ವಿತರಣೆ

ರಾಜ್ಯದಲ್ಲಿ ಕೋವಿಡ್-19 ರ 2ನೇ ಅಲೆ ಸಾಂಕ್ರಾಮಿಕವು
ವ್ಯಾಪಿಸುತ್ತಿರುವ ಕಾರಣ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ
ಅಂಗಡಿ ಮಾಲೀಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಮೇ
ತಿಂಗಳಿನಲ್ಲಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 3
ಕೆ.ಜಿ ರಾಗಿ, 2 ಕೆ.ಜಿ. ಗೋಧಿ, ಅಂತ್ಯೋದಯ ಅನ್ನ (ಎಎವೈ) ಪಡಿತರ
ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 20 ಕೆ.ಜಿ ರಾಗಿ, 15 ಕೆ.ಜಿ ಅಕ್ಕಿಯನ್ನು
ಉಚಿತವಾಗಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ
(ಪಿಎಂಜಿಕೆವೈ) ಅಂತ್ಯೋದಯ ಅನ್ನ (ಎಎವೈ) ಮತ್ತು ಆದ್ಯತಾ
ಕುಟುಂಬದ (ಬಿಪಿಎಲ್) ಪ್ರತಿ ಒಬ್ಬ ಸದಸ್ಯರಿಗೆ ಮೇ ಮತ್ತು ಜೂನ್
ತಿಂಗಳಿಗೆ ಉಚಿತವಾಗಿ 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಹೊಸದಾಗಿ
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಆದ್ಯತಾ ಕುಟುಂಬದ (ಪಿಹೆಚ್‍ಹೆಚ್)
ಪಡಿತರ ಚೀಟಿ ಅರ್ಜಿದಾರರಿಗೆ ಮೇ ಮತ್ತು ಜೂನ್ ತಿಂಗಳ 10 ಕೆ.ಜಿ
ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಆದ್ಯತೇತರ
ಕುಟುಂಬ (ಎನ್.ಪಿ.ಹೆಚ್.ಹೆಚ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಎಪಿಎಲ್
ದರದಲ್ಲಿ ಪಡಿತರ ಖರೀದಿಸಲು ಸಮ್ಮತಿ ಸೂಚಿಸಿರುವ ಅರ್ಜಿಗಳಿಗೆ
ಸಹಾಯಧನಯುಕ್ತ ದರ ಪ್ರತಿ ಕೆ.ಜಿ ಗೆ ರೂ.15 ರಂತೆ ಪ್ರತಿ
ಅರ್ಜಿದಾರರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು. ಸಾರ್ವಜನಿಕರು
ಇದರ ಸದುಪಯೋಗ ಪಡೆದುಕೊಳ್ಳಬೇಕು.
ಪಡಿತರ ಪಡೆಯುವ ಅರ್ಜಿದಾರರು ಆಧಾರ್ ಜೊತೆ
ಜೋಡಿಸಿಕೊಂಡಿರುವ ಮೊಬೈಲ್ ಸಂಖ್ಯೆ ಓಟಿಪಿ ಮುಖಾಂತರ ಅಥವಾ
ಬೆರಳಚ್ಚು ಮುದ್ರೆ (ಬಯೋಮೆಟ್ರಿಕ್) ಮೂಲಕ ಪಡಿತರ
ಪಡೆಯಬಹುದಾಗಿರುತ್ತದೆ. ಈ ವಿಶೇಷ ಸೌಲಭ್ಯವನ್ನು ಸರ್ಕಾರದ
ಆದೇಶದಂತೆ ಕೊರೊನಾ ವೈರಸ್ ತುರ್ತು ಪರಿಸ್ಥಿತಿಯಲ್ಲಿ
ಜಾರಿಗೊಳಿಸಿದ್ದು, ಈ ಸಂಬಂಧ ಜಾರಿಯಲ್ಲಿರುವ ನಿಯಮಗಳಾದ
ಸಾಮಾಜಿಕ ಅಂತರ, ಸ್ವಚ್ಛತೆ ಇತ್ಯಾದಿ ನಿಬಂಧನೆಗಳನ್ನು ತಪ್ಪದೇ
ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *