ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿಜಿ ಶಾಂತನಗೌಡ್ರು ರವರು ದಿನಾಂಕ 14-5- 2021 ರಂದು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಮುಸ್ಲಿಂ ಸಮಾಜದ ಪವಿತ್ರವಾದ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಜೊತೆಗೆ ಎನ್ ಎಸ್ ಯು ಐ ಕಾರ್ಯಕರ್ತರು ತಯಾರು ಮಾಡಿದಂತಹ ಆಹಾರವನ್ನು ಅಲೆಮಾರಿ ಸಮುದಾಯಕ್ಕೆ ಊಟವನ್ನು ಬಡಿಸುವ ಮೂಲಕ ಚಾಲನೆ ಕೊಟ್ಟರು.
ನಂತರ ಡಿ.ಜಿ ಶಾಂತನಗೌಡ್ರು ರವರು ಮಾತನಾಡಿ ಕೊರೋನಾ ರೂಪಾಂತರ 2ನೇ ಅಲೆಯು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಲಾಕ್ ಡೌನ್ ಸರ್ಕಾರ ಮಾಡುರುವುದರಿಂದ ಯಾರು ಕೂಡ ದುಡಿಯಲಿಕ್ಕೆ ಹೊರಗೆ ಹೋಗದ ಕಾರಣ ಈ ಬಡಸಮುದಾಯಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದೊಂದಿಗೆ ಎನ್ಎಸ್ ಯು ಐ ವತಿಯಿಂದ ಆಹಾರವನ್ನು ಕೊಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ಹೇಳಿದರು.
ಉಪಸ್ಥಿತಿಯಲ್ಲಿ ಡಿಜಿ ಶಾಂತನ ಗೌಡ್ರು ಮಾಜಿ ಶಾಸಕರು ,ಆರ್ ನಾಗಪ್ಪ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಪ್ರಶಾಂತ ಬಣ್ಣಜ್ಜಿ ,ದರ್ಶನ್, ಮನೋಜ್ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.