ದಿನಾಂಕ 16.05.2021 ರಂದು ನ್ಯಾಮತಿ ತಾಲೂಕಿನ ಯುತ್ ಕಾಂಗ್ರೆಸ್ ಪಕ್ಷದ ಹಾಗೂ ನ್ಯಾಮತಿ ಟೌನ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ನ್ಯಾಮತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಕೊರೋನ ವಾರಿಯರ್ಸಗಳಾಗಿ ಶ್ರಮಿಸುತ್ತಿರುವ ನ್ಯಾಮತಿ ಠಾಣೆಯ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಾಸ್ಕ್. ಸ್ಯಾನಿಟೈಜರ್. ನೀರಿನ ಬಾಟಲ್. ಬಿಸ್ಕತ್ ಗಳನ್ನು ನ್ಯಾಮತಿ ಟೌನಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಳು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಚಿಕ್ಕ ದಾದ ಸಹಾಯ ಹಸ್ತವನ್ನು ಚಾಚಿದರು. ಅವರ ಶ್ರಮಕ್ಕೆ ಅಭಿನಂದನೆಗಳನ್ನು ಸಹ ತಿಳಿಸಿದರು .
ಈ ಸಂದರ್ಭದಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷರಾದ ಲೊಕೇಶ್. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಯುನುಸ್ ಬಾಷ. ನ್ಯಾಮತಿ ಟೌನ್ ಕಾಂಗ್ರೆಸ್ ಉಪಾಧ್ಯಕ್ಷರಾದ ಗಂಗಾಧರ್ ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕರಿಬಸಪ್ಪ. ಹಾಗೂ ಯುವ ಕಾಂಗ್ರೆಸ್ ಹಲವು ಸದಸ್ಯರು ಸಹ ಭಾಗವಹಿಸಿದ್ದರು….