ಹೊನ್ನಾಳಿ : ಅವಳಿ ತಾಲೂಕಿನಾಧ್ಯಂತ ಕರೋನಾ ಸೋಂಕು ಹೆಚ್ಚುತ್ತಿದ್ದು ಬೆಸ್ಕಾಂ ನೌಕರರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ನೀಡುವಂತೆ ಸಿಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಬೆಸ್ಕಾಂ ನೌಕರರ ಸಂಘದಿಂದ ಶಾಸಕರ ನಿವಾಸದಲ್ಲಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾತನನಾಡಿ ರೇಣುಕಾಚಾರ್ಯ ಬೆಸ್ಕಾಂ ನೌಕರರನ್ನು ಕೊರೊನಾ ವಾರಿಯರ್ಸ ಎಂದು ಪರಿಗಣಿಸಿ ಪ್ರಥಮ ಹಂತದ ಕೊರೋನಾ ಲಸಿಕೆ ಹಾಕುವುದಕ್ಕೆ ತಾವು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಶೀಘ್ರವೇ ಬೆಸ್ಕಾಂ ನೌಕರರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿ, ಅವರಿಗೂ ಲಸಿಕೆ ಭರವಸೆ ನೀಡಿದ್ದಾರೆ ಎಂದರು.
ಕೊರೊನಾದಂತಹ ಸಂದರ್ಭದಲ್ಲೂ ಬೆಸ್ಕಾಂ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮಳೆ,ಗಾಳಿ,ಚಳಿ ಎನ್ನದೇ ಹಗಲಿರುಳು ಸೇವೆ ಮಾಡುತ್ತಿದ್ದು ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದ ರೇಣುಕಾಚಾರ್ಯ, ಆದಷ್ಟು ಬೇಗ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ಕಾಂತರಾಜ್ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *