ಹೊನ್ನಾಳಿ : ಅವರೆಲ್ಲಾ ಕುಟುಂಬ ವರ್ಗದೊಂದಿಗೆ ಸಂತೋಷದಿಂದ ಇಂದು ಹಬ್ಬ ಆಚರಿಸ ಬೇಕಾಗಿತ್ತು. ಆದರೇ ಕರೋನಾ ಮಹಾಮಾರಿ ಅವರ ಸಂತಸಕ್ಕೆ ತಣ್ಣಿರು ಎರಚ್ಚಿತ್ತು. ಇದನ್ನು ಮನಗಂಡ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ ಹೋಳಿಗೆ ಉಣ ಬಡಿಸುವ ಮೂಲಕ ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿಸಿದರು.
ಬಸವ ಜಯಂತಿ ಪ್ರಯುಕ್ತ ಮಾದನಬಾವಿಯ ಕೋವಿಡ್ ಕೇರ್ ಸೆಂಟರ್ ಹಾಗೂ ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತರಿಗೆ, ಕರೋನಾ ವಾರಿಯರ್ಸ್‍ಗಳಾದ ಪೊಲೀಸ್,ಆರೋಗ್ಯ ಇಲಾಖೆ, ಅವಳಿ ತಾಲೂಕಿನ ತಾಲೂಕು ಆಡಳಿತ ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರೂ ಮತ್ತು ಆರು ಚೆಕ್‍ಪೋಸ್ಟ್‍ನಲ್ಲಿರುವ ಸಿಬ್ಬಂಧಿಗಳಿಗೂ ಹೋಳಿಗೆ ಊಟ ಉಣಬಡಿಸಿದ ರೇಣುಕಾಚಾರ್ಯ ಸುದ್ಧಿಗಾರರೊಂದಿಗೆ ಮಾತನಾಡಿದರು.
ಬಸವಜಂಯತಿಯನ್ನು ಕರೋನಾ ಸೋಂಕಿತರು ಮನೆಯಲ್ಲೇ ಇದ್ದಿದ್ದರೆ ಎತ್ತಿಗೆ ಪೂಜೆ ಮಾಡಿ ಸಡಗರ ಸಂಭ್ರಮದಿಂದ ಹಬ್ಬ ಆಸಚರಿಸುತ್ತಿದ್ದರು. ಆದರೆ ಕರೋನಾ ಸೋಂಕು ಅವರ ಸಡಗರವನ್ನು ಕಿತ್ತುಕೊಂಡು ಆಸ್ಪತ್ರೆಯಲ್ಲಿ ಕಿಚಿತ್ಸೆ ಪಡೆಯುಂತೆ ಮಾಡಿದೇ. ಆದ್ದರಿಂದ ಅವರಿಗೆ ಸಿಹಿ ನೀಡಿ ಶುಭಾಶಯ ಕೋರಿ, ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಕೃಷಿ ಚಟುವಟಿಕೆಯಲ್ಲಿ ಬಿರುಸಿನಿಂದ ತೊಡಗಿಸಿಕೊಳ್ಳಬೇಕಾದ ರೈತರು, ಶ್ರಮಿಕವರ್ಗ ಈ ದಿನಗಳಲ್ಲಿ ಕರೋನಾ ಎಂಬ ಹೆಮ್ಮಾರಿಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದರು.
ಕರೋನಾ ಮಹಾಮಾರಿ ಇಡೀ ವಿಶ್ವವೇ ಹಿಂಡಿಇಪ್ಪೇ ಮಾಡಿದ್ದು, ಇದರಿಂದ ಕೃಷಿಕರು, ವರ್ತಕರು, ಕೈಗಾರಿಕೋಧ್ಯಮಿಗಳು ಸೇರಿದಂತೆ ಅನೇಕ ಶ್ರಮಿಕವರ್ಗಗಳಿಗೆ ಬಾರೀ ಹೊಡೆತ ಬಿದ್ದಿದ್ದೆ ಎಂದ ಅವರು ಆದರೂ ಕೇಂದ್ರ ಹಾಗೂ ರಾಜ್ಯಸರ್ಕಾರ ಕರೋನಾ ವಿರುದ್ಧ ಸಮರ ಸಾರಿದ್ದು ಶೀಘ್ರ ಕರೋನಾ ಸೋಂಕಿತರ ಸಂಖ್ಯೆ ಗಣನಿಯವಾಗಿ ಇಳಿಯಲಿದೆ,ಅದಕ್ಕೂ ಮುನ್ನ ಸಾರ್ವಜನಿಕರು ಅಗತ್ಯವಾಗಿ ಮಾಸ್ಕ್ ಧರಿಸಿ ಶಾರೀರಕ ಅಂತರ ಕಾಪಾಡಿದರೆ ಕರೋನಾವನ್ನು ಗೆಲ್ಲಬಹುದು ಎಂದರು.
ಯಾರಿಗೆ ಚಳಿ,ಜ್ವರ ಹಾಗೂ ಕೆಮ್ಮು ಇದೆ ಎಂದು ಗೊತ್ತಾದರೆ ತಕ್ಷಣ ಕರೋನಾ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ,ಈ ವಿಚಾರದಲ್ಲಿ ಯಾರೂ ಸಹ ತಡ ಮಾಡಬೇಡಿ,ಇಲ್ಲದಿದ್ದರೆ ಸೋಂಕು ಉಲ್ಬಣಗೊಂಡು ಪ್ರಾಣಕ್ಕೆ ಸಂಚಕಾರ ಆಗಬಹುದು ಎಂದು ತಿಳಿಸಿದರು.
ಅಂಬೇಡ್ಕರ್ ಭವನದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಹಂತದ ಕೋಶೀಲ್ಡ್ ಹಾಗೂ ಕೋವ್ಯಾಕ್ಸಿನ್‍ಅನ್ನು ನೂರಾರು ಜನರಿಗೆ ಲಸಿಕೆಯನ್ನು ಕೊಡಿಸಿದರು.
18 ವರ್ಷ ಮೇಲ್ಪಟ್ಟವರಿಗೆ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ ಯಾರೂ ಸಹ ಆತಂಕಪಡುವ ಅಗತ್ಯ ಇಲ್ಲ,ಹಂತ ಹಂತವಾಗಿ ಲಸಿಕೆ ಬರಲಿದೆ ಸಾರ್ವಜನಿಕರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.