ಕ್ರಮ ಹಾಗೂ ದಂಡ
ಕೋವಿಡ್-19 ರ ಸಂಕಷ್ಟ ಪರಿಸ್ಥಿತಿಯನ್ನು ದುರುಪಯೋಗ
ಪಡಿಸಿಕೊಂಡು ಎಂ.ಆರ್.ಪಿ ಜೊತೆಗೆ ತಯಾರಕರ, ಆಮದುದಾರರ
ಪೂರ್ಣವಿಳಾಸ ಗ್ರಾಹಕರು ಸಂಪರ್ಕಿಸಬಹುದಾದ ದೂರವಾಣಿ,
ಆಮದಾದ, ತಯಾರಾದ ತಿಂಗಳು, ವರ್ಷ, ಈ ಎಲ್ಲಾ ಕಡ್ಡಾಯ
ಘೋಷಣೆಗಳಿಲ್ಲದ ಆಕ್ಸಿಮೀಟರ್‍ಗಳನ್ನು ನಗರದ ಪ್ರಮುಖ
ಫಾರ್ಮಸಿ ಹಾಗೂ ಸರ್ಜಿಕಲ್ ಷಾಪ್‍ಗಳಲ್ಲಿ ಮಾರಾಟ ಮಾಡುತ್ತಿದ್ದನ್ನು
ಪತ್ತೆ ಹಚ್ಚಿದ ಕಾನೂನು ಮಾಪನ ಶಾಸ್ತ್ರ ಇಲಾಖಾ ಸಹಾಯಕ
ನಿಯಂತ್ರಕ ಹೆಚ್. ಎಸ್.ರಾಜು ನೇತೃತ್ವದ ತಂಡ ಅನಧಿಕೃತ
ಆಕ್ಸಿಮೀಟರ್‍ಗಳನ್ನು ಜಪ್ತಿಮಾಡಿ, ದಂಡ ವಿಧಿಸಿದೆ.
ಈ ಸಂದರ್ಭದಲ್ಲಿ ಫಾರ್ಮಸಿ, ಸರ್ಜಿಕಲ್ಸ್, ನ್ಯಾಯಬೆಲೆ
ಅಂಗಡಿಗಳು, ಕಿರಾಣಿ ಅಂಗಡಿಗಳ ಮೇಲೆ ಸುಮಾರು 50 ಕ್ಕೂ
ಹೆಚ್ಚು ವಿಶೇಷ ತಪಾಸಣೆಗಳನ್ನು ನಡೆಸಿ, 16
ಮೊಕದ್ದಮೆಗಳನ್ನು ದಾಖಲಿಸಿ ರೂ.80 ಸಾವಿರ ದಂಡ ವಿಧಿಸಲಾಗಿದೆ.
ಅಲ್ಲದೆ ಸಂಬಂಧಿಸಿದ ವ್ಯಾಪಾರಿ ಸಮುದಾಯಕ್ಕೆ ನೈತಿಕ ವ್ಯಾಪಾರಧರ್ಮ
ಪಾಲಿಸುವಂತೆ ಎಚ್ಚರಿಕೆ ನೀಡಿ ಗ್ರಾಹಕರರಿಗೆ ಸಂಭವಿಸಬಹುದಾದ
ಮೋಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೀವ್ರ ನಿಗಾವಹಿಸಲಾಗಿದೆ.
ದೂರುಗಳಿಗೆ 8050024760 ಸಂಪರ್ಕಿಸಬಹುದು ಎಂದು ಇಲಾಖೆಯ
ಸಹಾಯಕ ನಿಯಂತ್ರಕ ಹೆಚ್.ಎಸ್. ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.