ಹೊನ್ನಾಳಿ : ಸೋಂಕು ದೃಡಪಟ್ಟ ಯಾರೇ ಆಗಲಿ ಮುಜುಗರ ಮಾಡಿಕೊಳ್ಳದೆ ಮೊದಲು ಕರೋನಾ ಪರೀಕ್ಷೆ ಮಾಡಿಸಿಕೊಳ್ಳಿ,ಇದರಿಂದ ನಿಮ್ಮ ಕುಟುಂಬವನ್ನು ಕಾಪಾಡಬಹುದು ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂದೂರು ಗ್ರಾ.ಪಂ.ವತಿಯಿಂದ ಹಮ್ಮಿಕೊಂಡಿದ್ದ ಕರೋನಾ ವಿರುದ್ದ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಿಡ್ನಿ,ಹೃದಯ ಹಾಗೂ ಇನ್ನೀತರ ಮಾರಾಣಾಂತಿಕ ಖಾಯಿಲೆ ಬಂದಾಗ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ರೀತಿ, ಕೊರೊನಾವನ್ನು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ,ಇದಕ್ಕೆ ಮುಜುಗರ ಪಟ್ಟುಕೊಳ್ಳುವ ಅಗತ್ಯ ಇಲ್ಲ ಎಂದರು.
ಪ್ರತಿ ಗ್ರಾಮದಲ್ಲಿ ಕೊರೋನಾ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮಪಂಚಾಯಿತಿಗಳು ಹಮ್ಮಿಕೊಂಡು ಜನರಿಗೆ ಕೊರೊನಾ ಜಾಗೃತಿ ಮೂಡಿಸಿ ಬೇಕೆಂದ ಶಾಸಕರು,ಒಂದು ವೇಳೆ ನಿಮ್ಮ ಗ್ರಾಮದಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಸೋಂಕು ಹರಡಿದ್ದರೆ ಅವರ ಮನವೊಲಿಸಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದಕ್ಕೆ ತಾವು ಸಹಕಾರ ನೀಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ನಗರ,ಪಟ್ಟಣ ಹಾಗೂ ಗ್ರಾಮೀಣ ಪ್ರದೇಶವೇ ಇರಲಿ ಯಾರೂ ಸಹ ಅನಗತ್ಯವಾಗಿ ಹೊರ ಬರಬೇಡಿ ಇದರಿಂದ ನಿಮ್ಮ ಆರೋಗ್ಯಕ್ಕೆ ಸಂಚಕಾರ ಬಂದರೂ ಬರಬಹುದು ದಯಮಾಡಿ ಹೊರ ಬರುವ ಮುನ್ನ ನೂರು ಬಾರಿ ಯೋಚಿಸಿ, ಶಾರೀರಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿ ಇದರಿಂದ ಕರೋನಾ ಸೋಂಕು ಹರಡುವುದು ತಪ್ಪುತ್ತೆ ಎಂದು ಹೇಳಿದರು.
ತಿಮ್ಲಾಪುರ ತಾಂಡ ; ತಾಲೂಕಿನ ತಿಮ್ಲಾಪುರ ತಾಂಡದಲ್ಲಿ ಮೂರು ಜನರಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಅಲ್ಲದೆ ತಾಂಡದ ಬಹುತೇಕರಿಗೆ ಶೀತ,ಕೆಮ್ಮು ಹಗೂ ಜ್ವರ ಇದೆ ತಾಂಡಕ್ಕೆ ಬನ್ನಿ ಸಾರ್ ಎಂದು ಗ್ರಾ.ಪಂ.ಸದಸ್ಯರೊಬ್ಬರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಮ್ಲಾಪುರ ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಕೂಡಲೆ ವೈದ್ಯಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಮಂಗಳವಾರ ಇಡೀ ತಾಂಡದಲ್ಲಿ ಎಲ್ಲರಿಗೂ ಕೊರೋನಾ ಟೆಸ್ಟ್ ಮಾಡಲ್ಲಿಕ್ಕೆ ವೈದ್ಯಕೀಯ ತಂಡ ಕಳುಹಿಸಿಕೊಂಡಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಅವರಿಗೆ ಸೂಚಿಸಿದರು.
ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಶಾಸಕರು,ಸೋಂಕು ಹರಡಿದರೆ ಮನೆಯ ಎಲ್ಲರಿಗೂ ಅನಾರೋಗ್ಯ ಉಂಟಾಗಿ ಬಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ದಯಮಾಡಿ ಎಲ್ಲರೂ ಮಂಗಳವಾರ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು.
ಕುಂದುರು ಗ್ರಾ.ಪಂ.ಅಧ್ಯಕ್ಷ ಚಿದಾನಂದಮುರ್ತಿ,ಉಪಾಧ್ಯಕ್ಷ ಲತಾ,ಸದಸ್ಯರಾದ ರೇಖಾ,ಮಂಜುಳಾ, ಕವಿತಾ,ನೇತ್ರಾವತಿ,ನುಸರತ್,ಜಬೀನ್,ಉದಯಕುಮಾರ,ಧನಂಜಯ,ಸುರೇಶ್,ಆಂಜನೇಯ,ರಹಮತ್ಉಲ್ಲಾ,ಪ್ರಸನ್ನಕುಮಾರ್,ಉಪತಹಸೀಲ್ದಾರ್ ಮಂಜುನಾಥ್ ಇಂಗಳಗೊಂದಿ,ಪಿಡಿಒ ರುಬಿನಾಜ್ ಹಾಗೂ ಇತರರು ಇದ್ದರು.
ಚಿತ್ರಸುದ್ದಿ ; ತಾಲೂಕಿನ ಕುಂದೂರು ಗ್ರಾ.ಪಂ.ವತಿಯಿಂದ ಹಮ್ಮಿಕೊಂಡಿದ್ದ ಕರೋನಾ ವಿರುದ್ದ ಜಾಥ ಕಾರ್ಯಕ್ರಮಕ್ಕೆ ಸಿ.ಎಂ.ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು.