ದರಪಟ್ಟಿ ಆಹ್ವಾನ

ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ
ಹಿನ್ನೆಲೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ವಿವಿಧ ಔಷಧಿಗಳು,
ರಾಸಾಯನಿಕ, ಪರಿಕರ, ಸಲಕರಣೆಗಳು, ವೈದ್ಯಕೀಯ
ಸಾಮಗ್ರಿಗಳನ್ನು ಎಸ್‍ಡಿಆರ್‍ಎಫ್ ನಿಧಿಯಿಂದ ಖರೀದಿಸಲಾಗುತ್ತಿದ್ದು,
ಪೂರೈಕೆ ಸಂಸ್ಥೆಗಳಿಂದ ಜಿಲ್ಲಾಧಿಕಾರಿಗಳು ದರಪಟ್ಟಿ
ಆಹ್ವಾನಿಸಿರುತ್ತಾರೆ.
ಕೋವಿಡ್ ಸೋಂಕು ತಡೆಗಟ್ಟುವಿಕೆಗೆ ಹಾಗೂ ನಿಯಂತ್ರಣಕ್ಕೆ
ಬೇಕಾಗುವ ಅವಶ್ಯ ಸಾಮಗ್ರಿಗಳನ್ನು ಎಸ್‍ಡಿಆರ್‍ಎಫ್ ನಿಧಿಯಿಂದ
ನೇರವಾಗಿ ಖರೀದಿಸಲು ಸರ್ಕಾರ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ
ನೀಡಿರುತ್ತದೆ. ತುರ್ತು ವೈದ್ಯಕೀಯ ಸಾಮಗ್ರಿಗಳ ನಿರ್ವಹಣಾ
ಸಮಿತಿ ಶಿಫಾರಸ್ಸಿನಂತೆ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧೀನಕ್ಕೆ ಒಳಪಡುವ
ಆರೋಗ್ಯ ಸಂಸ್ಥೆಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡು
ಕಾರ್ಮಿಕ ವಿಮಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸಿಹೆಚ್‍ಸಿ
ಕೇಂದ್ರಕ್ಕೆ ಅವಶ್ಯವಿರುವ 128 ಬಗೆಯ ವಿವಿಧ ಔಷಧಿಗಳು
ರಾಸಾಯನಿಕ, ಪರಿಕರ, ಸಲಕರಣೆಗಳು, ವೈದ್ಯಕೀಯ
ಸಾಮಗ್ರಿಗಳನ್ನು ಖರೀದಿಸಲು ವಿವಿಧ ಸಂಸ್ಥೆಗಳಿಂದ ದರಪಟ್ಟಿ
ಆಹ್ವಾನಿಸಲಾಗಿದೆ. ದರ ನಮೂದಿಸಿದ ಮುಚ್ಚಿದ ಲಕೋಟೆಗಳನ್ನು
ಮೇ. 20 ರ ಮಧ್ಯಾಹ್ನ 1-30 ಗಂಟೆಯ ಒಳಗಾಗಿ ಜಿಲ್ಲಾಧಿಕಾರಿಗಳು
ಹಾಗೂ ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ,
ದಾವಣಗೆರೆ ಇವರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ
ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *