ಶಿವಮೊಗ್ಗ: ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರ ಕಚೇರಿಯ ಮೇಲೆ ದೆಹಲಿ ಪೊಲೀಸರು ತನಿಖೆ ನಡೆಸಿರುವದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿ.ವಿ.ಶ್ರೀನಿವಾಸ್ ಅವರು ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವವರ ನೆರವಿಗೆ ನಿರಂತರವಾಗಿ ಧಾವಿಸುತ್ತಿದ್ದಾರೆ. ಅಗತ್ಯ ಇದ್ದವರಿಗೆ ಆಕ್ಸಿಜನ್ ದೊರಕಿಸಿಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕೆಲಸಕ್ಕೆ ಬೆಂಬಲ ನೀಡುವುದರ ಬದಲಾಗಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ದೆಹಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಅವರ ಕಚೇರಿ ತನಿಖೆಗೊಳಪಡಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ್ ಅವರ ಶ್ರಮದ ಫಲವಾಗಿ ಅನೇಕ ಕೊರೊನಾ ಸೋಂಕಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಅವರ ಕಾರ್ಯವೈಖರಿಯನ್ನು ಇಡಿ ದೇಶವೇ ಮೆಚ್ಚುತ್ತಿದೆ. ದೇಶದ ಪ್ರಸಿದ್ಧ ನಟರು, ರಾಜಕಾರಣಿಗಳು, ಗೌರವಾನ್ವಿತರು ಅವರನ್ನು ಶ್ಳಾಘಿಸಿದ್ದಾರೆ. ಅಲ್ಲದೇ ನ್ಯೂಜಿಲೆಂಡ್ ವಿದೇಶಾಂಗ ಸಚಿವಾಲಯವು ಅವರ ಸೇವೆಯನ್ನು ಸ್ಮರಿಸಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಯುವ ಕಾಂಗ್ರೆಸ್‌ನ ಶ್ರೀನಿವಾಸ್ ಮಾಡುತ್ತಿದ್ದಾರೆ. ಅವರ ನಿರ್ದೇಶನದಂತೆ ದೇಶದಾದ್ಯಂತ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಹಗಲಿರುಳು ಕೊರೊನಾ ಸೋಂಕು ದೂರ ಮಾಡಲು ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅವರೆಲ್ಲರಿಗೂ ನೈತಿಕ ಬೆಂಬಲ ನೀಡಬೇಕೇ ವಿನಾಃ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದಿದ್ದಾರೆ.

ದಣಿವರಿಯದ ಯುವ ನಾಯಕರಾಗಿರುವ ಬಿ.ವಿ.ಶ್ರೀನಿವಾಸ್ ಅವರ ವರ್ಚಸ್ಸು ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಮೋದಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಶ್ರೀನಿವಾಸ್ ಅವರ ಬೆಳವಣಿಗೆಯನ್ನು ಸಹಿಸಲಾರದೇ ಅವರನ್ನು ಮಟ್ಟಹಾಕಲು ಇಂತಹ ಹೀನಕೃತ್ಯಕ್ಕೆ ಕೈ ಹಾಕಲಾಗಿದೆ ಎಂದು ಅವರು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೇತೃತ್ವದ ಬಿಜೆಪಿ ಸರ್ಕಾರ ಇಂತಹ ಧೋರಣೆಗಳನ್ನು ಕೈ ಬಿಡಬೇಕು. ಇಲ್ಲವಾದರೇ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಎಚ್ ಎಸ್ ಸುಂದರೇಶ್ ,ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ,ಮಾಜಿ ಸೂಡ ಅಧ್ಯಕ್ಷರಾದ ಎನ್ ರಮೇಶ್ ,
ಮಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ ,ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್.ಕೆ ,ಯುವ ಕಾಂಗ್ರೆಸ್ ಮುಖಂಡ ಸಿ ಜಿ ಮಧುಸೂದನ್ ,ಅಲ್ಪಸಂಖ್ಯಾತ ಕಾಂಗ್ರೆಸ್ ನ ನಗರ ಅಧ್ಯಕ್ಷರಾದ ಮುಹಮ್ಮದ್ ನಿಯಾಲ್ ,ಯುವ ಮುಖಂಡ ಮುಜೀಬ್ ,ಯುವ ಕಾಂಗ್ರೆಸ್ ಉತ್ತರ ಬ್ಲ್ಯಾಕ್ ಉಪಾಧ್ಯಕ್ಷ ಗಿರೀಶ್ ,NSUI ನ ವಿಜಯ್ ,ಚಂದ್ರೋಜಿ ,ಅಬ್ದುಲ್ಲ ಹಾಗೂ ಸಾಕಷ್ಟು ಕಾರ್ಯಕರ್ತರು ಭಾಗವಹಿಸಿ ಖಂಡಿಸಿದರು–

Leave a Reply

Your email address will not be published. Required fields are marked *