ಹೊನ್ನಾಳಿ : ಗುರುವಾರದಿಂದ ಶನಿವಾರದವರೆಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಸಂಪೂರ್ಣವಾಗಿ ಲಾಕ್‍ಡೌನ್ ಘೋಷಿಸಿದ್ದು,ಬುಧವಾರ ಬೆಳಗ್ಗೆ 10 ಘಂಟೆಯ ಒಳಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯವಸ್ತುಗಳನ್ನು ಖರೀದಿ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಜನತೆಯಲ್ಲಿ ಮನವಿ ಮಾಡಿದರು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳ ಟಾಸ್ಕ್‍ಪೋರ್ಸ ತುರ್ತು ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಜನರು ಲಾಕ್‍ಡೌನ್‍ಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಗ್ರಾಮಾಂತರ ಪ್ರದೇಶದಲ್ಲಿ ಅತೀ ವೇಗವಾಗಿ ಸಮುದಾಯಕ್ಕೆ ಹರಡಿದ್ದು ಕೊರೊನಾ ನಿಯಂತ್ರಣಕ್ಕೆ ಮೂರು ದಿನ ಸಂಪೂರ್ಣ ಲಾಕ್‍ಡೌನ್ ತೀರ್ಮಾನ ಮಾಡಿದ್ದೇವೆ ಎಂದರು.
ಮೂರು ದಿನಗಳ ಕಾಲ ಹಾಲು,ಪೆಟ್ರೋಲ್,ಮೆಡಿಕಲ್ಸ್‍ಗಳು ಮಾತ್ರ ತೆರೆದಿದ್ದು ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಲಿದೆ ಎಂದ ಶಾಸಕರು, ಜನರು ಅನಗ್ಯವಾಗಿ ಓಡಾಡಿದರೇ ಅಂತಹ ವಾಹನಗಳನ್ನು ಸೀಜ್ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಯಾರಾದರೂ ವಾಹನ ಹಿಡಿದಿದ್ದಾರೆ ಬಿಡಿಸಿ ಎಂದು ಪೋನ್ ಮಾಡಿರೇ ಅಂತಹವರಿಗೆ ಯಾವುದೇ ಕಾರಣಕ್ಕೂ ನಾನು ಸಹಾಯ ಮಾಡುವುದಿಲ್ಲಾ ಎಂದ ಶಾಸಕರು, ಜನರು ಲಾಕ್‍ಡೌನ್ ಸಹಕಾರ ನೀಡುವಂತೆ ಮನವಿ ಮಾಡಿದರು.
ಭಾನುವಾರ ಬೆಳಗ್ಗೆ 10 ಘಂಟೆಯವರೆಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರಯಲಿದ್ದು ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.


ಪ್ರತಿನಿತ್ಯ ಸಾಕಷ್ಟು ಜನರು ಬೆಡ್‍ಕೊಡಸಿ, ಆಕ್ಸಿಜನ್,ವೆಂಟಿಲೇಟರ್ ಕೊಡಿಸಿ ಎಂದು ಪೋನ್ ಮಾಡುತ್ತಿದ್ದು ಅವರಿಗೆ ಬೆಡ್ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದೇನೆ. ಶಿವಮೊಗ್ಗ ಸೇರಿದಂತೆ ದಾವಣಗೆರೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಬೆಡ್ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದೇನೆ ಎಂದ ಶಾಸಕರು ಶಿವಮೊಗ್ಗದಿಂದಿಗೆ ನಿಕಟ ಸಂಬಂಧ ಹೊಂದಿದ ಪರಿಣಾಮ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೊರೊನಾ ಸೋಂಕಿತರಿಗೆ ಬೆಡ್ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಸೋಂಕಿತರಿಗೆ ಬೆಡ್ ಕೊಡಲು ನಿರಾಕರಿಸುತ್ತಿದ್ದರಲ್ಲದೇ, ಚೆಕ್‍ಪೋಸ್ಟ್‍ನಲ್ಲಿ ಆಸ್ಪತ್ರೆಗೆ ಹೋಗುವ ಸ್ಲಿಪ್ ತೋರಿಸಿದರೂ ಪೊಲೀಸರು ಅವರನ್ನು ಶಿವಮೊಗ್ಗಕ್ಕೆ ಹೋಗಲು ಬಿಡುತಿರಲಿಲ್ಲಾ. ವಿಷಯ ತಿಳಿದು ಎಸ್ಪಿ,ಡಿಸಿ,ಡಿಎಚ್‍ಓ ಅವರಿಗೆ ಪೋನ್ ಮಾಡಿ ಇದೇ ಪರಿಸ್ಥಿತಿ ಮುಂದುವರೆಗೆ ಮೆಗ್ಗಾನ್ ಆಸ್ಪತ್ರೆಯ ಮುಂದೆ ಧರಣಿ ಕೂರುವ ಎಚ್ಚರಿಕೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೂ ಅವಳಿ ತಾಲೂಕಿನ ಸೋಂಕಿತರಿಗೆ ಬೆಡ್ ಕೊಡುವ ವ್ಯವಸ್ಥೆಯಾಗಿದೆ ಎಂದರು.
ಸರ್ಕಾರಿ ಅಸ್ಪತ್ರೆಯಲ್ಲಿ ಈಗಾಗಲೇ 45 ಕೊರೊನಾ ಸೋಂಕಿತರು ಆಕ್ಸಿಜನ್ ಬೆಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕ್ಸಿಜನ್ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊದಲು ಕೇವಲ 17 ಸಿಲಿಂಡರ್‍ಗಳಿದ್ದದ್ದನ್ನು ಇದೀಗ 67ಕ್ಕೆ ಏರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವರ್ತಕರಿಗೆ ಎಚ್ಚರಿಕೆ: ದಿನಬಳಕೆ ವಸ್ತುಗಳನ್ನು ವರ್ತಕರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿದ್ದು,ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ವರ್ತಕರು ಮಾರಾಟ ಮಾಡಿದರೇ ಅಂತಹ ಅಂಗಡಿಗಳ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಶಾಸಕರು ವರ್ತಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸನಗೌಡ ಕೋಟೂರ, ತನುಜಾ ಟಿ ಸವದತ್ತಿ, ಸಿಪಿಐ ದೇವರಾಜ್, ಇಓಗಳಾದ ರಾಮಬೋವಿ,ಗಂಗಾಧರ ಮೂರ್ತಿ, ಅವಳಿ ತಾಲೂಕುಗಳು ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *