ಶಿವಮೊಗ್ಗ : ಕೋವಿಡ್-19 ಲಾಕ್ಡೌನ್ ನಿಂದ ಬಳಲಿದ ಬದಕುಗಳಿಗೆ “ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಟ್ಸ್ ನ ಜಿಲ್ಲಾ ಘಟಕದಿಂದ ವಿಶೇಷವಾಗಿ ಸಿದ್ದಗೊಳಿಸಿದ “ಪುಡ್ ಕಿಟ್” ಗಳನ್ನು ನೇರವಾಗಿ ಜೆಸಿ ನಗರದ ಸಾಲು ಮನೆಗಳಿಗೆ ವಿತರಿಸಲಾಯಿತು.
ಪುಡ್ ಕಿಟ್ ವಿತರಿಸಿ ಮಾತನಾಡಿದ ಘಟಕದ ಜಿಲ್ಲಾಧ್ಯಕ್ಷರಾದ ಸಿಗ್ಬತ್ ಉಲ್ಲಾರವರು ಹಸಿವು ಮನುಷ್ಯನಿಗೆ ಆತಂಕಗೊಳಿಸುತ್ತದೆ, ಮಾನಸಿಕವಾಗಿ ನೋವುಗಳನ್ನು ತುಂಬುತ್ತದೆ ಇಂತಹ ಸಂದರ್ಭಗಳಲ್ಲಿ ಮಾನವೀಯ ಸೇವೆಗಳು ಅನಿವಾರ್ಯವಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈಗಾಗಲೇ ವಿವಿಧ ಹಂತಗಳಲ್ಲಿ ಅಗತ್ಯವಿರುವ ಬಡ ಕುಟುಂಬಗಳನ್ನು ಗುರುತಿಸಿ ನಗರದಲ್ಲಿ ನೀಡಲಾಗುತ್ತಿರುವ “ಪುಡ್ ಕಿಟ್” ಗಳಿಂದ ಒಂದಿಷ್ಟು ದಿವಸಗಳಾದರು ಹಸಿವು ನೀಗಿಸುತ್ತದೆ ಎನ್ನುವ ಆತ್ಮತೃಪ್ತಿ ಇದೆ.
ಹಸಿವಿಗೆ ಯಾವ ಜಾತಿ-ಮತ-ಪಂಥಗಳ ಬೇದವಿಲ್ಲ ಎಲ್ಲರನ್ನು ಕಾಡುತ್ತದೆ ಇದೊಂದು ಜ್ವಲಂತ ಸಮಸ್ಯೆಗಳಾಗಿ. ಪೀಡನೆಯಾಗಿ ಜನಸಮುದಾಯವನ್ನು ಅಸ್ಥವ್ಯಸ್ತಗೊಳಿಸುತ್ತಿರುವ ಕೊರೋನಾ ವ್ಯಾದಿಯನ್ನು ನಾವುಗಳು ಧೈರ್ಯದಿ ಎದುರಿಸಬೇಕಿದೆ, ಎಷ್ಟೆ ಅಲೆಗಳು ಬರಲಿ ಸೇವೆ ಸಲ್ಲಿಸುವ ಮನಸುಗಳು ಮುಕ್ತವಾಗಿರಬೇಕು ಎಂದು ಸಿಗ್ಬತ್ ಉಲ್ಲಾರವರು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಾರಾ.ಶ್ರೀನಿವಾಸ್, ಮಲ್ನಾಡ್ ಪುಟ್ವೇರ್ ಮಾಲೀಕರಾದ ಇಮ್ರಾನ್ ಮಲ್ನಾಡ್, ಗೋಲ್ಡ್ ಸ್ಮಿತ್ ಅನಿಲ್ ರವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *