ಹೊನ್ನಾಳಿ ; ಕೊರೊನಾ ಸೋಂಕಿನಿಂದ ಮೃತಪಟ್ಟ ಬಡ ಕುಟುಂಬದ ಅಂತ್ಯಸಂಸ್ಕಾರಕ್ಕೆ ಒಂಬತ್ತು ಸಾವಿರ ಸಹಾಯ ಧನ ನೀಡುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಘೋಷಣೆ ಮಾಡಿದ್ದಾರೆ.
ಭಾನುವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು,ರೋಗಿಗಳು ಹಾಗೂ ಲಸಿಕಾ ಕೇಂದ್ರಲ್ಲಿದ್ದ ಸಾರ್ವಜನಿಕರಿಗೆ ಬೆಳಗಿನ ಉಪಹಾರ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ಪಿಪಿ ಕಿಟ್‍ಗೆ ನಾಲ್ಕು ಸಾವಿರ ಹಾಗೂ ಆತನ ಕುಟುಂಬಕ್ಕೆ ಐದು ಸಾವಿರ ಸಹಾಯ ಧನ ನೀಡಿ ಒಂಬತ್ತು ಸಾವಿರ ಸಹಾಯ ಧನವನ್ನು ಇಂದಿನಿಂದ ನೀಡುತ್ತಿರುವುದಾಗಿ ತಿಳಿಸಿದರು.
ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲಾ,ನನ್ನ ಜನಪರ ಹಾಗೂ ಸಾಮಾಜಿಕ ಕಾರ್ಯಗಳೇ ಪ್ರಚಾರ ಆಗುತ್ತಿವೆ ಎಂದ ಶಾಸಕರು, ಜನಪ್ರತಿನಿಧಿಯಾದವರು ಕ್ಷೇತ್ರದ ಜನರಿಗಾಗಿ ಸೇವೆ ಮಾಡುವುದು ನಮ್ಮ ಜವಬ್ದಾರಿ, ಅದನ್ನು ಪ್ರಾಮಾಣಿಕವಾಗಿ ಮಾಡಿದರೇ ಅದೇ ಪ್ರಚಾರವಾಗಲಿದೆ ಎಂದರು.
ನಾನು ಕ್ಷೇತ್ರದ ಜನಪ್ರತಿನಿಧಿಯಾದರೂ ಸಹ ನನ್ನ ಇಡೀ ಕುಟುಂಬದ ಸದಸ್ಯರೂ,ಕಾರ್ಯಕರ್ತರು,ಮುಖಂಡರು, ಕೂಡ ನನ್ನ ಕೆಲಸದಲ್ಲಿ ಕೈ ಜೋಡಿಸುತ್ತಿದ್ದಾರೆ ಎಂದ ಶಾಸಕರು ಅವಳಿ ತಾಲೂಕಿನ ಜನರ ಆರೋಗ್ಯವೇ ನನಗೆ ಮುಖ್ಯ ಎಂದರು.
ನಾನು ಸಚಿವ ಸ್ಥಾನಕ್ಕಾಗಿ ಎಂದು ಆಸೆ ಪಟ್ಟವನ್ನಲ್ಲಾ, ನನ್ನನ್ನ ಕ್ಷೇತ್ರದ ಜನ ಮೂರು ಬಾರೀ ಶಾಸಕನ್ನಾಗಿ ಆಯ್ಕೆ ಮಾಡಿ ಕಳುಯಿಸಿದ್ದಾರೆ, ಅವರ ಋಣ ತೀರಿಸುವುದು ನನ್ನ ಕರ್ತವ್ಯ ಅದಕ್ಕಾಗಿ ಹಗಲಿರುಳೆನ್ನದೇ ಅವರಿಗಾಗೀ ನಾನು ಸೇವೆ ಮಾಡುತ್ತಿದ್ದೇನೆ ಎಂದರು.
ಕೊರೊನಾ ಸೋಂಕಿನಿಂದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯರಿಗೆ ಕರೆ ಮಾಡಿ ಚಿಕಿತ್ಸೆ ಕೊಡಿ ಎಂದು ಹೇಳುವ ಬದಲು ಮೃತ ದೇಹವನ್ನು ನೀಡಿ ಎಂದು ಹೇಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ನಿಜಕ್ಕೂ ದುಖಃ ತರುವ ವಿಚಾರವಾಗಿದೆ. ಇನ್ನಾದರೂ ಜನರು ಅನಗತ್ಯವಾಗಿ ಓಡಾಡುವುದನ್ನು ಬಿಟ್ಟು ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂದು ಪುನರ್ ಉಚ್ಚರಿಸಿದರು.
ಇಡ್ಲೀ ತಯಾರಿಸಿದ ರೇಣುಕಾಚಾರ್ಯ ದಂಪತಿ : ಕೊರೊನಾ ಸೋಂಕಿತರಿಗೆ,ರೋಗಿಗಳಿಗೆ,ಸಾರ್ವಜನಿಕರಿಗೆ ಪ್ರತಿನಿತ್ಯ ಉಪಹಾರದ ವ್ಯವಸ್ಥೆ ಮಾಡಿರುವ ರೇಣುಕಾಚಾರ್ಯ ಇಂದು ಮನೆಯ ಆವರಣದಲ್ಲಿ ಇಡ್ಲಿ ಮಾಡಿಸಿದ್ದರು. ಪತ್ನಿಯೊಂದಿಗೆ ಖುದ್ದು ಇಡ್ಲಿ ಮಾಡಿದ ಶಾಸಕರು, ಸಾರ್ವಜನಿಕರ ಆಸ್ಪತ್ರೆಯಲ್ಲರುವ ಕೊರೋನಾ ಸೋಂಕಿತರು,ಹೊರ ರೋಗಿಗಳು ಹಾಗೂ ಲಸಿಕಾ ಕೇಂದ್ರಲ್ಲಿ ಲಸಿಕೆ ಹಾಕಿಸಿಕೊಳ್ಳಲು ಆಗಮಿಸಿದ ಸಾರ್ವಜನಿಕರಿಗೂ ಉಪಹಾರ ನೀಡಿ ಕೊರೊನಾ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್,ಪುರಸಭಾ ಸದಸ್ಯ ರಂಗಪ್ಪ, ಸಾಬಾನು ಮತ್ತು ಮಾರ್ಜಕಗಳ ಮಂಡಳಿಯ ನಿದೇರ್ಶಕ ಶಿವುಹುಡೇದ್ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *