ಶಿವಮೊಗ್ಗ ಜಿಲ್ಲೆಯ ಸುಮಾರು ಹದಿನೈದು ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಅಳಲಿಗೆ ಸ್ಮಂದಿಸಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರಿಗೆ ಇಂದು ಪತ್ರಿಕಾ ಸಂಪಾದಕರು ಮನವಿ ಸಲ್ಲಿಸಿದರು.
ಕೊರೊನಾದ ಇಕ್ಕಟ್ಟಿನ ಈ ಅವಧಿಯಲ್ಲಿ ಪತ್ರಿಕೆಗಳನ್ನು ಮುದ್ರಿಸುತ್ತಾ, ಸ್ವಸ್ಥ ಸಮಾಜದ ಉಳಿವಿಗಾಗಿ ನಿರಂತವಾಗಿ ಸೇವೆಸಲ್ಲಿಸುತ್ತಿದ್ದೇವೆ. ಪ್ರಸಕ್ತ ಕೊರೊನಾ ಅವಧಿಯಲ್ಲಿ ಪತ್ರಿಕೆಗಳನ್ನು ನಡೆಸುವುದು ಅಲ್ಲಿನ ಸಿಬ್ಬಂದಿಗಳಿಗೆ ಸೌಲಭ್ಯ ಕಲ್ಪಿಸುವುದು ಕಷ್ಟ ಹಾಗೂ ಅಸಾಧ್ಯ ಎನಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ನೆರವು ಕಲ್ಪಿಸಿಲ್ಲ. ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ ಕೆಲ ಪತ್ರಿಕೆಗಳು ಪ್ರಕಟಣೆಯನ್ನು ನಿಲ್ಲಿಸುವ ಹಂತದಲ್ಲಿವೆ. ಈ ಸಂಬಂಧ ಸರ್ಕಾರ ಕೂಡಲೇ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ಪ್ಯಾಕೇಜ್ ನೀಡುವ ಮೂಲಕ ಆರ್ಥಿಕ ನೆರವು ನೀಡುವಂತೆ ಕೋರಿದ್ದಾರೆ.
ಈ ಸಂಬಂಧ ಸರ್ಕಾರದ ಗಮನಸೆಳೆಯಬೇಕಾದ ನಮ್ಮ ಸಂಘಟನೆಗಳು ಮೌನವಾಗಿರುವುದು ನಮ್ಮಲ್ಲಿ ಆತಂಕ ಸೃಷ್ಟಿಸಿದೆ.
ಘನ ಸರ್ಕಾರದ ವತಿಯಿಂದ ಹಾಗೂ ತಾವುಗಳು ವೈಯುಕ್ತಿಕವಾಗಿ ಸಣ್ಣ ಪತ್ರಿಕೆಗಳ ಉಳಿವಿಗಾಗಿ ಹಾಗೂ ಪತ್ರಿಕಾ ಕುಟುಂಬಗಳ ರಕ್ಷಣೆಗೆ ಮುಂದಾಗುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾ ಸಂಪಾದಕರುಗಳಾದ ಜಿ. ಪದ್ಮನಾಭ್, ಎಸ್.ಕೆ. ಗಜೇಂದ್ರ ಸ್ವಾಮಿ, ಜಿ. ಚಂದ್ರಶೇಖರ್, ಬಂಡಿಗಡಿ ನಂಜುಂಡಪ್ಪ, ಮಂಜುನಾಥ್ ಹೆಚ್. ಎನ್, ಸುದೀರ್ ಎಸ್. ವೈ., ಶಿ.ಜು. ಪಾಶಾ ಹಾಗೂ ಇತರರಿದ್ದರು