ಹೊನ್ನಾಳಿ : ದಾವಣಗೆರೆಯ ಕೆಲ ಖಾಸಗೀ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಬೆಡ್‍ಗಳನ್ನು ಕೊರೊನಾ ಸೋಂಕಿತರಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಯಾವ ಆಸ್ಪತ್ರೆಯಲ್ಲೂ ಶೇ 50 ರಷ್ಟು ಬೆಡ್‍ಗಳನ್ನು ಸೋಂಕಿತರಿಗೆ ನೀಡುತ್ತಿಲ್ಲಾ, ಈ ಬಗ್ಗೆ ಜಿಲ್ಲಾಉಸ್ತುವಾರಿ ಸಚಿವರು ತನಿಖೆ ನಡೆಸ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಕೋರೊನಾ ಸೋಂಕಿತರ ಪರೀಕ್ಷೆ ನಡೆಸುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದಿನೇ ದಿನೇ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಕೆಲ ಖಾಸಗೀ ಆಸ್ಪತ್ರೆಗಳು ಶೇ 50 ರಷ್ಟು ಬೆಡ್‍ಗಳನ್ನು ಕೋವಿಡ್ ಸೋಂಕಿತರಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು ಇದೂವರೆಗೂ ಯಾವ ಯಾವ ಆಸ್ಪತ್ರೆಗಳು ಎಷ್ಟು ಬೆಡ್ ನೀಡಿವೆ ಎಂಬ ಮಾಹಿತಿ ಪಡೆದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸಮಗ್ರ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದರು.
ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯಾವ ಆಸ್ಪತ್ರೆಯಲ್ಲಿ ಶೇ 50 ರಷ್ಟು ಬೆಡ್ ನೀಡಿಲ್ಲವೋ ಅಂತಹ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಹೊನ್ನಾಳಿ ಸಾಮಥ್ರ್ಯ ಸೌಧದಲ್ಲಿ ಪಿಡಿಓಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಕೊರೊನಾ ಸೋಂಕು ಕೇವಲ ನಗರಕ್ಕೆ ಸೀಮಿತವಾಗದೇ ಗ್ರಾಮದ ಪತೀ ಮನೆ ಮನೆಗೂ ಹರಡುತ್ತಿದೆ. ಹಾಗಾಗೀ ಕೊರೊನಾ ಸೋಂಕಿನ ಚೈನ್ ಲಿಂಕ್ ಕಟ್ ಮಾಡುವ ಉದ್ದೇಶದಿಂದ ಅನಿವಾರ್ಯವಾಗಿ ಅವಳಿ ತಾಲೂಕಿನಲ್ಲಿ ಸತತ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಪ್ರತಿಯೊಬ್ಬರು ಲಾಕ್‍ಡೌನ್‍ಗೆ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಪಿಡಿಓಗಳೂ ಸಹ ಪ್ರತಿ ಗ್ರಾಮದಲ್ಲೂ ಲಾಕ್‍ಡೌನ್ ಯಶಸ್ವಿಯಾಗುವಂತೆ ನೋಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ರೈತಪರ ಚಟುವಟಿಕೆಗಳಿಗೆ ಯಾವುದೇ ರೀತಿಯಾಗಿ ಅಡ್ಡಿ ಪಡಿಸದಂತೆ ರೈತರಿಗೆ ತೊಂದರೆ ನೀಡ ಬಾರದು ಎಂದ ಶಾಸಕರು ಮೆಡಿಕಲ್ ಶಾಪ್,ಹಾಲಿನ ಡೈರಿ ಹಾಗೂ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು ಅಂಗಡಿ ಮುಂಗಟ್ಟುಗಳು,ಹೋಟೆಲ್‍ಗಳು ಸೇರಿದಂತೆ ಎಲ್ಲವೂ ಸಂಪೂರ್ಣ ಬಂದ್ ಮಾಡಿಸಿ ಲಾಕ್‍ಡೌನ್ ಯಶಸ್ವಿ ಮಾಡುವಂತೆ ಸೂಚಿಸಿದರು.
ಕೈಮುಗಿಯುತ್ತೇನೆ ಹೊರ ಬರ ಬೇಡಿ : ಮೂರು ದಿನಗಳ ಕಾಲ ಅವಳಿ ತಾಲೂಕನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡುತ್ತಿದ್ದು ನಿಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ ದಯಮಾಡಿ ಯಾರೂ ಮನೆಯಿಂದ ಹೊರ ಬರ ಬೇಡಿ, ಲಾಕ್‍ಡೌನ್ ಮಾಡುತ್ತಿರುವುದು ನಮಗಾಗೀ ಅಲ್ಲಾ ಎಲ್ಲರ ಆರೋಗ್ಯಕ್ಕಾಗಿ ಎಂದರು.
ಮೂರುದಿನ ಲಾಕ್‍ಡೌನ್ ಮಾಡುತ್ತಾರೆಂಬ ವಿಚಾರ ತಿಳಿಯುತ್ತಿದ್ದಂತೆ ಜನರು ಅಗತ್ಯವಸ್ತುಗಳ ಖರಿದೀಗೆ ಮುಗಿ ಬಿದಿದ್ದರು. ಸಾಮಾಜಿಕ ಅಂತರವಿಲ್ಲದೇ ಮಾಸ್ಕ ಇಲ್ಲದೇ ಜನರು ಓಡಾಡುತ್ತಿದ್ದು ಸ್ವತಃ ಶಾಸಕರೇ ಧ್ವನಿ ವರ್ಧಕದ ಮೂಲಕ ಹೊನ್ನಾಳಿ ನಗರದ ಪ್ರಮುಖ ರಸ್ತೆಯಲ್ಲಿ ಓಡಾಡಿ ಮನವಿ ಮಾಡಿದರು. ಕೈಮುಗಿದು ಪ್ರಾರ್ಥಿಸುತ್ತೇನೆ ದಯಮಾಡಿ ಮನೆಗೆ ಹೋಗಿ, ಕೊರೊನಾವನ್ನು ವಿನಾಃ ಕಾರಣ ಮನೆಗೆ ಬರ ಮಾಡಿಕೊಳ್ಳ ಬೇಡಿ ಎಂದು ವಿನಂತಿಸಿ ಕೊಂಡರು.
ಕೂಲಂಬಿ ಗ್ರಾಮಕ್ಕೆ ಭೇಟಿ : ಕೂಲಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಕೋವಿಡ್ ಲಸಿಕೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಗ್ರಾಮದ ಮನೆಗಳಿಗೆ ಭೇಟಿ ನೀಡಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿ ಹೇಳಿದರು.
ಈ ಸಂದರ್ಭ ತಹಸೀಲ್ದಾರ್ ಬಸನಗೌಡ ಕೋಟುರ, ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಸಿಪಿಐ ದೇವರಾಜ್,ಪಿಸೈಐ ಬಸವನಗೌಡ ಬಿರಾದರ್, ಪುರಸಭಾ ಸದಸ್ಯರಾದ ಬಾಬು ಹೋಬಳದಾರ್, ರಂಗಪ್ಪ,ತಾ.ಪಂ ಸದಸ್ಯ ಶಿವಾನಂದ್,ಪುರಸಭಾ ಮುಖ್ಯಾಧಿಕಾರಿ ಅಶೋಕ್, ಪಕ್ಷದ ಮುಖಂಡರಾದ ಕೆ.ವಿ.ಚನ್ನಪ್ಪ, ಮಹೇಶ್ ಹುಡೇದ್, ಚಂದ್ರು ಸೇರಿದಂತೆ ಮತ್ತೀತರರರಿದ್ದರು.