೆ.
ಮನೆಯಲ್ಲಿ ತುತ್ತು ಅನ್ನಕ್ಕೂ ತತ್ವಾರವಾಗಿದೆ. ಹಿರಿಯರ ಔಷಧಿ,
ಮನೆ ಹಾಗೂ ಸಲೂನ್ ಬಾಡಿಗೆ ಕೊಡಲು ಹಣವಿಲ್ಲದೆ ಯಾತನೆ
ಅನುಭವಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಬೆಂಬಲಿಸುವುದು
ಎಲ್ಲರ ಕರ್ತವ್ಯ. ಅದನ್ನು ನಾವೂ ಬೆಂಬಲಿಸುತ್ತೇವೆ, ಆದರೆ, ತಾಲ್ಲೂಕು ನಲ್ಲಿ
2000 ಕ್ಕೂ ಹೆಚ್ಚಿನ ಬಡ ಕ್ಷೌರಿಕರಿಗೆ ಜಿಲ್ಲಾಡಳಿತವು ನೆರವು
ನೀಡಬೇಕೆಂದು ಕೃಷ್ಣಮೂರ್ತಿ . ಎನ್ ಆರ್ ಮನವಿ ಮಾಡಿದ್ದಾರೆ
,