ಹೊನ್ನಾಳಿ : ಪದೇ ಪದೇ ಸುದ್ದಿಯಲ್ಲಿರುವ ಹೊನ್ನಾಳಿ ತಾಲೂಕು ಆಸ್ಪತ್ರೆ ಇದೀಗ ಮತ್ತೋಮ್ಮೆ ಸುದ್ದಿಯಲ್ಲಿದೆ. ಕಳೆದ ಎರಡು ದಿನಗಳ ಹಿಂದೆ ಆಕ್ಸಿಜನ್ ಸಮಸ್ಯೆಯಿಂದ 20 ಜನ ಕೊರೊನಾ ಸೋಂಕಿತರನ್ನ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪಾರು ಮಾಡಿದ್ದರು, ಇಂದು ಅದೇ ರೀತಿಯ ಪರಿಸ್ಥಿತಿ ಆಸ್ಪತ್ರೆಯಲ್ಲಿ ತಲೆದೋರಿದ್ದು ಶಾಸಕರ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದಂತಾಗಿದೆ.
ಇಂದು ಬೆಳ್ಳಗ್ಗೆ 10.30 ಕ್ಕೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇನ್ನು ಒಂದುವರೆ ಘಂಟೆ ಮಾತ್ರ ಬಾಕೀ ಇದೇ ಎಂಬ ವಿಚಾರ ಶಾಸಕರಿಗೆ ಗೊತ್ತಾಗಿದೆ. ಅಧಿಕಾರಿಗಳೊಂದಿಗೆ ಟಾಸ್ಕ್ ಪೋರ್ಸ್ ಸಭೆಯನ್ನು ಹಮ್ಮಿಕೊಂಡಿದ್ದ ಶಾಸಕರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೂಡಲೇ ತಮ್ಮ ವಾಹನದಲ್ಲಿ ಹರಿಹರದ ದಿ ಸದರನ್ ಗ್ಯಾಸ್ ಏಜೆನ್ಸಿಗೆ ಹೊರಟು ಬಿಟ್ಟರು.
45 ಜನರು ಆಕ್ಸಿಜನ್ ಬೆಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಒಂದುವರೆ ಘಂಟೆಯ ಒಳಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡದೇ ಇದ್ದರೇ ಬಾರೀ ಅನಾವುತ ನಡೆಯುತಿತ್ತು. ಶಾಸಕರ ಸಮಯ ಪ್ರಜ್ಞೆಯಿಂದ ಕೂಡಲೇ ಎಸೈ ಬಸವನಗೌಡ ಬಿರಾದರ್ ಅವರನ್ನು ಮುಂಚಿತವಾಗಿ ಶಾಸಕರು ಹರಿಹರ ಸದರನ್ ಗ್ಯಾಸ್ ಕಳುಹಿಸಿದ್ದರು. ಇದರ ಪರಿಣಾಮ ಜಗಳೂರು ಆಸ್ಪತ್ರೆಯಲ್ಲಿ ಸಿಲಿಂಡರ್ ದಾಸ್ತಾನಿದ್ದು ಜಗಳೂರಿಗೆ ಹೊರಟಿದ್ದ ಹತ್ತು ಸಿಲಿಂಡರ್ ಅನ್ನು ವಾಹನಕ್ಕೆ ತುಂಬಿಕೊಂಡು ಎಸೈ ಬಸವನಗೌಡ ಬಿರಾದರ್ ಎಸ್ಕಾರ್ಟ ಮಾಡಿಕೊಂಡು ಹೊನ್ನಾಳಿಗೆ ಆಗಮಿಸಿದರು. ಎಸೈ ಆಸ್ಪತ್ರೆಗೆ ಬರುವಷ್ಟರಲ್ಲದೇ ಇನ್ನೊಂದು ಸಿಲಿಂಡರ್ ಮಾತ್ರ ಬಾಕಿ ಉಳಿದಿತ್ತು. ಅದು ಕೇವಲ ಅರ್ಧ ಘಂಟೆಗೆ ಮಾತ್ರ ಸಿಲಿಂಡರ್ ಬಾಕಿ ಉಳಿದಿತ್ತು. ಒಂದು ವೇಳೆ ಸಿಲಿಂಡರ್ ಸರಿಯಾದ ಸಮಯಕ್ಕೆ ಬಾರದೇ ಇದಿದ್ದರೇ ಹೊನ್ನಾಳಿ ಆಸ್ಪತ್ರೆಯಲ್ಲಿಂದು ದೊಡ್ಡ ಅನಾಹುತವೊಂದು ನಡೆದು ಹೋಗುತಿತ್ತು.
