ಹೊನ್ನಾಳಿ : ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯೊಂದಿಗೆ 13 ಮಂದಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುಪ್ಪವೃಷ್ಟಿ ಸುರಿಸಿ, ಸಿಹಿ ಹಂಚಿ ಬಿಳ್ಕೋಟ್ಟ ಘಟನೆ ತಾಲೂಕು ಆಸ್ಪತ್ರೆಯಲ್ಲಿ ಆವರಣದಲ್ಲಿ ನಡೆದಿದೆದ.
ಪ್ರತಿನಿತ್ಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಕಾಣುತ್ತಿದ್ದ ರೇಣುಕಾಚಾರ್ಯ ಇಂದು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಗುಣರಾಗಿ ಮನೆಗೆ ತೆರಳಿದ 13 ಜನರನ್ನು ಕಂಡು ಒಂದು ಕ್ಷಣ ಬಾವುಕರಾದರು. ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದರ ಮದ್ಯೆಯೂ 13 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳುತ್ತಿರುವುದು ನಿಜಕ್ಕೂ ಸಂತಸ ಉಂಟು ಮಾಡಿದೆ ಎಂದರು.
ಪ್ರತಿ ನಿತ್ಯ ಬೆಡ್ ಕೊಡಿಸಿ,ವೆಂಟಿಲೇಟರ್ ಕೊಡಿಸಿ,ಆಕ್ಸಿಜನ್ ಕೊಡಿಸಿ,ಸಾರ್ ನನ್ನ ಮಗನ ಜೀವ ಉಳಿಸಿ ಎಂದು ಕರೆಗಳು ಮಾತ್ರ ಬರುತಿತ್ತು ಆದರೆ ಸೋಮವಾರ ವೈದ್ಯರ ತಂಡ ದೂರವಾಣಿ ಮಾಡಿ 13 ಜನ ಸೋಂಕಿತರು ಗುಣಮುಖರಾಗಿದ್ದಾರೆ ಎಂದಾಗ ಕೂಡಲೆ ಆಸ್ಪತ್ರೆಗೆ ದಾವಿಸಿ ಅವರಿಗೆ ಪುಷ್ಪವೃಷ್ಟಿ ಸುರಿಸಿ ಸಿಹಿ ಹಂಚಿ ಮನೆಗೆ ಕಳುಹಿಸಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದರು.
ಸೊಂಕಿತರು ಗುಣಮುರಾಗಿ ಮನೆಗೆ ಹೋದಾಗ ಒಂದು ವಾರ ಮನೆಯಲ್ಲೇ ಇರಿ ಯಾರೂ ಸಹ ಮನೆಯಿಂದ ಹೊರ ಬರಬೇಡಿ, ನಿಮ್ಮ ಗ್ರಾಮದಲ್ಲಿ ಯಾರಾದರೂ ಸೋಂಕಿತರು ಇದ್ದರೆ ಅವರಿಗೆ ದೈರ್ಯ ಹೇಳಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲ್ಲಿಕ್ಕೆ ಹೇಳಿ ಎಂದರು.
ಸರ್ಕಾರದ ಹೊಸ ಮಾರ್ಗಸೂಚಿಯಂತೆ ಕೊರೋನಾ ಸೋಂಕಿತರು ಮನೆಯಲ್ಲಿ ಯಾರೂ ಐಸೋಲೇಷನ್ ಮಾಡಬೇಡಿ ಎಲ್ಲರನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿ,ಇಲ್ಲದಿದ್ದರೆ ಸೋಂಕು ಮನೆಯ ಕುಟುಂಬಸ್ಥರಿಗೂ ಹರಡಬಹುದು ಎಂದರು. ಈ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದ್ದರೂ ಲಕ್ಷಣಗಳಿಲ್ಲದಿದ್ದರೆ ಅವರನ್ನು ಹೋಂ ಐಸೋಲೇಷನ್ ಮಾಡಲಾಗುತಿತ್ತು,ಆದರೆ ಇದರಿಂದ ಕುಟುಂಬಸ್ಥರಿಗೂ ಕೊರೋನಾ ಸೋಂಕು ದೃಢಪಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಯಾರಿಗೂ ಹೋಂ ಐಸೋಲೇಷನ್‍ಗೆ ಅವಕಾಶವನ್ನು ಅವಕಾಶ ನೀಡಿಲ್ಲ ಎಂದು ವಿವರಿಸಿದರು.
