ನ್ಯಾಮತಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೋವಿಶೀಲ್ದ್ ಲಸಿಕೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲಾ, ಆದರೇ ಕೋವ್ಯಾಕ್ಸಿನ್ ಸಮಸ್ಯೆ ಇದ್ದು ಹಂತ ಹಂತವಾಗಿ ಲಸಿಕೆ ತರಿಸುವ ವ್ಯವಸ್ಥೆ ಮಾಡುತ್ತಿದ್ದು ಯಾರೂ ಆಂತಕ ಪಡುವ ಅವಶ್ಯಕತೆ ಇಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಲಸಿಕೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನ್ಯಾಮತಿಯ ಆಸ್ಪತ್ರೆಗೆ 50 ಕೋವ್ಯಾಕ್ಸಿನ್ ಕಳುಹಿಸಿ ಕೊಟ್ಟಿದ್ದು, ಕೋವಿಶಿಲ್ದ್‍ಗೆ ನಮ್ಮಲ್ಲಿ ಯಾವುದೇ ತೊಂದರೆ ಇಲ್ಲಾ ಎಂದರು. ಹಂತ ಹಂತವಾಗಿ ಕೋವ್ಯಾಕ್ಸಿನ್ ತರಿಸಿ ಕೊಡುವ ವ್ಯವಸ್ಥೆ ಮಾಡುತ್ತಿದ್ದು ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಎಂದರು.
ಇನ್ನು ಯಾರೇ ಕೆಮ್ಮು,ನೆಗಡಿ,ಜ್ವರ ಎಂದು ಆಸ್ಪತ್ರೆಗೆ ಬಂದರೇ ಕೂಡಲೇ ಅವರಿಗೆ ಕರೋನಾ ಪರೀಕ್ಷೆ ಮಾಡಿಸುವಂತೆ ವೈದ್ಯರಿಗೆ ಸೂಚಿಸಿದ್ದೇನೆ ಎಂದ ಶಾಸಕರು, ಕರೋನಾ ಬಂತೆಂದು ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲಾ ಆತ್ಮಸ್ಥೈರ್ಯ ಇದ್ದರೇ ಕರೋನಾವನ್ನು ಗೆಲ್ಲ ಬಹುದು ಎಂದರು.
ಕರೋನಾ ಎಂಬ ಕೆಟ್ಟ ಕಾಯಿಲೆ ಮನುಕುಲದ ಜೊತೆಗೆ ಆರ್ಥಿಕತೆಗೂ ಬಾರೀ ಪೆಟ್ಟು ನೀಡಿದೇ ಎಂದ ಶಾಸಕರು, ಯಾರೂ ಕೂಡ ಮನೆಯಿಂದ ಅನಾವಶ್ಯಕವಾಗಿ ಹೊರ ಬಾರದೇ ಮನೆಯಲ್ಲೇ ಇರುವಂತೆ ಜನತೆಯಲ್ಲಿ ನಾನು ಕೈಮುಗಿದು ಪ್ರಾರ್ಥಿಸುತ್ತೇನೆ ಎಂದರು.
ಪ್ರತಿನಿತ್ಯ ಕರೋನಾ ತನ್ನ ಹಟ್ಟಹಾಸ ಮೆರೆಯುತ್ತಿದ್ದು ಕರೋನಾದ ನಾಗಾಲೋಟಕ್ಕೆ ಸಾಕಷ್ಟು ಸಾವು ನೋವುಗಳು ಸಂಬಂವಿಸುತ್ತಿದ್ದು ಇನ್ನಾದರೂ ಜನರು ಜಾಗೃತರಾಗಿರಿ ಎಂದರು.
ಅವಳಿ ತಾಲೂಕಿನ ಜನರ ಆರೋಗ್ಯ ನನಗೆ ಮುಖ್ಯ ಅದಕ್ಕಾಗಿ ನಾನು ಹಳ್ಳಿಹಳ್ಳಿಗಳಿಗೆ, ಆಸ್ಪತ್ರೆಗಳಿಗೆ ಪ್ರತಿನಿತ್ಯ ಭೇಟಿ ನೀಡುವ ಕೆಲಸ ಮಾಡುತ್ತಿದ್ದೇನೆ ಎಂದ ಶಾಸಕರು ಕರೋನಾ ಸಮುದಾಯಕ್ಕೂ ಕೂಡ ಹಬ್ಬುತ್ತಿದ್ದು ಜನರು ದಯಮಾಡಿ ಬಂದು ಕರೋನಾ ಪರೀಕ್ಷೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್,ಇಓ ರಾಮಬೋವಿ, ತಹಸೀಲ್ದಾರ್ ತನುಜಾ ಟಿ ಸವದತ್ತು, ಅಜಯ್‍ರೆಡ್ಡಿ, ನಟರಾಜ್, ಸಿ.ಕೆ.ರವಿ, ವೈದ್ಯಾಧಿಕಾರಿ ಆರ್.ಎನ್.ಮೆಣಸಿಕಾಯಿ ಸೇರಿದಂತೆ ಮತ್ತೀತತರರಿದ್ದರು.