ಹೊನ್ನಾಳಿ : ಹಳ್ಳಿಹಳ್ಳಿಗಳಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು ಕೊರೊನಾ ಸೋಂಕಿನ ಪ್ರಮಾಣ ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿದೆ. ಅದೇ ರೀತಿ ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿ ಕೊರೊನಾ ಜಾಗೃತಿ ಮೂಡಿಸಿ ಮಾತನಾಡಿದರು.
ಕೂಲಂಬಿ ಗ್ರಾಮಸ್ಥರೆಲ್ಲರು ಯಾವುದೇ ಜಾತಿಬೇದವಿಲ್ಲದೇ ಪಕ್ಷಾತೀತವಾಗಿ ಗ್ರಾಮದ ಗದ್ದಿಗೇಶ್ವರ ಕಲ್ಯಾಣ ಮಂಟಪವನ್ನು ಐಸೋಲೇಷನ್ ಕೇಂದ್ರವನ್ನಾಗಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಹಳ್ಳಿಹಳ್ಳಿಗಳಲ್ಲೂ ಜನರು ಇದೇ ರೀತಿ ಎಚ್ಚೆತ್ತು ಕೊಂಡು ಕೆಲಸ ಮಾಡಿದ್ದೇ ಆದರೇ ಕೊರೊನಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡ ಬಹುದು ಎಂದರು.
ಕೇವಲ ಸರ್ಕಾರಗಳು ಮಾಡ ಬೇಕೆಂದು ಜನರು ಕೈಕಟ್ಟಿ ಕೂರುವ ಬದಲು ನಮ್ಮ ಜವಬ್ದಾರಿಯನ್ನು ಅರಿತು ಗ್ರಾಮಸ್ಥರೇ ಈ ಕೊರೊನಾ ವಿರುದ್ದ ಹೋರಾಡಲು ಸಂಕಲ್ಪ ಮಾಡ ಬೇಕು, ಆಗಿದ್ದಾಗ ಮಾತ್ರ ಹಳ್ಳಿಹಳ್ಳಿಗಳೂ ಕೊರೊನಾ ಮುಕ್ತವಾಗಲಿದ್ದು ಕೂಲಂಬಿ ಗ್ರಾಮಸ್ಥರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕೂಲಂಬಿ ಗ್ರಾಮದಲ್ಲಿ 38 ಜನರಿಗೆ ಕೊರೊನಾ ಸೋಂಕು ದೃಡ ಪಟ್ಟಿದ್ದು,ಗ್ರಾಮಸ್ಥರೆಲ್ಲಾರೂ ಒಟ್ಟಾಗಿ ಗದ್ದಿಗೇಶ್ವರ ಕಲ್ಯಾಣ ಮಂಟಪವನ್ನು ಐಸೋಲೇಷನ್ ಕೇಂದ್ರ ಮಾಡಿದ್ದು, ಕೊರೊನಾ ತಡೆಗಟ್ಟಲು ಕ್ರಮ ಕೈಗೊಂಡಿದ್ದು ಸಂತೋಷ ತಂದಿದೆ ಎಂದರು.
ಇನ್ನು ಕೆಲ ಗ್ರಾಮಗಳಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿದ್ದರೂ ಜನರು ಮಾತ್ರ ಇನ್ನೂ ಜಾಗೃತರಾಗಿಲ್ಲಾ ಎಂದು ಬೇಸರ ವ್ಯಕ್ತ ಪಡಿಸಿದ ಶಾಸಕರು, ಇನ್ನಾದರೂ ಜನರು ಕೆಮ್ಮು,ನೆಗಡೆ,ಜ್ವರ ಕಾಣಿಸಿಕೊಂಡರೇ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೂಲಂಬಿ ಗ್ರಾಮಸ್ಥರಿದ್ದರು..