ಇದಾದ ಬಳಿಕ 21 ಆಕ್ಸಿಜನ್ ಸಿಲಿಂಡರ್‍ಗಳನ್ನು ಖುದ್ದು ಶಾಸಕರು ಎಸ್ಕಾರ್ಟ ಮಾಡಿಕೊಂಡು ಅವುಗಳನ್ನು ಬಾಡಿಗೆ ವಾಹನ ಮಾಡಿಕೊಂಡು ಆಸ್ಪತ್ರೆಗೆ ತಂದರು. ಒಟ್ಟು 31 ಸಿಲಿಂಡರ್ ಆಸ್ಪತ್ರೆಗೆ ತಂದ ಪರಿಣಾಮ ಇದೀಗ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಅಧಿಕಾರಿಗಳಿಗೆ ಅಭಿನಂದನೆ : ಸದರನ್ ಗ್ಯಾಸ್ ಏಜನ್ಸಿಯ ಉಸ್ತುವಾರಿ ಪ್ರಬಾರಿ ಉಪವಿಭಾಗಾಧಿಕಾರಿ ವಿರೇಶ್ ಹಾಗೂ ತಹಸೀಲ್ದಾರ್ ರಾಮಚಂದ್ರಪ್ಪನವರಿಗೆ ಶಾಸಕರು ಪೋನ್ ಮಾಡಿದ ಪರಿಣಾಮ ಜಗಳೂರಿಗೆ ಹೊರಟಿದ್ದ 10 ಆಕ್ಸಿಜನ್ ಸಿಲಿಂಡರ್‍ಗಳನ್ನು ಹೊನ್ನಾಳಿಗೆ ಕಳುಹಿಸಿಕೊಟ್ಟರು. ಜಗಳೂರಿನ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಟಾಕ್ ಇದ್ದ ಪರಿಣಾಮ ಜಗಳೂರಿಗೆ ಹೊರಟಿದ್ದ ಸಿಲಿಂಡರ್ ಅನ್ನು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನೀಡಿದ್ದರಿಂದ ಬಾರೀ ಅನಾಹುತವೊಂದು ತಪ್ಪಿದಂತಾಗಿದ್ದು, ಶಾಸಕರು ಅಧಿಕಾರಿಗಳಿಗೆ ಹೃದಯ ಸ್ಪರ್ಶಿ ಧನ್ಯವಾದ ಸಲ್ಲಿಸಿದರು.
ಭದ್ರಾವತಿಯಿಂದ 25 ಆಕ್ಸಿಜನ್ ಸಿಲಿಂಡರ್ : ಹೊನ್ನಾಳಿ ಆಸ್ಪತ್ರೆಯಲ್ಲಿ ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿರುವುದನ್ನು ಗಮನಿಸಿದ ಶಾಸಕರು ಸಂಸದ ರಾಘವೇಂದ್ರ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಭದ್ರಾವತಿಯಿಂದ 25 ಆಕ್ಸಿಜನ್ ಸಿಲಿಂಡರ್ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಸಂಸದರು ನಾಳೆಯಿಂದ 25 ಸಿಲಿಂಡರ್ ನೀಡಲು ಒಪ್ಪಿದ್ದಾರೆ.
ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೇ : ಶಾಸಕರೊಂದಿಗೆ ಹೊನ್ನಾಳಿಯ ತಹಶೀಲ್ದಾರ್ ಬಸವಗೌಡ ಕೋಟೂರ, ಸಿಪಿಐ ದೇವರಾಜ್, ಎಸೈ ಬಸವನಗೌಡ ಬಿರಾದರ್ ಕೈಜೋಡಿಸಿದ್ದು ಇವರೆಲ್ಲರ ಶ್ರಮದಿಂದ ಇಂದು ನಡೆಯ ಬೇಕಾದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಅಧಿಕಾರ ಕೆಲಸಕ್ಕೆ ಶಾಸಕರು ಶ್ಲಾಘನೆ ವ್ಯಕ್ತ ಪಡಿಸಿದರು.
ಆಕ್ಸಿಜನ್ ಘಟಕಕ್ಕೆ ಭೂಮಿಪೂಜೆ: ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಹೊನ್ನಾಳಿಯ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕ ತಲೆ ಎತ್ತಲಿದ್ದು ಅದಕ್ಕೆ ಶುಕ್ರವಾರ ಭೂಮಿಪೂಜೆ ನಡೆಯಲಿದೆ.ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್ ಹಾಗೂ ತಜ್ಞರ ತಂಡ ಭೂಮಿಪೂಜೆಯಲ್ಲಿ ನೆರವೇರಿಸಲಿದ್ದಾರೆ.
25 ಕನ್ಸಂಟ್ರೇಟರ್ : ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಇನ್ನೇರಡು ದಿನಗಳಲ್ಲಿ 25 ಆಕ್ಸಿಜನ್ ಕನ್ಸಂಟ್ರೇಟರ್‍ಗಳನ್ನು ತುರ್ತಾಗಿ ಬೆಂಗಳೂರಿನಿಂದ ತರಿಸುವ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಹೆಚ್ಚಿನ ವೆಂಟಿಲೇಟರ್‍ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.
ಈ ಸಂದರ್ಭ ತಹಶೀಲ್ದಾರ್ ಬಸನಗೌಡ ಕೋಟೂರ, ಸಿಪಿಐ ದೇವರಾಜ್, ಎಸೈ ಬಸವನಗೌಡ ಬಿರಾದರ್, ವೈದ್ಯಾಧಿಕಾರಿ ಚಂದ್ರಪ್ಪ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಗಳಿದ್ದರು.

Leave a Reply

Your email address will not be published. Required fields are marked *