ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ
ನಿರ್ವಹಿಸುವವರನ್ನು ಫ್ರಂಟ್‍ಲೈನ್ ವಾರಿಯರ್ಸ್ ಎಂದು
ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ
ಮೇರೆಗೆ ಬುಧವಾರ ದಾವಣಗೆರೆ ಪತ್ರಕರ್ತರ ಭವನದಲ್ಲಿ
ಕೋವಿಡ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
18 ರಿಂದ 45 ವಯೋಮಾನದ ಸುಮಾರು 129 ಜನ ಮುದ್ರಣ
ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯ
ನಿರ್ವಹಿಸುತ್ತಿರುವ ಪತ್ರಕರ್ತರು, ಫೋಟೊಗ್ರಾಫರ್,
ವಿಡಿಯೋಗ್ರಾಫರ್‍ಗಳು ಹಾಗೂ ವಾರ್ತಾ ಇಲಾಖೆ ಸಿಬ್ಬಂದಿಗಳು
ಲಸಿಕೆ ಪಡೆದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಮಹಾನಗರಪಾಲಿಕೆ
ಮಹಾಪೌರರಾದ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,
ಡಿಹೆಚ್‍ಓ ಡಾ.ನಾಗರಾಜ, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ ಹಾಜರಿದ್ದು,
ಲಸಿಕಾಕರಣದ ಮೇಲ್ವಿಚಾರಣೆ ಮಾಡಿದರು.
ಮಾಧ್ಯಮ ಕೊರೊನಾ ವಾರಿಯರ್ಸ್‍ಗಳ ಬೇಡಿಕೆಯಂತೆ
ಲಸಿಕಾಕರಣಕ್ಕೆ ಆದ್ಯತೆ ನೀಡಿ, ಒಂದೇ ಸ್ಥಳದಲ್ಲಿ ಸ್ಪಾಟ್ ರಿಜಿಸ್ಟ್ರೇಶನ್
ಮಾಡಿಕೊಳ್ಳುವ ಮೂಲಕ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಆರೋಗ್ಯ ಇಲಾಖೆ
ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಾರ್ತಾ ಇಲಾಖೆಯಿಂದ
ವಾರ್ತಾಧಿಕಾರಿ ಅಶೋಕ್‍ಕುಮಾರ್.ಡಿ ಧನ್ಯವಾದ ತಿಳಿಸಿದ್ದಾರೆ.