ಡಿಸ್ಪೆನ್ಸರ್ ಕೊಡುಗೆ
ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ಕೋವಿಡ್
ರೋಗಿಗಳ ಅನುಕೂಲಕ್ಕಾಗಿ ಒಟ್ಟು 22 ಬ್ಲೂಸ್ಟಾರ್ ಹಾಟ್ ಅಂಡ್
ಕೋಲ್ಡ್ ವಾಟರ್ ಡಿಸ್‍ಪೆನ್ಸರ್ ಗಳನ್ನು ಸಂಸದರಾದ
ಡಾ.ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಬುಧವಾರ
ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಅವರು
ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ
ಹಸ್ತಾಂತರಿಸಿದರು.
ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೋವಿಡ್
ಸೋಂಕಿತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ
ಮಹಾನಗರಪಾಲಿಕೆ ವತಿಯಿಂದ ರೂ.9 ಸಾವಿರ ಮೌಲ್ಯದ ಒಟ್ಟು 22
ಬ್ಲೂಸ್ಟಾರ್ ಹಾಟ್ ಅಂಡ್ ಕೋಲ್ಡ್ ವಾಟರ್ ಡಿಸ್‍ಪೆನ್ಸರ್ ಗಳನ್ನು
ನೀಡಿರುವುದು ಶ್ಲಾಘನೀಯ.
ಜಿಲ್ಲಾಸ್ಪತ್ರೆಗೆ 20 ಮತ್ತು ಇ.ಎಸ್.ಐ ಆಸ್ಪತ್ರೆಗೆ 02 ಡಿಸ್‍ಪೆನ್ಸರ್
ಗಳನ್ನು ನೀಡಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಆಕ್ಸಿಜನ್
ಕೊರತೆಯಿರುವುದರಿಂದ ಆಕ್ಸಿಜನ್ ಕಾನ್ಸನ್‍ಟ್ರೇಟರ್ ಖರೀದಿಸಲು
ಮಹಾನಗರ ಪಾಲಿಕೆಯಿಂದ ರೂ.50 ಲಕ್ಷ ಪಡೆಯಲಾಗಿದ್ದು,
ಮುಂದಿನ ದಿನಗಳಲ್ಲಿ ದಾನಿಗಳು ಸಹಾಯಹಸ್ತ ನೀಡಲು
ಮುಂದೆ ಬಂದರೆ ಮತ್ತಷ್ಟು ಆಕ್ಸಿಜನ್ ಕಾನ್ಸನ್‍ಟ್ರೇಟರ್
ಗಳನ್ನು ಖರೀದಿಸುತ್ತೇವೆ ಎಂದರು.
ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್
ಮಾತನಾಡಿ, ತಾವು ಸಿ.ಜಿ.ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು ಇಲ್ಲಿರುವ
ವೈದ್ಯರು, ಸಿಬ್ಬಂದಿಗಳ ಸಲಹೆಗಳ ಮೇರೆಗೆ ಹಾಗೂ
ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ರೂ.9 ಸಾವಿರ
ಮೌಲ್ಯದÀ ಒಟ್ಟು 22 ನೀರಿನ ಡಿಸ್‍ಪೆನ್ಸರ್‍ಗಳನ್ನು ಜಿಲ್ಲಾಸ್ಪತ್ರೆಗೆ
ಹಾಗೂ ಇ.ಎಸ್.ಐ ಆಸ್ಪತ್ರೆಗಳಿಗೆ ನೀಡಿದ್ದು, ಇದನ್ನು ಸದ್ಬಳಕೆ
ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲ್ಲಾಸ್ಪತ್ರೆ
ಡಿಎಸ್ ಡಾ.ಜಯಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.