ಸೋಮವಾರ ಮದ್ಯಾಹ್ನ ಆಕ್ಸಿಜನ್ ಕೊರತೆಯಾಗಬಹುದೆಂಬ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳನ್ನು ದೂರಾವಾಣಿ ಮುಖಾಂತರ ಸಂಪರ್ಕಿಸಿ ಕೂಡಲೆ 45 ಆಕ್ಸಿಜನ್ ಕಳುಹಿಸಿಕೊಡಿ ಎಂದು ಶಾಸಕರು ಸೂಚಿಸಿದ್ದು ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಸಂಜೆ 4 ರ ವೇಳೆಗೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
ಸೋಂಕಿತ ಮಹಿಳೆಯಿಂದ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ; ಸೋಮವಾರ ಕರೋನಾ ಸೋಂಕಿನಿಂದ ಗುಣಮುಖರಾದ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ಮಹಿಳೆಯೊಬ್ಬರು
ಶಾಸಕರನ್ನ ಹಾಡಿ ಹೊಗಳಿದರು. ಸಾರ್ ನಿಜಕ್ಕೂ ನಾವು ಧನ್ಯರು,ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನೀವು ಒಂದು ನಿಮಿಷವೂ ಮನೆಯಲ್ಲಿ ಕೂರದೆ ಕೊರೋನಾ ಸೋಂಕಿತರ ಬಗ್ಗೆ ಪ್ರತಿನಿತ್ಯ ಆಸ್ಪತ್ರೆಗೆ ಬಂದು ಯೋಗಕ್ಷೇಮ ವಿಚಾರಿಸಿಕೊಳ್ಳುವುದಲ್ಲದೆ ಉಪಹಾರ ನೀಡಿ,ಕುಟುಂಬದವರಂತೆ ಕೆಲಸ ಮಾಡುತ್ತಿದ್ದರಿ, ನಮ್ಮ ಕುಟುಂಬದವರೇ ಆಸ್ಪತ್ರೆಗೆ ಬಂದು ನಮ್ಮನ್ನು ಮಾತನಾಡಿಸಲು ಹಿಂದೇಟು ಹಾಕುತ್ತಿದ್ದಾರೆ ಅಂತಹುದರಲ್ಲಿ ನೀವು ಕರೋನಾ ಸೋಂಕಿತರು ಇರುವ ಎಲ್ಲಾ ವಾರ್ಡಿಗೆ ಬಂದು ನಮ್ಮೆಲ್ಲರ ಯೋಗಕ್ಷೇಮ ವಿಚಾರಿಸುತ್ತಿದ್ದಿರಿ ನಿಮಗೆ ಧನ್ಯವಾದಗಳು ಸಾರ್ ಎಂದರಲ್ಲದೇ ನಿಮ್ಮಂತಹ ಶಾಸಕರು ಪಡೆದ ನಾವೇ ಧನ್ಯರು ಮುಂದೆಯೂ ನೀವೆ ಶಾಸಕರಾಗ ಬೇಕೆಂದು ಹಾರಿ ಹೊಗಳಿದರು.
ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್,ಸಾರ್ವಜನಿಕ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಚಂದ್ರಪ್ಪ,ಫಿಜಿಶೀಯನ್ ಡಾ.ರಾಜ್‍ಕುಮಾರ್,ಪಿಎಸೈ ಬಸವನಗೌಡ ಬಿರಾದರ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

You missed